Asianet Suvarna News Asianet Suvarna News

ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಗಳು ರಿಲ್ಯಾಕ್ಸ್‌

  • ಕೋವಿಡ್‌ ಕಾರಣ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆದ ದಸರಾ ಮಹೋತ್ಸವ
  • ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಗಳು ರಿಲ್ಯಾಕ್ಸ್‌ 
Dasara Elephants in relax mood  snr
Author
Bengaluru, First Published Oct 17, 2021, 9:51 AM IST
  • Facebook
  • Twitter
  • Whatsapp

ಬಿ. ಶೇಖರ್‌ ಗೋಪಿನಾಥಂ

ಮೈಸೂರು (ಆ.17): ಕೋವಿಡ್‌ (Covid) ಕಾರಣ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆದ ದಸರಾ (Dasara) ಮಹೋತ್ಸವದ ಜಂಬೂಸವಾರಿಯಲ್ಲಿ (Jambusavari) ಪಾಲ್ಗೊಂಡಿದ್ದ ಆನೆಗಳು (Elephant) ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದವು.

ಮೈಸೂರು  (Mysuru) ಅರಮನೆ ಆವರಣದ ಆನೆ ಬಿಡಾರದಲ್ಲಿ ಅಂಬಾರಿ (Ambari) ಹೊತ್ತು ಅಭಿಮನ್ಯು (Abhimanyu) ಸೇರಿದಂತೆ ಉಳಿದ ಆನೆಗಳು ಆಹಾರ (Food) ಸೇವಿಸಿ ವಿಶ್ರಾಂತಿ ಪಡೆಯುತ್ತಿದ್ದವು. ಮಾವುತರು ಮತ್ತು ಕಾವಾಡಿಗಳು ಅಲ್ಲಲ್ಲಿ ಕುಳಿತು ದಸರೆ ವೈಭೋಗದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಅವರ ಕುಟುಂಬದವರು ಶ್ರೀರಂಗಪಟ್ಟಣ (Shrirangapattana) ಪ್ರವಾಸಕ್ಕೆ ತೆರಳಿದ್ದರು.

ಅಂಬಾರಿ ಹೊತ್ತ ಆನೆ ‘ಅಭಿಮನ್ಯು’ವಿನ ಪರಾಕ್ರಮ

ಹೌದು, ದಸರಾ ಜಂಬೂಸವಾರಿಯ ಮಾರನೇ ದಿನವಾದ ಮಂಗಳವಾರ ಅರಮನೆ ಆವರಣವು ಪ್ರವಾಸಿಗರಿಂದ ತುಂಬಿತ್ತು. ದೇಶ ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ಮೊದಲು ಅರಮನೆಯ (Palace) ಸೌಂದರ್ಯ ಕಣ್ಣು ತುಂಬಿಕೊಂಡರು. ನಂತರ ದಸರಾ ಆನೆಗಳನ್ನು ನೋಡಲು ಮುಗಿಬಿದ್ದರು.

Vijaya Dashami: ಸಿದ್ಧಿದಾತ್ರಿ ಪೂಜಿಸಿ, ಎಂಟು ದಿನಗಳ ಪೂಜೆಗೆ ಇಂದು ಫಲ

ಎರಡನೇ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ (Golden Hwda) ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅಭಿಮನ್ಯು ಆನೆಯನ್ನು ಅದರ ಮಾವುತ ವಸಂತ (Vasantha) ತುಂಬಾ ಖುಷಿಯಿಂದಲೇ ಮುದ್ದಾಡುತ್ತಿದ್ದರು. ಕಾವಾಡಿ ರಾಜು ಸಹ ಅಭಿಮನ್ಯುಗೆ ಬೇಕಾದ ಆಹಾರವನ್ನು ಆಗಾಗ ನೀಡುತ್ತಾ ಖುಷಿಯಿಂದಲೇ ಓಡಾಡಿಕೊಂಡಿದ್ದರು. ಅಲ್ಲದೆ, ಮಧ್ಯಾಹ್ನ ವೇಳೆಗೆ ಅಭಿಮನ್ಯುಗೆ  ನೀರಿನ ತೊಟ್ಟಿಯಲ್ಲಿ ಸ್ನಾನ (Bath) ಮಾಡಿಸಿ, ಆಹಾರ ಕೊಟ್ಟು ಖುಷಿಪಡಿಸಿದರು.

ಅಭಿಮನ್ಯು ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಸಾಗಿದ ಕಾವೇರಿ (Cauvery) ಮತ್ತು ಚೈತ್ರಾ (Chaitra), ನಿಶಾನೆ ಆನೆ ಧನಂಜಯ, ನೌಫತ್‌ ಆನೆ ಗೋಪಾಲಸ್ವಾಮಿ ಮತ್ತು ಸಾಲಾನೆಯಾಗಿ ಮೊದಲ ಬಾರಿಗೆ ದಸರೆಯಲ್ಲಿ ಸಾಗಿದ ಅಶ್ವತ್ಥಾಮ ಆನೆಯು ವಿಶ್ರಾಂತಿ ಪಡೆಯುತ್ತಿದ್ದವು. ಈ ಆನೆಗಳನ್ನು ಸಹ ಅದರ ಮಾವುತ ಮತ್ತು ಕಾವಾಡಿಗಳು ಸ್ನಾನ ಮಾಡಿಸಿ ಆಹಾರ ನೀಡುತ್ತಿದ್ದರು.

ಮದ ಬಂದಿರುವ ಕಾರಣ ಜಂಬೂಸವಾರಿಯಿಂದ (Jambusavari) ಡಿಬಾರ್‌ ಆಗಿದ್ದ ವಿಕ್ರಮ ಆನೆ (Elephant), ಸಕಾರಣವಿಲ್ಲದೇ ಮೆರವಣಿಗೆಯಿಂದ ದೂರ ಉಳಿದ ಲಕ್ಷ್ಮಿ (Lakshmi) ಆನೆ ಸಹ ಆನೆ ಬಿಡಾರದಲ್ಲಿದ್ದವು. ಮತ್ತೊಮ್ಮೆ ದಸರಾ (Dasara) ಮಹೋತ್ಸವನನ್ನು ಯಶಸ್ವಿಯಾಗಿ ಮುಗಿಸಿರುವ ಆನೆಗಳು ಈಗ ನಾಡಿನಿಂದ ಕಾಡಿಗೆ ಪಯಣ ಹೊರಡಲು ಸಜ್ಜಾಗಿವೆ. ಅವುಗಳೊಂದಿಗೆ ಮಾವುತರು ಮತ್ತು ಕಾವಾಡಿಗಳು ಸಹ ಕುಟುಂಬ ಸಮೇತ ತಮ್ಮ ಸ್ವಸ್ಥಾನಕ್ಕೆ ತೆರಳಲು ಸಿದ್ಧವಾಗಿದ್ದರು.

ಇಂದು ಕಾಡಿಗೆ ಪಯಣ : ಕಳೆದ ಒಂದು ತಿಂಗಳಿಂದ ಮೈಸೂರು ಅರಮನೆ ಆವರಣದಲ್ಲಿ ಬಿಡು ಬಿಟ್ಟಿರುವ ಗಜಪಡೆಯು ಅ.17 ರಂದು ನಾಡಿನಿಂದ ಕಾಡಿಗೆ ವಾಪಸ್‌ ಹೋಗಲು ಸಿದ್ಧವಾಗಿವೆ.

ಅಭಿಮನ್ಯು ಮತ್ತು ಗೋಪಾಲಸ್ವಾಮಿ ಆನೆಯು ಮತ್ತಿಗೋಡು ಆನೆ ಶಿಬಿರಕ್ಕೆ ಲಾರಿಯಲ್ಲಿ ತೆರಳಲಿದೆ. ಹಾಗೆಯೇ, ವಿಕ್ರಮ, ಧನಂಜಯ ಮತ್ತು ಕಾವೇರಿ ಆನೆಯು ದುಬಾರೆ ಆನೆ ಶಿಬಿರಕ್ಕೆ, ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ರಾಮಪುರ ಆನೆ ಶಿಬಿರಕ್ಕೆ ಹಾಗೂ ಅಶ್ವತ್ಥಾಮ ಆನೆಯು ದೊಡ್ಡಹರವೆ ಆನೆ ಶಿಬಿರಕ್ಕೆ ಲಾರಿಯಲ್ಲಿ ಹೊರಡಲು ಸಜ್ಜಾಗಿವೆ.

Follow Us:
Download App:
  • android
  • ios