Asianet Suvarna News Asianet Suvarna News

ಕೆಲಸ ಬಿಟ್ಟು ದಸರಾ ದರ್ಬಾರ್; ಸಾರ್ವಜನಿಕರು ಕಚೇರಿಗೆ ಸಿಬ್ಬಂದಿ ಕುರ್ಚಿಗಳು ಖಾಲಿ!

ಸರ್ಕಾರಿ ರಜಾ ದಿನಗಳಂದು ಗೈರಾಗುವ ಅಧಿಕಾರಿ, ಸಿಬ್ಬಂದಿ ವಿಜಯದಶಮಿ ಹಬ್ಬವನ್ನು ಸರ್ಕಾರಿ ಕೆಲಸದ ದಿನವೇ ಒಂದು ದಿನ ಮುಂಚೆಯೇ ಆಚರಿಸಿ ಸಾರ್ವಜನಿಕರ ಕೆಲಸ, ಕಾರ್ಯಕ್ಕೆ ತೊಂದರೆ ಮಾಡಿದ ಘಟನೆ ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದಿದೆ.

Dasara Darbar  Staff chairs are empty in office peoples troubled for work rav
Author
First Published Oct 4, 2022, 10:22 AM IST

ದಾವಣಗೆರೆ (ಆ.4) : ಸರ್ಕಾರಿ ರಜಾ ದಿನಗಳಂದು ಗೈರಾಗುವ ಅಧಿಕಾರಿ, ಸಿಬ್ಬಂದಿ ವಿಜಯದಶಮಿ ಹಬ್ಬವನ್ನು ಸರ್ಕಾರಿ ಕೆಲಸದ ದಿನವೇ ಒಂದು ದಿನ ಮುಂಚೆಯೇ ಆಚರಿಸಿ ಸಾರ್ವಜನಿಕರ ಕೆಲಸ, ಕಾರ್ಯಕ್ಕೆ ತೊಂದರೆ ಮಾಡಿದ ಘಟನೆ ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದಿದೆ.

ದಾವಣಗೆರೆ: ಅ.5ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವದಿಂದ ಬೃಹತ್ ಶೋಭಾಯಾತ್ರೆ

ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿಗೆ ತದ್ವಿರುದ್ಧವಾದ ಇಲ್ಲಿನ ತಾಲೂಕು ಕಚೇರಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾ ರವು ಅ.4 ಮತ್ತು 5ರಂದು ರಜೆ ಘೋಷಿಸಿದೆ. ಆದರೆ, ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ ಒಂದು ದಿನ ಮುಂಚೆಯೇ ದಸರಾ ಆಚರಿಸಿ, ಏನು ಸಾಧಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್‌.ಹರೀಶ ಬಸಾಪುರ ಪ್ರಶ್ನಿಸಿದ್ದಾರೆ.

ದಬಾಯಿಸಿದ ಘಟನೆ:

ಸರ್ಕಾರವು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ, ಬುಧವಾರದ ರಜಾ ದಿನವೆಂದು ಘೋಷಿಸಿದೆ. ಆದರೆ, ದಾವಣಗೆರೆ ತಹಸೀಲ್ದಾರ್‌ ಕಚೇರಿಯ ಅಧಿಕಾರಿ, ಸಿಬ್ಬಂದಿಗೆ ಎರಡು ದಿನ ಹಬ್ಬದ ರಜೆ ಸಿಕ್ಕರೂ ಒಂದು ದಿನ ಮುಂಚೆಯೇ ಸೋಮವಾರ ತಮ್ಮ ಕಚೇರಿಯ ಕೆಲಸ, ಕಾರ್ಯಗಳನ್ನೆಲ್ಲಾ ಜನರಿಗೆ ತೊಂದರೆಯಾದರೂ ಚಿಂತೆ ಇಲ್ಲವೆಂಬಂತೆ ವರ್ತಿಸಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಇಡೀ ಕಚೇರಿ ಕೊಠಡಿಗಳ ಬೀಗ ಜಡಿದು, ಹಬ್ಬದ ಆಚರಣೆಯಲ್ಲಿ ತೊಡಗಿದ್ದ ಅಧಿಕಾರಿ, ಸಿಬ್ಬಂದಿಗೆ ಸರ್ಕಾರಿ ಕೆಲಸದ ವಿಚಾರಕ್ಕೆ ಬಂದ ಜನರಿಗೆ ಹಬ್ಬ ಮುಗಿದ ನಂತರ ಬರುವಂತೆ ದಬಾಯಿಸಿ, ಕಳಿಸುತ್ತಿದ್ದ ಘಟನೆಯೂ ನಡೆದಿದೆ ಎಂದು ದೂರಿದ್ದಾರೆ.

ದಸರಾ ಪೂಜೆ ಹೆಸರಿನಲ್ಲಿ, ನೆಪದಲ್ಲಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಂಡ ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಯಿಂದಾಗಿ ಮಂಗಳವಾರ, ಬುಧವಾರ ರಜೆ ಇರುವ ಹಿನ್ನೆಲೆಯಲ್ಲಿ ಸೋಮವಾರ ಬಂದಿದ್ದ ಜನರಿಗೆ ತೀವ್ರ ತೊಂದರೆಯಾಗಿದೆ. ಗ್ರಾಮೀಣರು, ಬಡವರು ಇಂದಿನ ದುಬಾರಿ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟ. ಅಂತಹದ್ದರಲ್ಲಿ ಅವಸರದ ದಸರಾ ಹಬ್ಬ ಆಚರಿಸುವ ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಯಿಂದಾಗಿ ಆ ಜನರಿಗೆ ಆಗಿರುವ ತೊಂದರೆ, ಸಮಸ್ಯೆ ಸರಿಪಡಿಸುವವರು ಯಾರು? ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಕೆ.ಎಲ್‌.ಹರೀಶ ಬಸಾಪುರ ಒತ್ತಾಯಿಸಿದ್ದಾರೆ.

ಮಧ್ಯವರ್ತಿಗಳ ಆವಾಸ ಸ್ಥಾನ ದಾವಣಗೆರೆ ತಾಲೂಕು ಕಚೇರಿ!

ಕೆಲಸ ಆಗದೇ ಬರಿಗೈಲಿ ವಾಪಸ್‌

ಸರ್ಕಾರಿ ಕಚೇರಿಯಲ್ಲಿ ಕೆಲಸ, ಕಾರ್ಯಕ್ಕೆಂದು ಬಂದ ರೈತರು, ಗ್ರಾಮೀಣರು, ಅಂಗವಿಕಲರು, ವಿದ್ಯಾರ್ಥಿ ಯುವ ಜನರು, ಹಿರಿಯ ನಾಗರಿಕರಿಗೆ ದಸರಾ ಹಬ್ಬ ಮಾಡಿದ್ದೇವೆಂದು ಹೇಳಿ, ಪೂಜೆ ತೋರಿಸಿ, ಪ್ರಸಾದ ತಿನ್ನಿಸಿ, ಕೆಲಸವನ್ನೇ ಮಾಡದೇ ಬರಿಗೈಲಿ ವಾಪಸ್‌ ಕಳಿಸಲಾಗಿದೆ. ಇಡೀ ಕಚೇರಿ ಕೆಲಸ, ಕಾರ್ಯ ಸ್ಥಗಿತಗೊಳಿಸಿ, ಜನರ ಕೆಲಸ, ಕಾರ್ಯಗಳನ್ನು ಬಂದ್‌ ಮಾಡಿ ಪೂಜೆಯಲ್ಲಿ ತಲ್ಲೀನರಾಗುವ ಮೂಲಕ ಅಧಿಕಾರಿ, ಸಿಬ್ಬಂದಿ ತಮ್ಮ ಶ್ರದ್ಧಾಭಕ್ತಿಯನ್ನು ಪ್ರದರ್ಶಿಸಿದ್ದು ಎಷ್ಟುಸರಿ ಎಂದು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios