ಚಾಮರಾಜನಗರ: ಅಪಘಾತದಲ್ಲಿ ಮೆದುಳಿಗೆ ಹಾನಿಯಾಗಿ ಸಾವು, ಅಂಗಾಂಗ ದಾನ ಮಾಡಿ ಸಾವಿನಲ್ಲೂ ದರ್ಶನ್ ಸಾರ್ಥಕತೆ
ಹನೂರು ಪಟ್ಟಣದ ನಿವಾಸಿಗಳಾದ ಬ್ಯಾಟರಿ ವರ್ಕ್ ಶಾಪ್ ಇಟ್ಟುಕೊಂಡಿರುವ ಶಶಿ ಮತ್ತು ಸುಶೀಲಾ ದಂಪತಿ ಪುತ್ರ ದರ್ಶನ್ ತಲೆಗೆ ರಸ್ತೆ ಅಪಘಾತದಲ್ಲಿ ಪೆಟ್ಟಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೂಡಲೇ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ದರ್ಶನ್ ಮೃತಪಟ್ಟಿದ್ದಾರೆ. ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.
ಹನೂರು(ಡಿ.03): ಪಟ್ಟಣದ ವಾಸಿ ದರ್ಶನ್ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಹನೂರು ಪಟ್ಟಣದ ನಿವಾಸಿಗಳಾದ ಬ್ಯಾಟರಿ ವರ್ಕ್ ಶಾಪ್ ಇಟ್ಟುಕೊಂಡಿರುವ ಶಶಿ ಮತ್ತು ಸುಶೀಲಾ ದಂಪತಿ ಪುತ್ರ ದರ್ಶನ್ ತಲೆಗೆ ರಸ್ತೆ ಅಪಘಾತದಲ್ಲಿ ಪೆಟ್ಟಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೂಡಲೇ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ದರ್ಶನ್ ಮೃತಪಟ್ಟಿದ್ದಾರೆ. ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.
ಮೃತ ವ್ಯಕ್ತಿಯ ಜೀವಂತ ಹೃದಯ ತೆಗೆದು, ತಮಿಳುನಾಡಿಗೆ ರವಾನಿಸಿದ ಬೆಂಗಳೂರು ವೈದ್ಯರು
ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ಅವರ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ, ಪಿತ್ತಕೋಶ (ಲಿವರ್), ಮೂತ್ರಪಿಂಡ (ಕಿಡ್ನಿ), ಕಣ್ಣು, ದಾನ ಮಾಡಲಾಗಿದೆ.