ನನಗೂ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ : ದರ್ಶನ್

ನನ್ನ ತಂದೆಯವರಿಗೆ ಸಹಕಾರ ನೀಡಿದಂತೆ ನನಗೂ ಸಹ ಒಮ್ಮೆ ಆಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಸದಾ ನಿಮ್ಮ ಜೊತೆ ಸಂಪರ್ಕದಲ್ಲಿದ್ದು , ನಿಮ್ಮ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಹೇಳಿದರು.

Darshan Dhruvanarayan urges to People to Vote  snr

 ನಂಜನಗೂಡು :  ನನ್ನ ತಂದೆಯವರಿಗೆ ಸಹಕಾರ ನೀಡಿದಂತೆ ನನಗೂ ಸಹ ಒಮ್ಮೆ ಆಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಸದಾ ನಿಮ್ಮ ಜೊತೆ ಸಂಪರ್ಕದಲ್ಲಿದ್ದು , ನಿಮ್ಮ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಹೇಳಿದರು.

ಪಟ್ಟಣದ ಗೌರಿಘಟ್ಟದ ಬೀದಿಯಲ್ಲಿರುವ ನಾಯಕರ ಸಮುದಾಯ ಭವನದಲ್ಲಿ ನಾಯಕ ಸಮುದಾಯದವರ ಚುನಾವಣಾ ಪೂರ್ವ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನನಗೆ ರಾಜಕೀಯ ಹೊಸದು. ಆದ್ದರಿಂದ ಕೆಲವು ಸಣ್ಣಪುಟ್ಟ ತಪ್ಪುಗಳಾಗಿರಬಹುದು, ಸಮುದಾಯದ ಮುಖಂಡರನ್ನು ಗುರುತಿಸುವುದು ಕಷ್ಟವಾಗಿರಬಹುದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇನೆ. ನಮ್ಮ ತಂದೆಯವರಿಗೆ ನಂಜನಗೂಡನ್ನು ಸಮಗ್ರವಾಗಿ ಅಭಿವೃದ್ದಿಪಡಿಸಬೇಕು ಎಂಬ ಕನಸಿತ್ತು. ಅವರ ಆಸೆಯಂತೆ ನಂಜನಗೂಡು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸಿ ಅವರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಮನವಿ ಮಾಡಿದರು.

ಮುಖಂಡರಾದ ದೊರೆಸ್ವಾಮಿನಾಯಕ ಮಾತನಾಡಿ, ಧ್ರುವನಾರಾಯಣ್‌ ಅವರು ಸಮುದಾಯಕ್ಕೆ ಆಲದ ಮರದಂತೆ ನೆರಳಾಗಿದ್ದುಕೊಂಡು ಜನರಿಗೆ ಸವಲತ್ತು ತೊರಕಿಸಿಕೊಟ್ಟು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಅವರ ಋುಣ ನಮ್ಮ ಸಮುದಾಯದ ಮೇಲಿದ್ದು, ಆ ಋುಣ ತೀರಿಸಲು ಒಮ್ಮತದಿಂದ ದರ್ಶನ್‌ ಧ್ರುವ ಅವರನ್ನು ಬೆಂಬಲಿಸಬೇಕು ಎಂದರು.

ಮಹೇಶ್‌ ಮಾತನಾಡಿ, ನಾಯಕ ಸಮುದಾಯದವರಿಗೆ ಹೆಚ್ಚಿನ ಸ್ಥಾನಮಾನ ನೀಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಿ ಅಭೂತಪೂರ್ವವಾಗಿ ಗೆಲ್ಲಿಸಿಕೊಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್‌, ಸಿ.ಎಂ. ಶಂಕರ್‌, ಮುಖಂಡರಾದ ನಾಗರಾಜು, ನಾಯಕ, ನಾಗರಾಜು, ಮಂಜುನಾಥ್‌, ನಾಗರಾಜಯ್ಯ, ಲಕ್ಷ್ಮಣ, ಕುಮಾರಸ್ವಾಮಿ, ಮಹದೇವನಾಯಕ, ಬಾಲಕೃಷ್ಣ, ಮಹದೇವನಾಯಕ, ಮಣಿ, ನಾರಾಯಣ, ಪ್ರದೀಪ್‌, ನಾಗೇಶ್‌ರಾಜ್‌, ಕಾರ್ಯಕರ್ತರು ಇದ್ದರು.

ಜನ ಸೇವೆ ಮೂಲಕ ತಂದೆ ಹೆಸರು ಉಳಿಸುತ್ತೇನೆ

  ಮೈಸೂರು :  ಜನರ ಸೇವೆ ಮೂಲಕ ತಂದೆ ಹೆಸರು ಉಳಿಸಿಕೊಳ್ಳುತ್ತೇನೆ ಎಂದು ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ತಿಳಿಸಿದರು.

ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಶುಕ್ರವಾರ ಕರ್ನಾಟಕ ದಲಿತ ವೇದಿಕೆ ಆಂಯೋಜಿಸಿದ್ದ ವåಾಜಿ ಸಂಸದ ಆರ್‌.ಧ್ರುವನಾರಾಯಣ ಅವರ ನುಡಿ ನಮನ ಕಾಂåÜುರ್‍ಕ್ರಮದಲ್ಲಿ ಅವರು ವåಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್‌ ತತ್ವಸಿದ್ಧಾಂತ ಅಳವಡಿಸಿಕೊಂಡು, ಜನರ ಸೇವೆ ಮಾಡುತ್ತೇನೆ. ನಾಯಕರು ಹಾಗೂ ತಾವು ಹಾಕಿಕೊಟ್ಟಮಾರ್ಗದಲ್ಲಿ ಮುನ್ನಡೆಯುತ್ತೇನೆ. ತಂದೆಯ ಅಕಾಲಿಕ ನಿಧನದಿಂದ ನೋವು ಅನುಭವಿಸಿದ್ದೇನೆ. ರಾಜ್ಯಾದ್ಯಂತ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಸಾಂತ್ವನ ಹೇಳಿ ನಮಗೆ ಶಕ್ತಿ ತುಂಬಿದ್ದಾರೆ. ಎಲ್ಲರಿಗೂ ನಾವು ಅಭಾರಿಯಾಗಿರುವೆ ಎಂದರು.

ವåಾಜಿ ಮೇಯರ್‌ ಪುರುಷೋತ್ತಮ್‌ ಮಾತನಾಡಿ, ಆರ್‌. ಧ್ರುವನಾರಯಣ ಐದು ವರ್ಷಗಳ ಕಾಲ ಶಾಸಕರಾಗಿ, ಸಂಸದರಾಗಿ 10 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕಾರಣ ಚಾಮರಾಜನಗರ ಜಿಲ್ಲೆಯ ಚಿತ್ರಣ ಬದಲಾಗಿದೆ. ನಮ್ಮ ಸಮುದಾಯದಲ್ಲಿ ಆರ್‌. ಧ್ರುವನಾರಾಯಣ ದೊಡ್ಡ ನಾಯಕರಾಗುವ ಎಲ್ಲಾ ಭರವಸೆ ಮೂಡಿಸಿದ್ದರು.ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಕೆಲಸ ವåಾಡಿದರು. ಎರಡು ಬಾರಿ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದರು. ಗೆದ್ದ ಕ್ಷೇತ್ರ ಯಾವ ರೀತಿ ಅಭಿವೃದ್ಧಿ ವåಾಡಬೇಕು.ಯಾವುದೇ ಧರ್ಮ, ಜಾತಿಗಳಿಗೂ ಅನ್ಗಯಾವಾಗಬಾರದು ಎಂದು ನೋಡಿಕೊಂಡಿದ್ದಾಗಿ ತಿಳಿಸಿದರು.

ಧ್ರುವನಾರಾಯಣ್‌ ಅವರು ಕೇವಲ ರಾಜಕಾರಣಿಯಾಗದೇ, ಜವಾಬ್ದಾರಿಯುತ ನಾಯಕರಾಗಿದ್ದರು. ಸವåಾಜ ಸೇವೆಯೊಂದಿಗೆ ಪ್ರಾಮಾಣಿಕತೆ, ಹೃದಯವಂತಿಕೆ ಅವರಿಗೆ ಇತ್ತು. ಭ್ರಷ್ಟಾಚಾರ ರಹಿತರಾಗಿ ಜನ ಸೇವೆ ಮಾಡಿದರು. ಎರಡು ಬಾರಿ ಸೋಲು, ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಸೋತ ಬಳಿಕವೇ ಬಹಳಷ್ಟುಎತ್ತರಕ್ಕೆ ಬೆಳೆದರು. ಅವರ ಪುತ್ರ ದರ್ಶನ್‌ಗೆ ನಾವೆಲ್ಲರೂ ಪ್ರಾವåಾಣಿಕವಾಗಿ ಬೆಂಬಲ ನೀಡಬೇಕು ಎಂದು ಅವರು ಮನವಿ ವåಾಡಿದರು.

ತಾಪಂ  ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್‌, ಮುಖಂಡರಾದ ಚಿಕ್ಕ ಜವರಪ್ಪ, ಡಾ. ಕೃಷ್ಣಮೂರ್ತಿ ಚಮರಂ,   ಅಮ್ಮ ರಾಮಚಂದ್ರ, ಸೋಮು ಹಿನಕಲ್‌ ಮೊದಲಾದವರು ಇದ್ದರು

Latest Videos
Follow Us:
Download App:
  • android
  • ios