Asianet Suvarna News Asianet Suvarna News

ಬಾಗಲಕೋಟೆ: ಅಪಾಯಕಾರಿ ಟ್ಯೂಮರ್ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಮಕ್ಕಳಿಗೆ ಪುನರ್ಜನ್ಮ ನೀಡಿದ ವೈದ್ಯರು..!

ಅಪರೂಪದಲ್ಲಿಯೇ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಬಾಗಲಕೋಟೆಯ ಗುಳೇದ ಆಸ್ಪತ್ರೆಯ ವೈದ್ಯರ‌ ತಂಡವೊಂದು ಮಾಡಿ ಯಶಸ್ವಿಯಾಗಿದೆ. ಯಾಕಂದ್ರೆ ಈ ವೈದ್ಯರ ತಂಡ ಮಕ್ಕಳ ಮೂಗಿನೊಳಗೆ ಬೆಳೆಯುವ ಅಪಾಯಕಾರಿ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. 

Dangerous Tumor Successful Surgery at Guled Hospital in Bagalkot grg
Author
First Published Oct 6, 2023, 2:00 AM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್

ಬಾಗಲಕೋಟೆ(ಅ.06):  ಅದೊಂದು ಲಕ್ಷಕ್ಕೆ ಒಬ್ಬರು ಅಥವಾ ಇಬ್ಬರಲ್ಲಿ ಕಾಣಿಸಿಕೊಳ್ಳುವ ಟ್ಯೂಮರ್ ಗಡ್ಡೆ ಖಾಯಿಲೆ, ಒಂದೊಮ್ಮೆ ಇದಕ್ಕೆ ಚಿಕಿತ್ಸೆ ಪಡೆಯಬೇಕಂದ್ರೆ ರಾಜ್ಯ ರಾಜಧಾನಿ ಬೆಂಗಳೂರು ಇಲ್ಲವೆ ಹುಬ್ಬಳ್ಳಿಯಂತಹ ಮಹಾನಗರಗಳಿಗೆ ತೆರಳಬೇಕಿತ್ತು, ಆದ್ರೆ ಬಾಗಲಕೋಟೆಯ ವೈದ್ಯರ ತಂಡವೊಂದು ಬಡಮಕ್ಕಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಿ, ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನೂ ಸಹ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಾಗಾದರೆ ಆ ಬಡ ಮಕ್ಕಳಿಗೆ ಆಗಿದ್ದಾದ್ರೂ ಏನು, ವೈದ್ಯರು ಮಾಡಿದ್ದೇನು? ಅಂತೀರಾ. ಈ ಕುರಿತ ವರದಿ ಇಲ್ಲಿದೆ..

ಹೌದು, ಒಂದೆಡೆ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಗುಣಪಟ್ಟಿರೋ ಮಕ್ಕಳು, ಮತ್ತೊಂದೆಡೆ ಗುಣಮುಖರಾದ ಮಕ್ಕಳ ಜೊತೆ ಖುಷಿಯಲ್ಲಿರೋ ಪಾಲಕರು, ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ ವೈದ್ಯರ ತಂಡ, ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯ ಗುಳೇದ ಖಾಸಗಿ ಆಸ್ಪತ್ರೆಯಲ್ಲಿ. 

ಬನಹಟ್ಟಿ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ: ಹರಕೆ ತೀರಿಸಿಲು ಲಕ್ಷಾಂತರ ಮೌಲ್ಯದ ಪಟಾಕಿ ಸಿಡಿಸುವ ಭಕ್ತರು!

ಹೌದು, ಅಪರೂಪದಲ್ಲಿಯೇ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಬಾಗಲಕೋಟೆಯ ಗುಳೇದ ಆಸ್ಪತ್ರೆಯ ವೈದ್ಯರ‌ ತಂಡವೊಂದು ಮಾಡಿ ಯಶಸ್ವಿಯಾಗಿದೆ. ಯಾಕಂದ್ರೆ ಈ ವೈದ್ಯರ ತಂಡ ಮಕ್ಕಳ ಮೂಗಿನೊಳಗೆ ಬೆಳೆಯುವ ಅಪಾಯಕಾರಿ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಲಕ್ಷದಲ್ಲಿ ಒಬ್ಬರು ಅಥವಾ ಇಬ್ಬರಲ್ಲಿ ಈ ರೀತಿಯ ಟ್ಯೂಮರ್ ಕಾಣಿಸಿಕೊಳ್ಳುವ ಈ ಟ್ಯೂಮರ್ (Juvenile Nasopharyngeal Angiofibroma (JNA)) ಅತ್ಯಂತ ಅಪಾಯಕಾರಿಯಾಗಿದ್ದು, ಬುರುಡೆಯೊಳಗೆ ವೇಗವಾಗಿ ಹಬ್ಬುತ್ತದೆ. ಇದನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ತೆಗೆಯಬಹುದಾಗಿದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ಬಿಟ್ರೆ ಹುಬ್ಬಳ್ಳಿ ಅಂತಹ ದೊಡ್ಡ ನಗರಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಸದ್ಯ ಇಂತಹ ಶಸ್ತ್ರಚಿಕಿತ್ಸೆ ಬಾಗಲಕೋಟೆಯ ಗುಳೇದ ಆಸ್ಪತ್ರೆಯ ವೈದ್ಯರು ಮಾಡಿದ್ದು, ಬಾಗಲಕೋಟೆ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಯ ಜನರಿಗೆ ಸಹಕಾರಿಯಾಗಲಿದೆ ಅಂತಾರೆ ವೈದ್ಯರಾದ ಡಾ. ಕಾರ್ತಿಕ ಪಾಟೀಲ ಮತ್ತು ಡಾ. ಅಪೂರ್ವ ಗುಳೇದ. 

ಬಾಗಲಕೋಟೆಯಲ್ಲಿ ಗಾಂಧಿ ಜಯಂತಿ ಮುನ್ನಾ ದಿನದಿಂದಲೇ ಸಾರಾಯಿ ವಿರುದ್ದ ಹೋರಾಟಕ್ಕಿಳಿದ ಮಹಿಳೆಯರು!

ಸತತ 8 ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆ

ಇನ್ನು ಮುಖ್ಯವಾಗಿ ಈ ಟ್ಯೂಮರ್​ ವಿಜಯಪುರ ಜಿಲ್ಲೆಯ ನಿಡಗುಂದಿಯ ಈರಣ್ಣ ಹಾಗೂ ಜಮಖಂಡಿಯ ರಾಘವೇಂದ್ರ ಎಂಬ ಬಾಲಕರಿಗೆ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇನ್ನು ಈ ಗಡ್ಡೆ 13 ವರ್ಷದಿಂದ 18 ವರ್ಷದ ಗಂಡು ಮಕ್ಕಳಲ್ಲಿ ಮಾತ್ರ ಕಾಣಿಸುತ್ತಲ್ಲದೇ, ಅನುವಂಶಿಕವಾಗಿಯೂ ಹರಡುತ್ತೇ ಅನ್ನೋದು ವಿಶೇಷ. ಈ ಮಧ್ಯೆ ಸತತ 8 ಗಂಟೆಗಳ‌ ಕಾಲ ಶಸ್ತ್ರಚಿಕಿತ್ಸೆ ಮೂಲಕ ಇಬ್ಬರು ಬಾಲಕರಲ್ಲಿ ಇದ್ದ ಗಡ್ಡೆಯನ್ನು‌ ಆಸ್ಪತ್ರೆಯ ವೈದ್ಯ ಕಾರ್ತಿಕ ಪಾಟೀಲ, ಡಾ. ಅಪೂರ್ವ ಗುಳೇದ, ಡಾ.‌ಕವಿತಾ ಪಲ್ಲೇದ್, ಡಾ.ಸಮೀರ್ ಕುಲಕರ್ಣಿ, ಡಾ.‌ಶೃತಿ ಪಾಟೀಲ‌್ ಒಳಗೊಂಡ ತಂಡವು ಈ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ. ಈ ಶಸ್ತ್ರಚಿಕಿತ್ಸೆಗಾಗಿ ಬಡವರಿಗೆ ಅನುಕೂಲ ಆಗುವ ರೀತಿಯಲ್ಲಿ ಗುಳೇದ ಆಸ್ಪತ್ರೆಯ ವೈದ್ಯರು  ಶಸ್ತ್ರಚಿಕಿತ್ಸೆಗೆ ಮಾಡಿದ್ದು, ಶಸ್ತ್ರಚಿಕಿತ್ಸೆ ನಂತರ ಇಬ್ಬರೂ ಯುವಕರು ಆರೋಗ್ಯವಂತಾಗಿದ್ದು, ರಿಯಾಯಿತಿ ದರದಲ್ಲಿ ನಮ್ಮ ಮಕ್ಕಳಿಗೆ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಿದ್ದು ಅವರಿಗೆ ಋಣಿಯಾಗಿದ್ದೇವೆ ಎಂದು ಮಕ್ಕಳ ಪಾಲಕ ನಂದೆಪ್ಪ ಹೇಳಿದ್ರು. 

ಒಟ್ಟಿನಲ್ಲಿ ಬಡ ಮಕ್ಕಳಲ್ಲಿ ಕಾಣಿಸಿಕೊಂಡ ಅಪರೂಪದ ಟ್ಯೂಮರ್ ಗಡ್ಡೆಯನ್ನ ವೈದ್ಯರ ತಂಡವೊಂದು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ತೆಗೆದು ರಿಯಾಯಿತಿ ದರದಲ್ಲಿ ಸೇವೆ ನೀಡಿದ್ದು, ಮಕ್ಕಳು ಗುಣಮುಖರಾಗಿ ಯಶಸ್ವಿಯಾಗಿ ಮುನ್ನಡೆಯಲಿ ಅನ್ನೋದೆ ಎಲ್ಲರ ಆಶಯ.

Follow Us:
Download App:
  • android
  • ios