ಮಂಗಳೂರಲ್ಲಿ ಬಿಯರ್‌ ಉತ್ಪಾದನೆಗೆ ತಟ್ಟಿದ ನೀರಿನ ಕೊರತೆ!

ಕಡಲ ತಡಿಯ ನಗರ ಮಂಗಳೂರಿನಲ್ಲಿ ಈಗ ಬಿಯರ್‌ ಉತ್ಪಾದನೆಗೂ ನೀರಿನ ಕೊರತೆ ತಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ನೀರು ಪೂರೈಕೆಯಲ್ಲಿ ರೇಷನಿಂಗ್‌ ಆರಂಭಿಸಿರುವುದರಿಂದ ಬಿಯರ್‌ ಘಟಕಕ್ಕೆ ಸಾಕಷ್ಟುಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬಿಯರ್‌ ಉತ್ಪಾದನೆಗೆ ಟ್ಯಾಂಕರ್‌ ನೀರಿನ ಮೊರೆ ಹೋಗುವಂತಾಗಿದೆ. ಇದು ಬಿಯರ್‌ ಉತ್ಪಾದನೆಯಲ್ಲಿ ಪರಿಣಾಮ ಬೀರುವಂತಾಗಿದೆ

Dakshina kannada Lack of water for beer production at mangaluru rav

ಆತ್ಮಭೂಷಣ್‌

 ಮಂಗಳೂರು (ಮೇ.21) : ಕಡಲ ತಡಿಯ ನಗರ ಮಂಗಳೂರಿನಲ್ಲಿ ಈಗ ಬಿಯರ್‌ ಉತ್ಪಾದನೆಗೂ ನೀರಿನ ಕೊರತೆ ತಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ನೀರು ಪೂರೈಕೆಯಲ್ಲಿ ರೇಷನಿಂಗ್‌ ಆರಂಭಿಸಿರುವುದರಿಂದ ಬಿಯರ್‌ ಘಟಕಕ್ಕೆ ಸಾಕಷ್ಟುಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬಿಯರ್‌ ಉತ್ಪಾದನೆಗೆ ಟ್ಯಾಂಕರ್‌ ನೀರಿನ ಮೊರೆ ಹೋಗುವಂತಾಗಿದೆ. ಇದು ಬಿಯರ್‌ ಉತ್ಪಾದನೆಯಲ್ಲಿ ಪರಿಣಾಮ ಬೀರುವಂತಾಗಿದೆ.

ಬೇಸಗೆಯಲ್ಲಿ ವಿಸ್ಕಿ, ವೈನ್‌ಗಿಂತ ಬಿಯರ್‌ ಮೊರೆ ಹೋಗುವವರು ಜಾಸ್ತಿ. ಈ ಬಾರಿ ದ.ಕ. ಜಿಲ್ಲೆಯಲ್ಲಿ ಬಿಯರ್‌ಗೆ ಮೂರುಪಟ್ಟು ಬೇಡಿಕೆ ಬಂದಿದೆ. ಆದರೆ ಸಾಕಷ್ಟುಪ್ರಮಾಣದಲ್ಲಿ ಬಿಯರ್‌ ಪೂರೈಕೆ ಆಗುತ್ತಿಲ್ಲ. ಕಳೆದ ಒಂದು ತಿಂಗಳಿಂದ ಮಂಗಳೂರಿನ ಬೈಕಂಪಾಡಿಯ ಬಿಯರ್‌ ಉತ್ಪಾದನಾ ಘಟಕ್ಕೆ ಮಹಾನಗರ ಪಾಲಿಕೆಯಿಂದ ನೀರು ಪೂರೈಕೆಯಲ್ಲಿ ರೇಷನಿಂಗ್‌ ಆರಂಭವಾಗಿರುವುದರಿಂದ ಬಿಯರ್‌ ಉತ್ಪಾದಕರು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ಟ್ಯಾಂಕರ್‌ ನೀರಿನ ಮೊರೆ ಹೋಗಿರುವುದರಿಂದ ಬಿಯರ್‌ ಉತ್ಪಾದನೆ ಸ್ಥಗಿತಗೊಂಡಿಲ್ಲ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬಿಯರ್‌ ಉತ್ಪಾದನೆ ಆಗುತ್ತಿಲ್ಲ ಎನ್ನುತ್ತದೆ ಇಲಾಖಾ ಅಂಕಿಅಂಶ.

2050ಕ್ಕೆ ಬೆಂಗಳೂರು ನಗರದಲ್ಲಿ ನೀರೇ ಇರಲ್ವಾ..ತಜ್ಞರು ಹೇಳಿದ್ದೇನು?

ಬೇಸಗೆ ಮಳೆ ಇಲ್ಲದೆ ನೀರಿನ ಕೊರತೆ:

ಪ್ರಸಕ್ತ ಮಂಗಳೂರು ಮಹಾನಗರಕ್ಕೆ ತುಂಬೆಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಳೆದ ವರ್ಷ ಮಾಚ್‌ರ್‍ನಲ್ಲಿ ಬೇಸಗೆ ಮಳೆ ಸುರಿದ ಕಾರಣ ಆಗ ನೀರಿನ ಕೊರತೆ ಅಷ್ಟಾಗಿ ಕಂಡುಬಂದಿರಲಿಲ್ಲ. ಈ ಬಾರಿ ಸಾಧಾರಣವಾದರೂ ಬೇಸಗೆ ಮಳೆಯೇ ಬಂದಿಲ್ಲ. ಹಾಗಾಗಿ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದು ಬಿಯರ್‌ ಫ್ಯಾಕ್ಟರಿಗಳು ಟ್ಯಾಂಕರ್‌ ನೀರಿನ ಮೊರೆ ಹೋಗುವಂತೆ ಮಾಡಿದೆ.

ಬಿಯರ್‌ ಉತ್ಪಾದನೆಯೂ ಕಡಿಮೆ:

ಮಂಗಳೂರಿನಲ್ಲಿ ಬಿಯರ್‌ ಘಟಕ ಇದ್ದರೂ ಉತ್ಪಾದನೆ ಬಹಳಷ್ಟುಕಡಿಮೆ. ಅಬಕಾರಿ ಇಲಾಖೆ ಅಂಕಿಅಂಶಗಳ ಪ್ರಕಾರ ಇಲ್ಲಿ ಪಿಂಟ್‌, ಟಿನ್‌ಗಳ ಬದಲು ಕೇವಲ ಬಾಟಲ್‌ಗಳಲ್ಲಿ ಮಾತ್ರ ಬಿಯರ್‌ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 2.53 ಲಕ್ಷ ಬಾಕ್ಸ್‌ (1 ಬಾಕ್ಸ್‌- 12 ಬಾಟಲ್‌) ಬಿಯರ್‌ ಉತ್ಪಾದನೆಯಾಗಿದ್ದರೆ, ಈ ಬಾರಿ 2.48 ಲಕ್ಷ ಬಾಕ್ಸ್‌ ಮಾತ್ರ ಉತ್ಪಾದನೆಯಾಗಿದೆ. ಮಂಗಳೂರಲ್ಲಿ ನಾಲ್ಕು ವಿಧದ ಬಿಯರ್‌ ಮಾತ್ರ ಉತ್ಪಾದನೆಯಾಗುತ್ತಿದೆ. ಉಳಿದಂತೆ ಮೈಸೂರು, ಬೆಂಗಳೂರುಗಳಿಂದ ಇಲ್ಲಿಗೆ ಪೂರೈಕೆಯಾಗುತ್ತಿದೆ. ಇಲ್ಲಿ ಮೂರು ಶಿಫ್‌್ಟಗಳಲ್ಲಿ 3 ಲಕ್ಷ ಬಾಕ್ಸ್‌ ಬಿಯರ್‌ ಉತ್ಪಾದನಾ ಸಾಮರ್ಥ್ಯ ಇದೆ.

ಸುಪಾ ಮುಳುಗಡೆಯಾದ ಗ್ರಾಮಗಳ ಅವಶೇಷ ಗೋಚರ..!

ಚುನಾವಣಾ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಗಳಿಗೆ ಕಳೆದ ಒಂದು ತಿಂಗಳಿಂದ ಮಂಗಳೂರಲ್ಲಿ ಬಿಯರ್‌ ಉತ್ಪಾದನೆಯಲ್ಲಿ ಇಳಿಮುಖವಾಗಿದೆ. ಇಲ್ಲಿ 3 ಲಕ್ಷ ಬಾಕ್ಸ್‌ ಬಿಯರ್‌ ಉತ್ಪಾದನಾ ಸಾಮರ್ಥ್ಯ ಇದ್ದು, ಈ ಬಾರಿ 2.48 ಲಕ್ಷ ಬಾಕ್ಸ್‌ ಮಾತ್ರ ಬಿಯರ್‌ ಉತ್ಪಾದನೆಯಾಗಿದೆ.

-ಬಿಂದುಶ್ರೀ ಪಿ. ಜಿಲ್ಲಾ ಅಧಿಕಾರಿ, ಅಬಕಾರಿ ಇಲಾಖೆ, ಮಂಗಳೂರು

Latest Videos
Follow Us:
Download App:
  • android
  • ios