ಮಂಗಳೂರು (ಅ.14): ಕೊರೋನಾ ಸೋಂಕಿಗೆ ಇದೀಗ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತುತ್ತಾಗಿದ್ದು, ಅವರ ಪತ್ನಿ, 2 ವರ್ಷದ ಮಗುವಿಗೂ ಸೋಂಕು ತಗುಲಿದೆ. 

ಮಂಗಳವಾರ ಪಾಸಿಟಿವ್‌ ವರದಿ ಲಭಿಸಿದ್ದು, ಯಾವುದೇ ರೋಗ ಲಕ್ಷಣ ಇಲ್ಲದೆ ಇರುವುದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜಿಲ್ಲಾಧಿಕಾರಿಗಳು ಪ್ರಸ್ತುತ ಗೃಹ ನಿಗಾವಣೆಯಲ್ಲಿದ್ದು, ಗೃಹ ಕಚೇರಿಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆನ್‌ಲೈನ್‌ ಮೂಲಕವೇ ಅಧಿಕಾರಿಗಳ ಸಭೆಗಳನ್ನು ನಡೆಸುತ್ತಿದ್ದು, ಅಗತ್ಯವಿದ್ದರೆ ಮಾತ್ರ ವಾಟ್ಸಪ್‌ ಅಥವಾ ಎಸ್‌ಎಂಎಸ್‌ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ಕಂಟ್ರೋಲ್ ತಪ್ಪಿದ ಕೊರೋನಾ: ದೇಶದಲ್ಲೇ ಕರ್ನಾಟಕ ಫಸ್ಟ್ .

ಈಗಾಗಲೇ ದೇಶದಲ್ಲಿ ಲಕ್ಷ ಲಕ್ಷ ಜನರು ಕೊರೋನಾ ಹಾವಳಿಗೆ ತುತ್ತಾಗುತ್ತಿದ್ದಾರೆ. ನಿತ್ಯವೂ ಲಕ್ಷಾಂತರ ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ.