Asianet Suvarna News Asianet Suvarna News

ರೈತರ ಆರ್ಥಿಕ ಸದೃಢತೆಗೆ ಹೈನುಗಾರಿಕೆ ಶಕ್ತಿ: ಗೌಡ

ಹೈನುಗಾರರ ಶ್ರೇಯೋಭಿವೃದ್ಧಿಗೆ ತುಮಕೂರು ಹಾಲು ಒಕ್ಕೂಟದಿಂದ ಪ್ರತಿ ಲೀಟರ್‌ ಹಾಲಿಗೆ 1.50 ರು.ಗಳನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಾಡುವ ಸಾಧ್ಯತೆ ಇದೆ. ಆದ್ದರಿಂದ ರೈತರು ಉತ್ಸಾಹದಿಂದ, ಕ್ರಿಯಾಶೀಲರಾಗಿ ಕೆಲಸ ಮಾಡಿ ಹೆಚ್ಚು ಹಾಲು ಉತ್ಪಾದಿಸಿ ಲಾಭ ಪಡೆಯಿರಿ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್‌.ಆರ್‌.ಗೌಡ ಹೇಳಿದರು

Dairy farming Is Best Income Source for Farmers snr
Author
First Published Jan 4, 2023, 6:05 AM IST

  ಶಿರಾ (ಜ.04):  ಹೈನುಗಾರರ ಶ್ರೇಯೋಭಿವೃದ್ಧಿಗೆ ತುಮಕೂರು ಹಾಲು ಒಕ್ಕೂಟದಿಂದ ಪ್ರತಿ ಲೀಟರ್‌ ಹಾಲಿಗೆ 1.50 ರು.ಗಳನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಾಡುವ ಸಾಧ್ಯತೆ ಇದೆ. ಆದ್ದರಿಂದ ರೈತರು ಉತ್ಸಾಹದಿಂದ, ಕ್ರಿಯಾಶೀಲರಾಗಿ ಕೆಲಸ ಮಾಡಿ ಹೆಚ್ಚು ಹಾಲು ಉತ್ಪಾದಿಸಿ ಲಾಭ ಪಡೆಯಿರಿ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್‌.ಆರ್‌.ಗೌಡ ಹೇಳಿದರು.

ಮಂಗಳವಾರ ನಗರದ ನಂದಿನಿ ಕ್ಷೀರಭವನದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ 2023ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಂಪ್ಯೂಟರ್‌ ವಿತರಣೆ, ರಾಸುಗಳ ವಿಮಾ ಪರಿಹಾರ ಚೆಕ್‌ ವಿತರಣೆ ಮತ್ತು ಡೈರಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಆರ್ಥಿಕವಾಗಿ ಸದೃಢರಾಗಲು ಶಕ್ತಿಕೊಡುವ ಉದ್ಯಮ ಹೈನುಗಾರಿಕೆ. ಕಳೆದ ವರ್ಷ ಜಾನುವಾರುಗಳಿಗೆ ಗಂಟು ರೋಗ ಬಾದೆಯಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ತುಮಕೂರು ಹಾಲು ಒಕ್ಕೂಟಕ್ಕೆ ದಿನ ನಿತ್ಯ 2 ಲಕ್ಷ ಲೀಟರ್‌ ಹಾಲಿನ ಕೊರತೆ ಉಂಟಾಗಿದೆ. ಆದರೂ ಸಹ ಮಂಡ್ಯದಿಂದ 45 ಸಾವಿರ ಲೀಟರ್‌ ಹಾಲನ್ನು ಖರೀದಿಸಿ ನೀಡಲಾಗುತ್ತಿದೆ. ತುಮಕೂರು ಹಾಲು ಒಕ್ಕೂಟದಿಂದ ಹೈನುಗಾರರ ಅಭಿವೃದ್ಧಿಗೆ ಪ್ರತಿ ಲೀಟರ್‌ಗೆ 1.50 ರು.ಗಳನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಸರ್ಕಾರ, ಕೆಎಂಎಫ್‌ ಹಾಗೂ ಒಕ್ಕೂಟದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೈನುಗಾರರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಇವೆಲ್ಲದರ ಸದುಪಯೋಗ ಪಡೆದು ಹೆಚ್ಚು ಹೈನುಗಾರಿಕೆ ಉದ್ಯಮದ ಕಡೆ ರೈತರು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪ್ರಯತ್ನಿಸಬೇಕು ಎಂದರು.

ದೇಶದಲ್ಲೇ ನಂದಿನಿ ಬ್ರಾಂಡ್‌ಗೆ ಉತ್ತಮ ಮಾನ್ಯತೆ ಇದೆ; ರಾಜ್ಯದಲ್ಲಿ ಕೆಎಂಎಫ್‌ ನಂದಿನಿ ಹಾಲಿನ ವ್ಯವಹಾರದಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಬೇರೆ ರಾಜ್ಯದ ಹಾಲಿನ ಸಂಸ್ಥೆಯ ಜೊತೆಗೆ ಹೊಂದಾಣಿಕೆ ಮಾಡುವುದು ಬೇಡ. ರಾಷ್ಟ್ರದಲ್ಲಿಯೇ ಅಮೂಲ್‌ನಷ್ಟೇ ಗುಣಮಟ್ಟದ, ತಾಜಾತನದ ಹಾಲನ್ನು ನೀಡುತ್ತಿರುವ ಸಂಸ್ಥೆ ಕೆಎಂಎಫ್‌. ನಂದಿನಿ ಹಾಲಿನ ಬ್ರಾಂಡ್‌ಗೆ ರಾಷ್ಟ್ರದಲ್ಲಿಯೇ ಮಾನ್ಯತೆ ಇದೆ. ಆದ್ದರಿಂದ ಅಮೂಲ್‌ ಜೊತೆ ಹೊಂದಾಣಿಕೆಗೆ ಎಲ್ಲಾ ಒಕ್ಕೂಟಗಳು ವಿರೋಧ ವ್ಯಕ್ತಪಡಿಸುತ್ತಿವೆ. ನಮ್ಮ ಸಂಸ್ಥೆಗೆ ಶಕ್ತಿ ಇದೆ. ಅಮೂಲ್‌ಗಿಂತ ಅತಿ ಹೆಚ್ಚು ಶಕ್ತಿಯುತವಾಗಿ ಬೆಳೆಯುತ್ತದೆ. ಇದು ಎಲ್ಲಾ ಕರ್ನಾಟಕದ ಕನ್ನಡಿಗರ ಕನಸಾಗಿದೆ ಎಂದರು.

ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮಧುಸೂಧನ್‌, ವಿಸ್ತರಣಾಧಿಕಾರಿ ದಿವಾಕರ್‌, ಸಮಾಲೋಚಕ ಪ್ರವೀಣ್‌, ಶ್ರೀನಿವಾಸ್‌, ಪಶು ವೈದ್ಯರಾದ ವಿರುಪಾಕ್ಷ, ಸಹಕಾರಿ ಅಭಿವೃದ್ಧಿ ಅಧಿಕಾರಿ ಸುರೇಶ್‌, ಮುಖಂಡರಾದ ಗುಳಿಗೇನಹಳ್ಳಿ ನಾಗರಾಜು, ಅಜ್ಜಣ್ಣ, ಮಂಜುನಾಥ್‌, ತಿಮ್ಮಣ್ಣ, ಬಸವರಾಜ, ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಹಲವರು ಹಾಜರಿದ್ದರು.

ಸಬ್ಸಿಡಿ ದರದಲ್ಲಿ 600 ರಬ್ಬರ್‌ ಮ್ಯಾಟ್‌ ವಿತರಣೆ: ಇದೇ ಸಂದರ್ಭದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮರಣ ಹೊಂದಿದ ರಾಸುಗಳ ಸುಮಾರು 3 ಲಕ್ಷ ರು.ಗಳ ವಿಮಾ ಸೌಲಭ್ಯದ ಚೆಕ್‌ಗಳನ್ನು, ಎಲ್ಲಾ ಸಹಕಾರ ಸಂಘಗಳ ಹಾಲು ಉತ್ಪದಕರಿಗೆ ಶೇ. 50 ಸಬ್ಸಿಡಿ ದರದಲ್ಲಿ ಸುಮಾರು 600 ರಬ್ಬರ್‌ ಮ್ಯಾಟ್‌ಗಳನ್ನು, ರಾಸುಗಳ ಉತ್ತಮ ಮೇವನ್ನು ಬೆಳೆಯಲು ಸುಮಾರು 12 ಟನ್‌ಗಳಷ್ಟುಜೋಳವನ್ನು ಹಾಗೂ ಸಂಘಗಳ ಹಾಲು ಶೇಖರಣಾ ಕಾರ್ಯಗಳಿಗೆ ಶೇ. 75 ಸಬ್ಸಿಡಿ ದರದಲ್ಲಿ ಸುಮಾರು 12 ಗಣಕ ಯಂತ್ರಗಳನ್ನು ವಿತರಣೆ ಮಾಡಲಾಯಿತು.

ಮೆಗಾ ಡೇರಿ ಸ್ಥಾಪನೆಯಿಂದ ಒಕ್ಕೂಟಕ್ಕೆ ಶಕ್ತಿ: ರಾಜ್ಯದ 14 ಹಾಲು ಒಕ್ಕೂಟಗಳಲ್ಲಿ ತುಮಕೂರು ಹಾಲು ಒಕ್ಕೂಟಕ್ಕೆ ತನ್ನದೇ ಆದ ಶಕ್ತಿ ಇದೆ. ಹಾಲಿನ ಉತ್ತಮ ಮಾರುಕಟ್ಟೆಸ್ಥಾಪನೆಗೆ, ವಿವಿಧ ಬಗೆಯ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಉದ್ದೇಶದಿಂದ ಹೈನುಗಾರರಿಗೆ ಅನುಕೂಲವಾಗಲು ತುಮಕೂರು ಬಳಿ 200 ಕೋಟಿ ರು.ವೆಚ್ಚದ ಮೆಗಾ ಡೇರಿ ಕಾಮಗಾರಿ ಭರದಿಂದ ಸಾಗುತ್ತಿದೆ. ಶೀಘ್ರದಲ್ಲಿಯೇ ಮೆಗಾ ಡೇರಿ ಉದ್ಘಾಟನೆಯಾಗಲಿದೆ. ಇದರಿಂದ ಉದ್ಯೋಗದ ಜೊತೆಗೆ ಹಾಲಿಗೂ ಬೇಡಿಕೆ ಹೆಚ್ಚಲಿದೆ ಎಂದು ಗೌಡ ಹೇಳಿದರು.

3ಶಿರಾ2: ಶಿರಾದ ನಂದಿನಿ ಕ್ಷೀರಭವನದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಮರಣ ಹೊಂದಿದ ರಾಸುಗಳಿಗೆ ಮಾಜಿ ರೇಷ್ಮೆ ನಿಗಮದ ಅಧ್ಯಕ್ಷ ಎಸ್‌.ಆರ್‌.ಗೌಡ ಪರಿಹಾರದ ಚೆಕ್‌ ವಿತರಿಸಿದರು.

Follow Us:
Download App:
  • android
  • ios