ಬೆಂಗಳೂರು ನಗರದ ವಿವಿಧ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಕಷ್ಟು ರೈಲುಗಳ ಸೇವೆ ಕಲ್ಪಿಸಿದ್ದು, ಕಡಿಮೆ ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಬೆಂಗಳೂರು (ಡಿ.11): ಬೆಂಗಳೂರು ನಗರದ ವಿವಿಧ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಕಷ್ಟು ರೈಲುಗಳ ಸೇವೆ ಕಲ್ಪಿಸಿದ್ದು, ಕಡಿಮೆ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಸಂಚಾರ ದಟ್ಟಣೆ, ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ರೈಲು ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್‌ಸಿಂಗ್‌ ಮನವಿ ಮಾಡಿದ್ದಾರೆ.

ಶನಿವಾರ ವಿಭಾಗೀಯ ರೈಲ್ವೆಯಿಂದ ಮಾಧ್ಯಮ ಮಾಹಿತಿ ನೀಡಿರುವ ಅವರು, ‘ವಿಮಾನ ಪ್ರಯಾಣಿಕರು ಸುಲಭ, ತ್ವರಿತ ಮತ್ತು ಅನುಕೂಲಕರವಾಗಿ ವಿಮಾನ ನಿಲ್ದಾಣವನ್ನು ತಲುಪಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರೈಲು ನಿಲ್ದಾಣಕ್ಕೆ (ಕೆಐಎಡಿ ಹಾಲ್ಟ್‌) ರೈಲು ಸೇವೆಗಳನ್ನು ಪರಿಚಯಿಸಲಾಗಿದೆ. ನಿತ್ಯ ನಗರದ ವಿವಿಧ ರೈಲು ನಿಲ್ದಾಣಗಳಿಂದ 8 ರೈಲುಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತವೆ. ಟಿಕೆಟ್‌ ದರ ಕೇವಲ 30 ರು. ಇದೆ. ಮುಂಬರುವ ದಿನಗಳಲ್ಲಿ ರೈಲುಗಳ ಓಡಾಟ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Bengaluru: ರಾಜಧಾನಿಯ ಎಲ್ಲ ಬೀದಿದೀಪ ಇನ್ನು ಎಲ್‌ಇಡಿ

ನಗರದ ವಿವಿಧ ನಿಲ್ದಾಣಗಳಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಕೆಎಸ್‌ಆರ್‌ ಬೆಂಗಳೂರು - ದೇವನಹಳ್ಳಿ ಎಕ್ಸ್‌ಪ್ರೆಸ್‌, ಯಲಹಂಕ-ಕೆಐಎಡಿ ಎಕ್ಸ್‌ಪ್ರೆಸ್‌, ಬೆಂಗಳೂರು ಕಂಟೋನ್ಮೆಂಟ್‌- ದೇವನಹಳ್ಳಿ ಎಕ್ಸ್‌ಪ್ರೆಸ್‌, ಯಲಹಂಕ - ದೇವನಹಳ್ಳಿ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು - ಕೋಲಾರ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು - ಕೋಲಾರ ಪ್ಯಾಸೆಂಜರ್‌, ಯಶವಂತಪುರ - ದೇವನಹಳ್ಳಿ ಎಕ್ಸ್‌ಪ್ರೆಸ್‌ ರೈಲುಗಳಿವೆ. ಅಂತೆಯೇ ಹಿಂದಿರುಗಲು ದೇವನಹಳ್ಳಿ - ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌, ದೇವನಹಳ್ಳಿ - ಯಲಹಂಕ ಎಕ್ಸ್‌ಪ್ರೆಸ್‌, ದೇವನಹಳ್ಳಿ - ಬೆಂಗಳೂರು ಕಂಟೋನ್ಮೆಂಟ್‌ ಎಕ್ಸ್‌ಪ್ರೆಸ್‌, ಕೋಲಾರ - ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌, ಕೋಲಾರ - ಬೆಂಗಳೂರು ಕಂಟೋನ್ಮೆಂಟ್‌ ಪ್ಯಾಸೆಂಜರ್‌, ದೇವನಹಳ್ಳಿ - ಯಶವಂತಪುರ ಎಕ್ಸ್‌ಪ್ರೆಸ್‌ ರೈಲುಗಳಿವೆ. ವಿಮಾನ ನಿಲ್ದಾಣಕ್ಕೆ ಮೆಮು ಮತ್ತು ಡೆಮು ಸೇವೆಗಳ ಸಮಯ ಮತ್ತು ನಿಲುಗಡೆಗಳನ್ನು ರಾಷ್ಟ್ರೀಯ ರೈಲು ವಿಚಾರಣೆ ವ್ಯವಸ್ಥೆ (ಎಸ್‌ಟಿಇಎಸ್‌) ವೆಬ್‌ಸೈಟ್‌ನಿಂದ ಸಹ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಕಾಪಿ ಹೊಡೀತಿದ್ದೆ, ಗೂಂಡಾಗಿರಿ ಮಾಡಿ ಜೈಲಿಗೋಗಿದ್ದೆ: ಸಚಿವ ಶ್ರೀರಾಮುಲು

ದೊಡ್ಡಜಾಲ ಹಾಲ್ಟ್‌ ನಿಲ್ದಾಣದ ಪುನರಾರಂಭ ಹಾಗೂ ದೊಡ್ಡಜಾಲ ಮತ್ತು ಬೆಟ್ಟ ಹಲಸೂರಿನಲ್ಲಿ ಕೆಐಎಡಿ ರೈಲು ನಿಲ್ದಾಣಕ್ಕೆ ಸಂಚರಿಸುವ ಎಲ್ಲ ರೈಲುಗಳಿಗೆ ನಿಲುಗಡೆ ನೀಡುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಶ್ಯಾಮ್‌ಸಿಂಗ್‌ ಹೇಳಿದರು.