Asianet Suvarna News Asianet Suvarna News

ಬೆಂಗಳೂರು ವಿಪ್ರೋಗೆ ಜಲಮಂಡಳಿಯಿಂದ ನಿತ್ಯ 3 ಲಕ್ಷ ಲೀ. ಝೀರೋ ಬ್ಯಾಕ್ಟೀರಿಯಾ ನೀರು ಸರಬರಾಜು

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸ್ಸಿ) ಸಹಯೋಗದಲ್ಲಿ ಅಳವಡಿಸಿಕೊಂಡ ದೇಶೀಯ ತಂತ್ರಜ್ಞಾನದ ಮೂಲಕ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ 3 ಲಕ್ಷ ಲೀ. ನೀರನ್ನು ಪ್ರತಿದಿನ ವಿಪ್ರೋ ಕಂಪನಿಗೆ  ಸರಬರಾಜು ಮಾಡುವ ಕಾರ್ಯಕ್ಕೆ ಬೆಂಗಳೂರು ಜಲಮಂಡಳಿ ಆರಂಭಿಸಿದೆ.

Daily 3 lakh liter zero bacteria water supply from BWSSB to Bengaluru Wipro Company sat
Author
First Published May 2, 2024, 5:07 PM IST

ಬೆಂಗಳೂರು (ಮೇ 02): ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸ್ಸಿ) ವಿಜ್ಞಾನಿಗಳ ಸಹಯೋಗದಲ್ಲಿ ಅಳವಡಿಸಿಕೊಳ್ಳಲಾಗಿರುವ ದೇಶೀಯ ತಂತ್ರಜ್ಞಾನದ ಮೂಲಕ ಜಲಮಂಡಳಿ ಉತ್ಪಾದಿಸುತ್ತಿರುವ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರನ್ನು ವಿಪ್ರೋ ಕಂಪನಿಗೆ ಇಂದಿನಿಂದ ಸರಬರಾಜು ಮಾಡುವ ಕಾರ್ಯಕ್ಕೆ ಬೆಂಗಳೂರು ಜಲಮಂಡಳಿಯಿಂದ ಚಾಲನೆ ನೀಡಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರು ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವಂತಹ ಕ್ರಮಗಳಿಗೆ ಐಟಿ ಕಂಪನಿಗಳಿಂದ ಸಕಾರಾತ್ಮವಾದ ಪ್ರತಿಕ್ರಿಯೆ ದೊರೆಯುತ್ತಿದೆ. ವಿಪ್ರೋ ಎಸ್‌ಇಝಡ್‌ ಕೊಡತಿಯಲ್ಲಿ ಸಂಸ್ಕರಿಸಿದ ನೀರು ಸರಬರಾಜು ಕಾರ್ಯದ ಮೇಲುಸ್ತುವಾರಿ ವಹಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ, ಬೆಂಗಳೂರು ನಗರದ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರಿನ ಪಾತ್ರ ಬಹಳ ಮುಖ್ಯವಾಗಿದೆ. ಜಲಮಂಡಳಿಯ ವತಿಯಿಂದ ನಗರದಲ್ಲಿ 34 ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. 

ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು

ಇವುಗಳ ಮೂಲಕ ಪ್ರತಿ ದಿನ 1200 ಎಂ.ಎಲ್‌.ಡಿ ಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಬಲ್ಕ್‌ ಯೂಸರ್ಸ್‌ಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್‌ಗಳಿಂದ 6 ಎಂ.ಎಲ್‌.ಡಿ ಗೆ ತಲುಪಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಗುರಿ ನಮ್ಮದಾಗಿದೆ.

ಐ.ಟಿ ಕಂಪನಿಗಳಿಂದ ಹೆಚ್ಚಿನ ಬೇಡಿಕೆ: 
ಭಾರತದ ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿರುವಂತಹ ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿಯ ಇಂಜಿನೀಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಇಂದು ಪ್ರತಿ ದಿನ ಸುಮಾರು 1 ಕೋಟಿ ಲೀಟರ್‌ ನಷ್ಟು ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ. ಇದೀಗ ನಗರದ ಅಗರ, ಕೆ.ಸಿ ವ್ಯಾಲಿ ಮತ್ತು ಬೆಳ್ಳಂದೂರು ಎಸ್‌.ಟಿ.ಪಿ ಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬಂದಿದೆ ಎಂದು ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು. 

ಬೆಂಗಳೂರು: ಮದುವೆ ಪ್ರಸ್ತಾಪ ತಿರಸ್ಕರಿಸಿದ ವಿವಾಹಿತೆ ಮಹಿಳೆ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ ಅರ್ಬಾಜ್

ವಿಪ್ರೋಗೆ ಟ್ಯಾಂಕರ್‌ ಗಳ ಮೂಲಕ ಪ್ರತಿ ದಿನ 3 ಲಕ್ಷ ಸಂಸ್ಕರಿಸಿದ ನೀರು:
ವಿಪ್ರೋ ಕಂಪನಿ ಕೆಲವು ದಿನಗಳ ಹಿಂದೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಅಳವಡಿಸಿಕೊಳ್ಳಲಾಗಿರುವ ನೂತನ ತಂತ್ರಜ್ಞಾನದ ಮೂಲಕ ಶುದ್ದೀಕರಿಸಲಾಗುತ್ತಿರುವ ಝೀರೋ ಬ್ಯಾಕ್ಟೀರಿಯಲ್‌ ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರನ್ನ ಸರಬರಾಜು ಮಾಡಲು ಇಂದಿನಿಂದ ಪ್ರಾರಂಭಿಸಲಾಗಿದೆ. ಈಗಾಗಲೇ ಇನ್ನಿತರ ಕಂಪನಿಗಳಾದ ಹೆಚ್‌.ಎ.ಎಲ್‌, ಬ್ರೂಕ್‌ಫಿಲ್ಡ್‌ ಮತ್ತು ಅಡೋಬ್‌ ಸಿಸ್ಟಮ್ಸ್‌ ಕಂಪನಿಗಳ ಜೊತೆಗೆ 40 ಐಟಿ ಪಾರ್ಕಗಳು ಬೇಡಿಕೆಯಿಟ್ಟಿದ್ದು ಜಲಮಂಡಳಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

Follow Us:
Download App:
  • android
  • ios