ಸಕ್ಕರೆ ಕಾಯಿಲೆ ವಿರುದ್ಧ, ಸೈಕಲ್ ರೈಡ್- ಕಾಶ್ಮೀರ ಟು ಕನ್ಯಾಕುಮಾರಿ ವರೆಗೆ ಅಭಿಯಾನ

ಧಾರವಾಡ ಜಿಲ್ಲೆಯ ವೀರನಾರಾಯಣ ಕುಲಕರ್ಣಿ ಅವರು ಡಯಾಬಿಟಿಸ್ ಮೆಡಿಸಿನ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ ಬಗ್ಗೆ  ಅರಿವು ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. 

Cycle Ride- Campaign from Kashmir to Kanyakumari Against Diabetes gow

ಹುಬ್ಬಳ್ಳಿ (ಮಾ.3): ಇತ್ತೀಚೆಗೆ  ಮಧುಮೇಹ ಕಾಯಿಲೆ, ಯಾವ ವಯಸ್ಸಿನವರಲ್ಲಿ ಬರುತ್ತಿದೆ ಎಂಬುವುದೇ ಅಂದಾಜಿಸುವುದೆ ಕಷ್ಟದ‌ ಕೆಲಸ. ಚಿಕ್ಕ‌ಮಕ್ಕಳಲು ಈಗ ಡಯಾಬಿಟಿಸ್ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ಡಯಾಬಿಟಿಸ್ ನಿಂದ ಅರೋಗ್ಯ ಮೇಲೆ‌ ಅಡ್ಡ ಪರಿಣಾಮ ಜಾಸ್ತಿ. ಇದೇ ಕಾರಣಕ್ಕೆ ಇಲ್ಲೋಬ್ಬರು ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ.‌ ಅವರ ವಿನೂತನ ಅಭಿಯಾನ ಈಗ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಸೈಕಲ್ ಸವಾರಿಯನ್ನು ನಾವು ಸಂಚಾರಕ್ಕೆ ಹಾಗೂ ವ್ಯಾಯಾಮ ಮಾಡಲು ಬಳಸುತ್ತೇವೆ. ಆದರೆ ಧಾರವಾಡ ಜಿಲ್ಲೆಯ ವೀರನಾರಾಯಣ ಕುಲಕರ್ಣಿ ಅವರು ಡಯಾಬಿಟಿಸ್ ಮೆಡಿಸಿನ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ ಬಗ್ಗೆ  ಅರಿವು ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. 

ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸುತ್ತಿ‌ ಬಂದಿದ್ದಾರೆ. ವೃತ್ತಿಯಿಂದ ಫ್ರೀಡಂ ಫಾರ್ ಡಯಾಬಿಟಿಸ್ ಸಂಸ್ಥೆಯ ಉದ್ಯೋಗಿಯಾಗಿರುವ ವೀರನಾರಾಯಣ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 4000 ಕಿಲೋಮೀಟರ ಸೈಕಲ್ ರೈಡ್ ಮಾಡುವ ಮೂಲಕ ಮಧುಮೇಹ ಮುಕ್ತ ಭಾರತದ ಕನಸನ್ನು ಹೊತ್ತು‌ ಮುನ್ನಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಾಲಕನ ಮೇಲೆ ಡೆಡ್ಲಿ ಡಾಗ್ ಅಟ್ಯಾಕ್: ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ

ಇನ್ನೂ k2k cycle Ride ಶೀರ್ಷಿಕೆ ಅಡಿಯಲ್ಲಿ ತಮ್ಮ ನಲವತ್ತು ದಿನಗಳ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದು, ರವಿವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಈಗಾಗಲೇ ದೇಶಪಾಂಡೆ ಫೌಂಡೇಶನ್ ಸೇರಿದಂತೆ ಬಹುತೇಕ ಕಡೆಯಲ್ಲಿ ಕರ್ತವ್ಯ ನಿರ್ವಹಿಸಿರುವ ವೀರನಾರಾಯಣ ಕುಲಕರ್ಣಿ ಅವರು ರಾಜ್ಯದ ವಿವಿಧ ಮೂಲೆಯಲ್ಲಿರುವ ವಿವಿಧ ಸಂಘ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಡಯಾಬಿಟಿಸ್ ರೋಗದಿಂದ‌ ಯಾವ ರೀತಿಯಲ್ಲಿ ನಮ್ಮ ಜೀವನವನ್ನು ಕಾಪಾಡಿಕೊಳ್ಳಬೇಕು ಎಂಬುವಂತ ಮಹತ್ವದ ಸಂಗತಿಯೊಂದಿಗೆ ದೇಶ ಪರ್ಯಟನೆ ಮಾಡುತ್ತಿದ್ದು, ಅದರಲ್ಲೂ ಸೈಕಲ್ ಮೂಲಕವೇ ಇಂತಹದೊಂದು ಅಭಿಯಾನ ಮಾಡುತ್ತಿರುವುದು ವಿಶೇಷವಾಗಿದೆ.

Social Service : ಪ್ರತಿ ಸೈಕಲ್ ನಿಲ್ಲಿಸಿ ಲೈಟ್ ಹಾಕ್ತಿದ್ದಾಳೆ ಈ ಹುಡುಗಿ..

ಒಟ್ಟಿನಲ್ಲಿ ಸೈಕಲ್ ರೈಡ್ ಮೂಲಕ ಮಧುಮೇಹ ನಿಯಂತ್ರಣದ ಜೊತೆಗೆ ಮಧುಮೇಹ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ಕನಸನ್ನು ಹೊತ್ತಿದ್ದಾರೆ. ಬಿಸಿಲು, ಗಾಳಿ, ಚಳಿ ಎನ್ನದೆಯೇ ಸಾರ್ವಜನಿಕ ಕಾಳಜಿಯ ಜೊತೆಗೆ ಜನರ ಜೀವನದ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವ ಕಾರ್ಯಕ್ಕೆ ಮುಂದಾಗಿರುವ ವೀರನಾರಾಯಣ ಕುಲಕರ್ಣಿ ಅವರಿಗೆ ಒಂದು ಹ್ಯಾಟ್ಸಪ್ ಹೇಳಲೇಬೇಕು.

Latest Videos
Follow Us:
Download App:
  • android
  • ios