Asianet Suvarna News Asianet Suvarna News

ಗದಗ: ಮಾತೃ ಜಿಲ್ಲೆಗೆ ತೆಲಂಗಾಣ ಪೊಲೀಸ್‌ ಆಯುಕ್ತ ವಿಶ್ವನಾಥ ಸಜ್ಜನರ್‌ ನೆರವು

* ವಿಶ್ವನಾಥ ಸಜ್ಜನರ್‌ರಿಂದ ವೈದ್ಯಕೀಯ ಉಪಕರಣ ದೇಣಿಗೆ
* ಗದುಗಿನ ಕೋವಿಡ್‌ ಸಂಕಷ್ಟ ನಿವಾರಣೆಗೆ ಕೈಜೋಡಿಸಿದ ಸಜ್ಜನರ್‌
* ಜಿಲ್ಲಾಡಳಿತಕ್ಕೆ ವೈದ್ಯಕೀಯ ಔಷಧಿ ಸಾಮಗ್ರಿ ಹಸ್ತಾಂತರ 
 

Cyberabad Police Commissioner Vishwanath Sajjanar Assisted to Gadag grg
Author
Bengaluru, First Published May 29, 2021, 3:35 PM IST

ಗದಗ(ಮೇ.29):  ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಗದಗ ಮೂಲದವರಾದ ತೆಲಂಗಾಣದ ಸೈಬರಾಬಾದ್‌ನ ಪೊಲೀಸ್‌ ಆಯುಕ್ತ, ಹಿರಿಯ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ್‌ ಅವರು ಕೋವಿಡ್‌ ನಿಯಂತ್ರಣ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.  ದೂರದ ತೆಲಂಗಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸಹ ಗದುಗಿನ ಕೋವಿಡ್‌ ಸಂಕಷ್ಟ ನಿವಾರಣೆಗೆ ಕೈಜೋಡಿಸಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಆಕ್ಸಿಜನ್‌ ಕಾನ್ಸಂಟ್ರೇಟರ್‌(22), ಆಕ್ಸಿಜನ್‌ ಸಿಲಿಂಡರ್‌(84), ಕೋವಿಡ್‌ ಕಿಟ್‌(2000), ಮಾಸ್ಕ್‌(20000), ಸ್ಯಾನಿಟೈಸರ್‌(200 ಲೀ), ಫೇಸ್‌ಶೀಲ್ಡ್‌(10000),ರೆಮ್‌ಡಿಸಿವಿರ್‌(24 ಯುನಿಟ್‌) ಸೇರಿದಂತೆ ಇತರ ಔಷಧಿ ಸಾಮಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ತಲುಪಿಸಿದ್ದಾರೆ.

'ಸಜ್ಜನರ ಇಷ್ಟು ದೊಡ್ಡ ಹುದ್ದೆಗೇರಿದರೂ ಅಹಂ ಮಾತ್ರ ಇಲ್ಲ'

ಹಿರಿಯ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ ಅವರ ಸಹೋದರ ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ಡಾ. ಎಂ.ಸಿ. ಸಜ್ಜನರ ಅವರು ಶುಕ್ರವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ವೈದ್ಯಕೀಯ ಔಷಧಿ ಸಾಮಗ್ರಿಗಳನ್ನು ಹಸ್ತಾಂತಿರಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios