ಬೆಂಗಳೂರು (ಸೆ.10): ವಿದೇಶದಿಂದ ಕಳ್ಳ ಹಾದಿಯಲ್ಲಿ ರಾಜ್ಯಕ್ಕೆ ನುಸುಳುವ ಮಾದಕ ವಸ್ತು ಪತ್ತೆ ಕಾರ್ಯಾಚರಣೆಯನ್ನು ಬಿರುಸುಗೊಳಿಸಿರುವ ಸೀಮಾ ಸುಂಕ (ಕಸ್ಟಮ್ಸ್‌) ಅಧಿಕಾರಿಗಳು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ ಮತ್ತೆ 1 ಕೋಟಿ ರು. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಬೆಲ್ಜಿಯಂ ದೇಶದಿಂದ ಎಲೆಕ್ಟ್ರಾನಿಕ್‌ ಮಸಾಜ್‌ ಯಂತ್ರಗಳಲ್ಲಿ ಅಡಗಿಸಿ ಕೆಐಎಗೆ ಕೊರಿಯರ್‌ ಮೂಲಕ ಡ್ರಗ್ಸ್‌ ರವಾನೆಯಾಗಿದೆ. ಮಂಗಳವಾರ ಶಂಕೆ ಮೇರೆಗೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲಿಸಿದಾಗ ಡ್ರಗ್ಸ್‌ ಪತ್ತೆಯಾಗಿದೆ. ಆದರೆ ಈ ವಸ್ತು ಯಾರಿಗೆ ತಲುಪಬೇಕಿತ್ತು. ಯಾರೂ ಕಳುಹಿಸಿದ್ದರು ಎಂಬುದು ಗೊತ್ತಾಗಿಲ್ಲ. 

ಈಗ 1,980 ಗ್ರಾಂ. ಎಂಡಿಎಂಎ/ ಎಕ್ಟಾಸಿ ಮಾತ್ರೆಗಳು ಸೇರಿದಂತೆ .1 ಕೋಟಿ ಮೌಲ್ಯದ ಡ್ರಗ್ಸ್‌ ಸಿಕ್ಕಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೆಐಎ ವಿಮಾನದಲ್ಲಿ .1.09 ಕೋಟಿ ಮೌಲ್ಯದ ಗಾಂಜಾವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಹದಿನೈದು ದಿನಗಳ ಅವಧಿಯಲ್ಲಿ ಇದೂ ಮೂರನೇ ದಾಳಿಯಾಗಿದೆ.