ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ

ಅಕ್ರಮ ಮದ್ಯಮಾರಾಟ ಹೆಚ್ಚಾಗಿ ನಡೆಯುತ್ತಿದ್ದು ಸಾಕಷ್ಟು ಕಡೆಗಳಲ್ಲಿ ವಾಸದ ಮನೆಗಳಲ್ಲಿಯೇ ಅಕ್ರಮ ಮದ್ಯ ಮಾರಾಟ ದೊಡ್ಡ ದಂಧೆಯಾಗಿ ನಡೆಯುತ್ತಿದೆ. ಇದರಿಂದ ಯುವಕರು ಹಾಗೂ ಕೂಲಿಕಾರರು ದುಶ್ಚಟದ ದಾಸರಾಗುವ ಮೂಲಕ ಕುಟುಂಬಗಳ ನೆಮ್ಮದಿ ಹಾಳಾಗಿದ್ದು, ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ದಸಂಸ ತಾಲೂಕು ಶಾಖೆ ಸಂಚಾಲಕ ನಾಗತೀಹಳ್ಳಿ ಕೃಷ್ಣಮೂರ್ತಿ ಒತ್ತಾಯಿಸಿದರು.

Curb on sale of illegal liquor snr

 ತಿಪಟೂರು: ಅಕ್ರಮ ಮದ್ಯಮಾರಾಟ ಹೆಚ್ಚಾಗಿ ನಡೆಯುತ್ತಿದ್ದು ಸಾಕಷ್ಟು ಕಡೆಗಳಲ್ಲಿ ವಾಸದ ಮನೆಗಳಲ್ಲಿಯೇ ಅಕ್ರಮ ಮದ್ಯ ಮಾರಾಟ ದೊಡ್ಡ ದಂಧೆಯಾಗಿ ನಡೆಯುತ್ತಿದೆ. ಇದರಿಂದ ಯುವಕರು ಹಾಗೂ ಕೂಲಿಕಾರರು ದುಶ್ಚಟದ ದಾಸರಾಗುವ ಮೂಲಕ ಕುಟುಂಬಗಳ ನೆಮ್ಮದಿ ಹಾಳಾಗಿದ್ದು, ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ದಸಂಸ ತಾಲೂಕು ಶಾಖೆ ಸಂಚಾಲಕ ನಾಗತೀಹಳ್ಳಿ ಕೃಷ್ಣಮೂರ್ತಿ ಒತ್ತಾಯಿಸಿದರು.

ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಹಳ್ಳಿಹಳ್ಳಿಗಳಲ್ಲೂ ಮದ್ಯ ಸಿಗುತ್ತಿರುವುದರಿಂದ ಹಳ್ಳಿಗಳಲ್ಲಿರುವ ಯುವಜನತೆ, ವಿದ್ಯಾರ್ಥಿಗಳು ಸಹ ಕುಡಿತದ ದಾಸರಾಗುತ್ತಿರುವುದು ಕಂಡು ಬರುತ್ತಿದೆ. ಕೂಲಿ ಮಾಡಿ ಅದರಿಂದ ಬಂದ ಹಣವನ್ನು ಕುಡಿತಕ್ಕೆ ಖರ್ಚು ಮಾಡುತ್ತಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟಕರವಾಗುತ್ತಿದೆ ಎಂದು ಮಹಿಳೆಯರು ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಕೂಲಿ ಮಾಡುವವರಿಗೆ, ಯುವಕರಿಗೆ ಕೇವಲ ಮದ್ಯ ಕುಡಿಸಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದರಿಂದಲೂ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೂಡಲೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ದಲಿತರು, ಎಲ್ಲಾ ವರ್ಗದ ಜನರು ಸುಭದ್ರತೆಯಿಂದ ಇರಲು ಪೊಲೀಸ್ ಇಲಾಖೆ ಪಾತ್ರ ಬಹಳ ಮಹತ್ವದಾಗಿದ್ದು ಯಾವುದೇ ಆಮಿಷಗಳಿಗೆ ಒಳಗಾಗದೆ ಎಲ್ಲರಿಗೂ ಕಾನೂನು ಬದ್ಧವಾಗಿ ನ್ಯಾಯ ಒದಗಿಸಿಕೊಡಬೇಕು. ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಬೇಕು. ದಲಿತರ ಮೇಲೆ ದೌರ್ಜನ್ಯ, ಅನ್ಯಾಯಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಾಜೇಶ್‌ ದಲಿತರ ಕುಂದುಕೊರತೆ ಆಲಿಸಿ ದಲಿತರ ಸಮಸ್ಯೆಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಅಕ್ರಮ ಮದ್ಯ ಮಾರಾಟದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಸಂಘಟನಾ ಸಂಚಾಲಕರಾದ ಹುಲಿಹಳ್ಳಿ ರಂಗಸ್ವಾಮಿ, ರವೀಶ್ ಮಂಜುನಾಥಪುರ, ಜಯಣ್ಣ ಇದ್ದರು.

Latest Videos
Follow Us:
Download App:
  • android
  • ios