ಕಟೀಲು ದೇಗುಲದಿಂದ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ: ನಳಿನ್‌ ಕುಮಾರ್‌

ಕಟೀಲು ದೇಗುಲದ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ಭ್ರಮರ ಇಂಚರ ನುಡಿಹಬ್ಬ ಸಮಾರೋಪಗೊಂಡಿತು. ಸಮಾರೋಪದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್, ಕಟೀಲು ದೇಗುಲವು ದಶಕಗಳಿಂದ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಎಲ್ಲ ರೀತಿಯಲ್ಲೂ ಉತ್ತೇಜಿಸುತ್ತಾ ಬಂದಿದೆ.

Cultural education for students from Kateelu Temple Says Nalin Kumar Kateel gvd

ಮೂಲ್ಕಿ (ಡಿ.04): ಕಟೀಲು ದೇಗುಲದ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ಭ್ರಮರ ಇಂಚರ ನುಡಿಹಬ್ಬ ಸಮಾರೋಪಗೊಂಡಿತು. ಸಮಾರೋಪದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್, ಕಟೀಲು ದೇಗುಲವು ದಶಕಗಳಿಂದ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಎಲ್ಲ ರೀತಿಯಲ್ಲೂ ಉತ್ತೇಜಿಸುತ್ತಾ ಬಂದಿದೆ. ದೇಗುಲ ವಾರ್ಷಿಕ ಒಂಭತ್ತೂವರೆ ಕೋಟಿ ರುಪಾಯಿಯನ್ನು ಶಿಕ್ಷಣಕ್ಕಾಗಿ ವ್ಯಯಿಸುತ್ತಿರುವುದು ಅಭಿನಂದನೀಯ ಎಂದರು. ನುಡಿಹಬ್ಬ ಸಮಾರೋಪದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಮ್ಮೇಳನಾಧ್ಯಕ್ಷ ಕೆ.ಪಿ. ರಾವ್ ಹಾಗೂ ಸಂಸ್ಥೆಯ ಸಾಧಕ ಹಿರಿಯ ವಿದ್ಯಾರ್ಥಿಗಳಾದ ಚಂದ್ರಶೇಖರ ಬೆಳ್ಚಡ, ಸೀತಾರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್‌, ಸನತ್ ಕುಮಾರ ಶೆಟ್ಟಿ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಜೆ.ಸಿ ಕುಮಾರ್, ಯೂನಿಯನ್ ಬ್ಯಾಂಕಿನ ಮಹೇಶ್ ಬಿಪಿನ್ ಪ್ರಸಾದ್ ಶೆಟ್ಟಿ, ಡಾ. ಸುರೇಶ್ ರಾವ್ ಮತ್ತಿತರರಿದ್ದರು. ಕಸಾಪ ಅಧ್ಯಕ್ಷ ಡಾ. ಶ್ರೀನಾಥ್, ವಿದ್ಯಾರ್ಥಿ ಅನಿಕೇತ್ ಬರೆದ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಶೈಲಜಾ ನಿರೂಪಿಸಿದರು. ಚಂದ್ರಶೇಖರ ಭಟ್ ವಂದಿಸಿದರು.

ಪ್ರಧಾನಿ ಮೋದಿ ತುಂಬಾ ಎತ್ತರದ, ಜಗತ್ತು ಗೌರವಿಸುವ ನಾಯಕ: ಸಿ.ಟಿ.ರವಿ

ವಿವಿಧ ಕ್ಷೇತ್ರಗಳ ಸಾಧಕರಿಂದ ವಿಚಾರಗೋಷ್ಠಿ: ಕಟೀಲು ಕಾಲೇಜಿನಲ್ಲಿ ನಡೆಯುತ್ತಿರುವ ನುಡಿಹಬ್ಬದಲ್ಲಿ ಯಕ್ಷಗಾನ ಮತ್ತು ಸಂಸ್ಕಾರ ಗೋಷ್ಠಿಯಲ್ಲಿ ಅಷ್ಟಾವಧಾನಿ ಕಬ್ಬಿನಾಲೆ ಡಾ. ವಸಂತ ಭಾರದ್ವಾಜ್‌ ಮಾತನಾಡಿದರು. ವಿದ್ವಾಂಸ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ನುಡಿಹಬ್ಬದಲ್ಲಿ ಸಂಸ್ಕೃತ ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದರು. ಭಟ್ ಆ್ಯಂಡ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಸೆಲೆಬ್ರಿಟಿಯಾಗಿರುವ ಸುದರ್ಶನ್ ಬೆದ್ರಾಡಿ, ಹೋಳಿಗೆ ಉದ್ಯಮದ ಮೂಲಕ ಸಾಧನೆ ಮಾಡಿರುವ ಸುಧಾಕರ ಅಸೈಗೋಳಿ ನುಡಿಹಬ್ಬದಲ್ಲಿ ಜನಸಾಮಾನ್ಯ ಸಾಧಕರು ಗೋಷ್ಟಿಯಲ್ಲಿ ಮಾತನಾಡಿದರು.

ಖ್ಯಾತನಾಮರ ಹಸ್ತಾಕ್ಷರ, ಅಂಚೆಚೀಟಿ ಮುಂತಾದ ತನ್ನ ಸಂಗ್ರಹದ ವೈಶಿಷ್ಟ್ಯಗಳನ್ನು ರಾಮಕೃಷ್ಣ ಮಲ್ಯ ಪ್ರದರ್ಶಿಸಿದರು. 25 ವರುಷಗಳಿಂದ ಕಮ್ಮಾರಿಕೆ ಕಾಯಕದಿಂದ ಯಶಸ್ಸನ್ನು ಕಂಡಿರುವ ಲೀಲಾವತಿ ಆಚಾರ್ಯ ಗುತ್ತಿಗಾರು ಮಾತನಾಡಿದರು. ಯಶೋದಾ ಲಾಯಿಲ, ನಿರಾಶ್ರಿತರ ಪರಿಹಾರ ಕೇಂದ್ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಪಚ್ಚನಾಡಿ ಮಾತನಾಡಿದರು.

ಗ್ಯಾರಂಟಿಗಳ ಕಾಂಗ್ರೆಸ್‌ಗೆ ಮತದಾರರಿಂದ ತಪರಾಕಿ: ಶಾಸಕ ಆರಗ ಜ್ಞಾನೇಂದ್ರ

ಕೆ.ಪಿ.ರಾವ್ ಹೇಳಿದ ಅಭ್ಯುದಯ ಕಥೆ: ಉಡುಪಿಯಲ್ಲಿ ಹೊಟೇಲೊಂದರಲ್ಲಿ ಕೂತಿದ್ದಾಗ ಒಬ್ಬರು ನನ್ನನ್ನು ಹುಡುಕಿಕೊಂಡು ಬಂದಿದ್ದರು. ಏನು ಬಂದಿರಿ ಎಂದಾಗ ಮೂಡುಬಿದಿರೆಯಲ್ಲಿ ಟೈಪ್‌ರೈಟಿಂಗ್ ಶಾಲೆ ನಡೆಸುತ್ತಿದ್ದವರೊಬ್ಬರು ಎಷ್ಟೋ ಮಂದಿಗೆ ಟೈಪ್‌ರೈಟಿಂಗ್‌ ಕಲಿಸಿ, ತನ್ನ ಹಾಗೂ ತನ್ನಲ್ಲಿಗೆ ಬಂದಿದ್ದವರಿಗೆ ಉದ್ಯೋಗ ಕೊಡಿಸುತ್ತಿದ್ದರು. ಆಗಿನ ಕಾಲಕ್ಕೆ ಉದ್ಯೋಗ ಸಿಗಲು ಟೈಪ್‌ರೈಟಿಂಗ್ ಶಿಕ್ಷಣ ಮುಖ್ಯವಾಗಿತ್ತು. ಆದರೆ ಕೆ.ಪಿ. ರಾವ್, ಕನ್ನಡವನ್ನು ಕಂಪ್ಯೂಟರ್‌ಗೆ ತಂದು ನಮ್ಮ ಟೈಪ್‌ರೈಟಿಂಗ್ ಉದ್ಯೋಗ ಮುಚ್ಚಿ ಹೋಗುವಂತಾಗಿದೆ ಎಂದು ಅವರು ಹೇಳಿದ್ದನ್ನು ಕೇಳಿ ಶಾಕ್ ಆಯಿತು. ಅಭ್ಯುದಯ ಎಂಬುದು ಒಂದನ್ನು ಒಳ್ಳೆಯದನ್ನು ಮಾಡಿದರೆ ಇನ್ನೊಂದು ಕಡೆ ನಷ್ಟವಾಗಿರುತ್ತದೆ. ಕಂಪ್ಯೂಟರ್ ಅನೇಕ ಕೆಲಸಗಳನ್ನು ಮಾಡಿದರೂ ಆಹಾರ ಉತ್ಪಾದಿಸಲು ಯಾವ ಕಂಪ್ಯೂಟರ್‌ಗೂ ಸಾಧ್ಯವಿಲ್ಲ. ಕಮ್ಮಾರಿಕೆ, ಜನಸೇವೆ ಮಾಡುವುದಿಲ್ಲ. ಅದಕ್ಕೆ ನಾವೇ ಆಗಬೇಕು ಎಂದರು.

Latest Videos
Follow Us:
Download App:
  • android
  • ios