ಕಾಂಗ್ರೆಸ್‌ನವರ ದೃಷ್ಟಿಯಲ್ಲಿ ಎಲ್ಲರೂ ಭ್ರಷ್ಟಾಚಾರ ಮಾಡಬೇಕು| ರಾಜ್ಯದ ಹಣ ಕೊಳ್ಳೆ ಹೊಡೆದ ಕೈ ನಾಯಕರು| ಲೋಕಾಯುಕ್ತ ಮುಚ್ಚಿದ್ದು ಯಾರು?| ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಖಚಿತ: ಸಿ.ಟಿ.ರವಿ| 

ಬೆಳಗಾವಿ(ಏ.10): ಬಿಜೆಪಿ ಸರ್ಕಾರ ಜನವಿರೋಧಿ ಎಂಬ ಪ್ರತಿಪಕ್ಷ ಕಾಂಗ್ರೆಸ್‌ ಮುಖಂಡರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಎಲ್ಲ ಹಗರಣಗಳೂ ಕಾಂಗ್ರೆಸ್‌ ಕಾಲದಲ್ಲಿ ನಡೆದಿದ್ದು ಕರ್ನಾಟಕ ಕಾಂಗ್ರೆಸ್‌ ಪಾಲಿಗೆ ಎಟಿಎಂ ಆಗಿತ್ತು ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರ ದೃಷ್ಟಿಯಲ್ಲಿ ಎಲ್ಲರೂ ಭ್ರಷ್ಟಾಚಾರ ಮಾಡಬೇಕು. ರಾಜ್ಯದ ಹಣವನ್ನು ಅವರು ಕೊಳ್ಳೆಹೊಡೆದರು ಎಂದು ಟೀಕಿಸಿದ್ದಾರೆ.

ಸಿ.ಟಿ.ರವಿ ಯಾವಾಗಲೂ ಸುಳ್ಳೆ ಹೇಳೋದು: ಸಿದ್ದರಾಮಯ್ಯ

ಇದೇ ವೇಳೆ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಖಚಿತ ಎಂದು ಅಭಿಪ್ರಾಯಪಟ್ಟರು. ತಮಿಳುನಾಡಿನಲ್ಲಿ ಹಿಂದಿಗಿಂತ ಇಂದು ಒಳ್ಳೆಯ ವಾತಾವರಣ ಇದೆ. ತಮಿಳುನಾಡು, ಪಾಂಡಿಚೇರಿಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರೋದು ಶತಸಿದ್ಧ. ಇನ್ನು ಕೇರಳದಲ್ಲಿ ಮೆಟ್ರೋಮ್ಯಾನ್‌ ಶ್ರೀಧರ ನೇತೃತ್ವದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ ಎಂದರು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ದಿದಿಗೆ ಟಾಟಾ ಹೇಳಲು ಜನ ಶುರು ಮಾಡಿದ್ದಾರೆ ಎಂದು ವ್ಯಂಗವಾಡಿದರು.