Chikkamagaluru: ಬೆಳೆ ಪರಿಹಾರ ರೈತರ ಖಾತೆಗೆ ಒಟ್ಟು 128.10 ಕೋಟಿ ರೂ ಹಣ ಸಂದಾಯ
ಕೆಲವು ತಿಂಗಳ ಹಿಂದೆ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳು ಮಣ್ಣುಪಾಲಾಗಿತ್ತು. ರೈತರ ಸಂಕಷ್ಟವನ್ನು ಅರಿತ ರಾಜ್ಯ ಸರ್ಕಾರ ಪರಿಹಾರದ ಹಣ ಬಿಡುಗಡೆ ಬಗ್ಗೆ ಘೋಷಣೆ ಮಾಡಿತ್ತು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.22): ಕೆಲವು ತಿಂಗಳ ಹಿಂದೆ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳು ಮಣ್ಣು ಪಾಲಾಗಿತ್ತು. ರೈತರ ಸಂಕಷ್ಟವನ್ನು ಅರಿತ ರಾಜ್ಯ ಸರ್ಕಾರ ಪರಿಹಾರದ ಹಣ ಬಿಡುಗಡೆ ಬಗ್ಗೆ ಘೋಷಣೆ ಮಾಡಿತ್ತು. ಸರ್ಕಾರದ ಆದೇಶದನ್ವಯ ಚಿಕ್ಕಮಗಳೂರು ಜಿಲ್ಲೆಯಲ್ಲಿ 128.10 ಕೋಟಿ ರೂ ಬೆಳೆ ಪರಿಹಾರ ವಿತರಣೆ ಮಾಡುವ ಮೂಲಕ ಜಿಲ್ಲಾಡಳಿತ ಶೇಕಾಡ 100 ರಷ್ಟು ಪ್ರಗತಿ ಸಾಧಿಸಲಾಗಿದೆ.
ಅತಿವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ: ಜಿಲ್ಲೆಯಲ್ಲಿ 56,569 ರೈತರಿಗೆ ಒಟ್ಟು 128.10 ಕೋಟಿ ರೂ. ಬೆಳೆಪರಿಹಾರವನ್ನು ಜಿಲ್ಲಾಡಳಿತ ವತಿಯಿಂದ ವಿತರಿಸುವ ಮೂಲಕ ಶೇಕಾಡ100 ರಷ್ಟು ಪ್ರಗತಿ ಸಾಧಿಸಲಾಗಿದೆ. ಆರಂಭದಲ್ಲಿ ಮೊದಲು 30,698 ರೈತರು ಬೆಳೆಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ ಮತ್ತು ಸೆಪ್ಟೆಂಬರ್ 15ವರೆಗೆ 21,317 ಮಂದಿ ಅರ್ಜಿ ಸಲ್ಲಿಸಿದ್ದು, 52015 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. 56569 ರೈತರಿಗೆ 128ಕೋಟಿಯಷ್ಟು ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿಂದ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿಕ್ಕೆ ವರದಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳು ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಮಳೆಯಿಂದ ಬಯಲು ಭಾಗದಲ್ಲಿ ಈರುಳ್ಳಿ, ಹತ್ತಿ, ಎಳ್ಳು, ಸೂರ್ಯಕಾಂತಿ, ಮೆಕ್ಕೆಜೋಳ, ಆಲೂಗಡ್ಡೆ, ಹೆಸರು, ಉದ್ದು ಬೆಳೆಗಳಿಗೆ ಹಾನಿಯಾಗಿದ್ದರೆ, ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಅಡಿಕೆ, ಭತ್ತದ ಪೈರುಗಳಿಗೆ ಮಳೆ ನೀರು ನುಗ್ಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿತ್ತು. ಕಾಫಿ ಮತ್ತು ತೆಂಗಿನ ತೋಟದಲ್ಲಿ ವಾರಗಟ್ಟಲೆ ನೀರು ನಿಂತಿದ್ದರಿಂದ ಬೆಳೆಗಳಿಗೆ ಕೊಳೆರೋಗ ಬಂದಿತ್ತು.
ಚಿಕ್ಕಮಗಳೂರು: ಒಂಟಿ ಸಲಗ ಭೈರನ ಸೆರೆ ಹಿಡಿದ ಬಗ್ಗೆ ಸ್ಥಳೀಯರಿಗೆ ಅನುಮಾನ...?
ರೈತರ ಖಾತೆಗೆ ಹಣ ಸಂದಾಯ: ಸರ್ಕಾರ ನೇರವಾಗಿ ರೈತರ ಖಾತೆಗೆ ಹಣವನ್ನು ಸಂದಾಯ ಮಾಡುತ್ತಿದ್ದು, ಕೆಲವು ರೈತರಿಗೆ ಈಗಾಗಲೇ ಹಣಬಿಡುಗಡೆಯಾಗಿದ್ದರೆ, ಮತ್ತೆ ಕೆಲವು ರೈತರಿಗೆ ಬಾಕಿ ಹಣ ಬರಬೇಕಿದ್ದು, ಕೆಲವು ರೈತರು ಪಾಸ್ಪುಸ್ತಕ ಹಿಡಿದು ಸಂಬಂಧಿಸಿದ ಇಲಾಖೆಗೆ ಎಡತಾಕುತ್ತಿದ್ದಾರೆ. ಉಳಿದ ಕೆಲ ರೈತರಿಗೆ ಈ ತಿಂಗಳ ಅಂತ್ಯದ ಒಳಗೆ ಹಣ ಸಂದಾಯವಾಗಲಿದ ಎಂದು ಜಿಲ್ಲಾಡಳಿತ ಸ್ಪಷ್ಟಡಸಿದೆ.
Chikkamagaluru: ಶೃಂಗೇರಿ ಕ್ಷೇತ್ರದ ಹುತ್ತಿನಮಕ್ಕಿಯಲ್ಲಿ ಸ್ಮಶಾನ ಇಲ್ಲ: ಶವವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು
ಅಕಾಲಿಕ ಮಳೆಯಿಂದ ಹೊಡೆತ: ಕೆಲವು ತಿಂಗಳಹಿಂದೆ ಅಕಾಲಿಕ ಮಳೆ ಸುರಿದಿದ್ದು, ಕಾಫಿ, ಅಡಿಕೆ ಮತ್ತು ಶುಂಠಿಬೆಳೆಗೆ ಹಾನಿಯಾಗಿತ್ತು. ಮ್ಯಾಂಡೊಸ್ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡು ಕರಾವಳಿ ಮೂಲಕ ಮಲೆನಾಡು ಮತ್ತು ಬಯಲು ಸೀಮೆಗೆ ಬೀಸಿದ್ದರಿಂದ ಕೆಲವು ದಿವಸ ಧಾರಾಕಾರ ಮಳೆಯಾದರೆ, ಮತ್ತೆ ಕೆಲವು ದಿವಸ ಜಿಟಿಜಿಟಿ ಮಳೆಯಾಗುವ ಮೂಲಕ ಕಾಫಿಹಣ್ಣು ನೆಲಕ್ಕುದುರಿ ಬೆಳೆಗಾರರನ್ನು ಚಿಂತೆಗೀಡುಮಾಡಿತ್ತು. ಭತ್ತ ಕೊಯ್ಲ ಮಾಡಿದ್ದ ರೈತರ ಪೈರು ಸಂಪೂರ್ಣವಾಗಿ ನೆನೆದುಹೋಗಿದ್ದರೆ, ಬಯಲು ಸೀಮೆಯಲ್ಲಿ ರಾಗಿ ಪೈರು ಮೊಳಕೆಯೊಡೆದಿತ್ತು. ಅದರ ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ಜಿಲ್ಲಾಡಳಿತ ಮೂಲಕ ವರದಿ ಸಲ್ಲಿಸುವ ಕೆಲಸ ಬಾಕಿ ಉಳಿದಿದೆ.