Asianet Suvarna News Asianet Suvarna News

ಹೊಸದರದಲ್ಲಿ ರಸಗೊಬ್ಬರ ಮಾರಿದರೆ ಕ್ರಿಮಿನಲ್‌ ಕೇಸ್‌

 ಹೊಸ ದರದಲ್ಲಿ ಮಾರಾಟ ಮಾಡಿದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದೆಂದು ಕೃಷಿ ಇಲಾಖೆ ಕಟು ಎಚ್ಚರಿಕೆ ನೀಡಿದೆ.  ಹೊಸ ದರದಲ್ಲಿ ರಸಗೊಬ್ಬರ ಮಾರಾಟ ಮಾಡದಂತೆ ನೋಟಿಸ್‌ ನೀಡಿದ್ದು ವಿಶೇಷ ನಿಗಾವನ್ನೂ ಇಟ್ಟಿದೆ.

Criminal case Against who sell fertilizer in new price snr
Author
Bengaluru, First Published Apr 21, 2021, 9:25 AM IST

ಕೊಪ್ಪಳ (ಏ.21):  ಕೇಂದ್ರ ಸರ್ಕಾರದ ಸೂಚನೆಯನ್ನೂ ಧಿಕ್ಕರಿಸಿ ರಸಗೊಬ್ಬರ ಕಂಪನಿ ವಿತರಕರೊಬ್ಬರಿಗೆ ಹೆಚ್ಚಿಸಿರುವ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡಿರುವ ಬಗ್ಗೆ  ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತಿರುವ ಕೃಷಿ ಇಲಾಖೆ, ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದು ಮಾತ್ರವಲ್ಲದೆ ಹೊಸ ದರದಲ್ಲಿ ಮಾರಾಟ ಮಾಡಿದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದೆಂದು ಕಟು ಎಚ್ಚರಿಕೆ ನೀಡಿದೆ. ಜೊತೆಗೆ ಹೊಸ ದರದಲ್ಲಿ ರಸಗೊಬ್ಬರ ಮಾರಾಟ ಮಾಡದಂತೆ ನೋಟಿಸ್‌ ನೀಡಿದ್ದು ವಿಶೇಷ ನಿಗಾವನ್ನೂ ಇಟ್ಟಿದೆ.

500 ರೂ. ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ! ...

ಸೋಮವಾರವಷ್ಟೇ ಕಾರಟಗಿ ಬಳಿಯ ಬೂದುಗುಂಪಾ ಗ್ರಾಮದ ವಿತರಕರೊಬ್ಬರಿಗೆ ಎಂಸಿಎಫ್‌ ಕಂಪನಿ ಹೆಚ್ಚಿಸಿರುವ ದರದಲ್ಲಿ 5 ಟನ್‌ ರಸಗೊಬ್ಬರ ಪೂರೈಸಿತ್ತು. ಮಂಗಳವಾರ ಸ್ಥಳಕ್ಕೆ ಧಾವಿಸಿದ ಕೃಷಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಹೊಸದಲ್ಲಿ ಮಾರಾಟ ಮಾಡದಂತೆ ತಾಕೀತು ಮಾಡಿದರು. ಆದರೆ, ಎಂಸಿಎಫ್‌ ಕಂಪನಿ ಗೊಬ್ಬರದ ಚೀಲದ ಮೇಲೆಯೇ ಎಂಆರ್‌ಪಿ ಮುದ್ರಿಸಿದೆ. ಮಾರಾಟಗಾರರಿಗೂ .1347ನಂತೆ ಬಿಲ್‌ ಮಾಡಲಾಗಿದೆ. ಈಗ ಅದನ್ನು ಹಳೆಯ ದರಕ್ಕೆ ನೀಡಿದರೆ ಮಾರಾಟಗಾರರಿಗೆ ನಷ್ಟವಾಗುತ್ತದೆ. ಕೃಷಿ ಇಲಾಖೆ ಕಂಪನಿಗೆ ನೋಟಿಸ್‌ ನೀಡಬೇಕಿತ್ತು ಎಂದು ಗೊಬ್ಬರ ಮಾರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಕಂಪನಿಗಳು ಮಾತ್ರ, ಕಚ್ಚಾ ವಸ್ತು, ಸಾರಿಗೆ ಖರ್ಚು, ಇತರ ಖರ್ಚುಗಳೆಲ್ಲವೂ ಗಗನಕ್ಕೇರಿರುವುದರಿಂದ ದರ ಹೆಚ್ಚಿಸುವುದು ಅನಿವಾರ್ಯ. ಸರ್ಕಾರ ವ್ಯತ್ಯಾಸದ ಹಣವನ್ನು ಸಹಾಯಧನದ ರೂಪದಲ್ಲಿ ನೀಡಿದರೆ ನಾವು ಹಿಂದಿನ ದರಕ್ಕೆ ಮಾರಾಟಗಾರರಿಗೆ ಪೂರೈಸಬಹುದು ಎನ್ನುತ್ತಿವೆ.

Follow Us:
Download App:
  • android
  • ios