ಮಂಗಳೂರು (ಸೆ.30): ನಗರದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ನಿರತರಾಗಿದ್ದ 18 ಮಂದಿ ಆರೋಪಿಗಳನ್ನು ನಗರ ಸಿಸಿಬಿ ಮತ್ತು ಬಂದರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶ್ರೀನಿವಾಸ್‌, ಜಗದೀಶ್‌, ಉನ್ನಿಕೃಷ್ಣನ್‌, ಸುಧಾಕರ್‌, ಪ್ರತಾಪ್‌ ಶೆಟ್ಟಿ, ಜಾನ್‌ ಕೊಯಲ್ಲೋ, ತಿಮ್ಮಪ್ಪ ಗೌಡ, ರಿಚರ್ಡ್‌ ಲೋಬೋ, ಮೊಹಿದ್ದೀನ್‌ ಕುಂಞ, ಕೆ. ಸುಬ್ರಹ್ಮಣ್ಯ ಶೇಟ್‌, ಗೌತಮ್‌ ಮಜಿ ಬಂಧಿತ ಆರೋಪಿಗಳು. ಆರೋಪಿಗಳಿಂದ 11 ಮೊಬೈಲ್‌, 15 ಸಾವಿರ ರು. ನಗದು ವಶಪಡಿಸಿಕೊಳ್ಳಲಾಗಿದೆ.

IPL 2020: ಸೋಲಿಲ್ಲದ ಸರದಾರ ಡೆಲ್ಲಿಗೆ ಸೋಲುಣಿಸಿದ SRH! .

ಆರೋಪಿಗಳು ನಗರದ ಕಾರ್‌ಸ್ಟ್ರೀಟ್‌ ಮಹಾಮ್ಮಾಯಿ ಕೆರೆ ಸಮೀಪದ ಪ್ಲೈವುಡ್‌ ಅಂಗಡಿಯೊಂದರಲ್ಲಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮತ್ತು ಬಂದರು ಪೊಲೀಸರು ದಾಳಿ ನಡೆಸಿ 11ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಇದೀಗ ಐಪಿಎಲ್ ಹವಾ ಜೋರಾಗಿಯೇ ಇದೆ. ಈ ವೇಳೆ ಬೆಟ್ಟಿಂಗ್ ದಂಧೆಯೂ ಕೂಡ ವ್ಯಾಪಕವಾಗಿಯೇ ನಡೆಯುತ್ತಿದೆ. ಹಲವು ಮಂದಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.