Asianet Suvarna News Asianet Suvarna News

ಲಾಕ್‌ಡೌನ್‌: 'ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬಂದರೆ ಕಠಿಣ ಕ್ರಮ'

ಜಮಖಂಡಿಯ ಬಸವೇಶ್ವರ ವೃತ್ತದಲ್ಲಿ ಜನರಿಗೆ ಎಚ್ಚರಿಕೆ ನೀಡಿದ ಸಿಪಿಐ ಧರೇಗೌಡ ಪಾಟೀಲ| ಮೇ 17ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ತೆರವು ನೀಡಲು ಅನುಮತಿ| ಸಾರ್ವಜನಿಕ ಅನೂಕೂಲಕ್ಕಾಗಿ ದಿನಸಿ ವಸ್ತುಗಳ ಕಿರಾಣಿ ಅಂಗಡಿಗಳು,  ಮಾತ್ರೆ-ಔಷಧಿಗಳನ್ನು ಪಡೆಯಲು ಔಷಧಿ ಅಂಗಡಿಗಳಾಗಲೀ, ಇನ್ನಿತರ ಅಂಗಡಿಗಳಿಗೆ ಅನುಮತಿ|

CPI Dharegowda Patil Talks Over Lockdown  in Jamakhandi in Bagalkot District
Author
Bengaluru, First Published May 16, 2020, 11:35 AM IST

ಜಮಖಂಡಿ(ಮೇ.16): ಕೋವಿಡ್‌-19 ಅಂಟುರೋಗವನ್ನು ತಪ್ಪಿಸಬೇಕಾದರೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅನಾವಶ್ಯಕವಾಗಿ ಮನೆಬಿಟ್ಟು ಯಾರು ಹೊರಗಡೆ ಬರಬಾರದು. ರಸ್ತೆ ಮೇಲೆ ಯಾರಾದರು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಸಿಪಿಐ ಧರೇಗೌಡ ಪಾಟೀಲ ಹೇಳಿದ್ದಾರೆ.

ಇಲ್ಲಿನ ಬಸವೇಶ್ವರ ವೃತ್ತದ ನಾಕಾಬಂದಿಯಲ್ಲಿ ವಾಹನ ಸವಾರರು ತಿರುಗಾಡುತ್ತಿರುವವರನ್ನು ತಡೆದು ಎಚ್ಚರಿಕೆ ನೀಡಿ ಮಾತನಾಡಿದ ಅವರು, ಮೇ 17ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ತೆರವು ನೀಡಲು ಅನುಮತಿ ನೀಡಿದೆ. 

ಪ್ರಿಯಕರನೊಂದಿಗೆ ಕಬ್ಬಿನ ಗದ್ದೆಗೆ ಹೋದ ಮಹಿಳೆ: ಬಳಿಕ ಆಗಿದ್ದು ಘನ ಘೋರ...

ಸಾರ್ವಜನಿಕ ಅನೂಕೂಲಕ್ಕಾಗಿ ದಿನಸಿ ವಸ್ತುಗಳ ಕಿರಾಣಿ ಅಂಗಡಿಗಳು,ಮಾತ್ರೆ-ಔಷಧಿಗಳನ್ನು ಪಡೆಯಲು ಔಷಧಿ ಅಂಗಡಿಗಳಾಗಲೀ, ಇನ್ನಿತರ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಅವಶ್ಯಕತೆ ಇದ್ದವರಿಗೆ ಮಾತ್ರ ಮಾರುಕಟ್ಟೆಗೆ ಬರಲು ಅನುಮತಿ ನೀಡಿದೆ. ಒಂದು ವೇಳೆ ಬೇಕಾಬಿಟ್ಟಿಯಾಗಿ ವಾಹನ ಸವಾರರು ತಿರುಗಾಡುತ್ತಿದ್ದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪೋಲಿಸ್‌ ಪೇದೆ ಹಣಮಂತ ಬಂಗಿ,ಸಿದ್ದು ಜಕಾತಿ, ಶಂಕರ ಮೂಲಿ ಮನಿ, ಲಕ್ಷ್ಮಣ ಹೊಸುರ ಇನ್ನಿತರರು ಇದ್ದರು.
 

Follow Us:
Download App:
  • android
  • ios