ಸೋಂಕಿತರಿಗೆ ಆಯಾ ತಾಲೂಕಿನಲ್ಲಿಯೇ ಚಿಕಿತ್ಸೆ..?
ಕೋವಿಡ್ -19 ಸೋಂಕಿತರಿಗೆ ಆಯಾ ತಾಲೂಕಿನಲ್ಲೇ ಚಿಕಿತ್ಸೆ ನಡೆಯಬೇಕು. ಸೋಂಕು ಇಲ್ಲದ ಪ್ರದೇಶದಲ್ಲಿ ಚಿಕಿತ್ಸೆ ನೀಡುವುದು ಸರಿಯಲ್ಲ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.
ಕಾರವಾರ(ಮೇ 12): ಕೋವಿಡ್ -19 ಸೋಂಕಿತರಿಗೆ ಆಯಾ ತಾಲೂಕಿನಲ್ಲೇ ಚಿಕಿತ್ಸೆ ನಡೆಯಬೇಕು. ಸೋಂಕು ಇಲ್ಲದ ಪ್ರದೇಶದಲ್ಲಿ ಚಿಕಿತ್ಸೆ ನೀಡುವುದು ಸರಿಯಲ್ಲ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದರು.
"
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ಇಲ್ಲದ ಪ್ರದೇಶಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದರೆ ಕೆಲವು ಹಂತದಲ್ಲಿ ಹರಡುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಡಳಿತ, ಸರ್ಕಾರ ಆಯಾ ತಾಲೂಕಿನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಭಟ್ಕಳವನ್ನು ಜಿಲ್ಲಾಡಳಿತ ಕಂಟೆನ್ಮೆಂಟ್ ಮಾಡಿದ್ದು, ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯನ್ನೂ ರೆಂಡಮ್ ಆಗಿ ಕೋವಿಡ್-19 ತಪಾಸಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಸೇತು ಆ್ಯಪ್‌ನಿಂದ 1.4 ಲಕ್ಷ ಜನರಿಗೆ ಅಲರ್ಟ್
ನ್ಯಾಯವಾದಿ ಕೆ.ಆರ್. ದೇಸಾಯಿ, ಲಾಕ್‌ಡೌನ್‌ನಿಂದ ಕೋವಿಡ್-19 ನಿಯಂತ್ರಣದಲ್ಲಿದೆ. ಇದು ಶಾಶ್ವತ ಔಷಧವಲ್ಲ. ಜನರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು. ಸರ್ಕಾರ ಕೂಡಾ ಲಾಕ್‌ಡೌನ್ ಮುಂದುವರೆಸಬೇಕು. ಈ ಹಂತ ಸೋಂಕು ಹರಡಲು ಪೀಕ್ ಅವಧಿಯಾಗಿದ್ದು, ಲಾಕ್‌ಡೌನ್ ಸಡಲಿಕೆ ಆದರೆ ಬಹಳಷ್ಟುತೊಂದರೆ ಆಗುತ್ತದೆ ಎಂದರು.
ಮತ್ತೆ ನಗರಕ್ಕೆ ವಾಪಸ್ ಆಗುತ್ತಿರುವವರಿಗೆ ಪಿಜಿ, ಹಾಸ್ಟೆಲ್‌ಗೆ ನೋ ಎಂಟ್ರಿ!
ಮಾಜಿ ಶಾಸಕ ಸತೀಶ ಸೈಲ್, ಸೋಂಕಿತರಿಗೆ ವಿಶೇಷ ಚಿಕಿತ್ಸೆ ಇಲ್ಲ. ಹೀಗಾಗಿ ಭಟ್ಕಳದಲ್ಲಿ ಚಿಕಿತ್ಸೆ ಮಾಡಬಹುದು. ಮುಂದೆ ಹೊಸದಾಗಿ ಬಂದ ಪ್ರಕರಣ ಬಂದಲ್ಲಿ ಅಲ್ಲೆ ಚಿಕಿತ್ಸೆ ಆಗಲಿ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಈ ಬಗ್ಗೆ ಮಾರ್ಗದರ್ಶನ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.