ಬೆಂಗಳೂರು(ಜು.30): ಕೊರೋನಾ ವಿಚಾರದಲ್ಲಿ ರಾಜಧಾನಿ ಬೆಂಗಳೂರಿನ ಪಾಲಿಗೆ ಜುಲೈ ಅಕ್ಷರಶಃ ಕರಾಳ ಮಾಸ. ಏಕೆಂದರೆ, ಬುಧವಾರ 2,270 ಮಂದಿಗೆ ಸೋಂಕು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಇದರಲ್ಲಿ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ ತಿಂಗಳ 29 ದಿನಗಳಲ್ಲೇ ದೃಢಪಟ್ಟಿದೆ.

ರಾಜ್ಯಕ್ಕೆ ಕೊರೋನಾ ಕಾಲಿಟ್ಟ143ನೇ ದಿನಕ್ಕೆ ನಗರದ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಗಮನಾರ್ಹ ಸಂಗತಿ ಎಂದರೆ ಜೂ.30ರ ವರೆಗೆ ನಗರದಲ್ಲಿ ಕೇವಲ 4,555 ಕೋವಿಡ್‌ ವರದಿಗಳಾಗಿದ್ದವು. ಪ್ರಸಕ್ತ ಜುಲೈ ತಿಂಗಳಲ್ಲೇ 45,536 ಹೊಸ ಪ್ರಕರಣಗಳು ದೃಢಪಟ್ಟಿವೆ. ತನ್ಮೂಲಕ ಒಟ್ಟು ಸೋಂಕಿತರ ಸಂಖ್ಯೆ 50,091ಕ್ಕೇರಿದೆ.

ಹೆದರಿದ್ರೆ ಜೀವ ತೆಗೆಯುತ್ತೆ, ಧೈರ್ಯವೇ ವೈರಸ್‌ಗೆ ಮದ್ದು: ಕೊರೋನಾ ಗೆದ್ದು ಬಂದ KSRTC ಚಾಲಕ

ಮತ್ತೊಂದೆಡೆ ಬುಧವಾರ 30 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ಸಾವಿರ ಸಂಖ್ಯೆಯ ಗಡಿ ಸಮೀಪಿಸಿದ್ದು, 987ಕ್ಕೆ ಏರಿದೆ. ಇದರೊಂದಿಗೆ ರಾಜ್ಯದಲ್ಲಿ ಈ ವರೆಗೆ ದೃಢಪಟ್ಟಿರುವ 1 ಲಕ್ಷ ಮೀರಿದ ಸೋಂಕು ಪ್ರಕರಣ ಹಾಗೂ 2 ಸಾವಿರ ಗಡಿ ದಾಟಿರುವ ಸಾವಿನ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟುಬೆಂಗಳೂರಿನಲ್ಲೇ ದಾಖಲಾಗಿದೆ.

ದಾಖಲೆ ಮಂದಿ ಗುಣಮುಖ:

ಬುಧವಾರ ಒಂದೇ ದಿನ ದಾಖಲೆಯ 1118 ಮಂದಿ ಗುಣುಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಈ ವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 13,879ಕ್ಕೇರಿದೆ.

ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ!

ಜುಲೈ ಅಂತ್ಯದ ವೇಳೆಗೆ ಬೆಂಗಳೂರು ನಗರದ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರ ದಾಟಲಿದೆ ಎಂದು ಜು.9ರಂದು ‘ಕನ್ನಡಪ್ರಭ’ ಮುಖಪುಟದಲ್ಲಿ ‘ಕೇಸ್‌ ಡಬಲ್‌ ರಾಜ್ಯವೇ ನಂ.1’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.