ಎಂಬಿಪಾ ಆಸ್ಪತ್ರೆಯಲ್ಲಿ ಶೇ.70 ಕೋವಿಡ್‌ ಚಿಕಿತ್ಸಾ ಶುಲ್ಕ ಇಳಿಕೆ

ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅಧ್ಯಕ್ಷರಾಗಿರುವ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆ ಮಾತ್ರ ಕೋವಿಡ್‌ ಶುಲ್ಕವನ್ನು ಶೇ.70ರಷ್ಟುಇಳಿಕೆ ಮಾಡಲಾಗಿದೆ. ಈ ಮೂಲಕ ಮಾದರಿಯಾಗಲಾಗಿದೆ. 

Covid treatment fee 70 percent less in vijayapura BLDE hospital snr

ವಿಜಯಪುರ(ಏ.25):  ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳು ಒಂದೆಡೆ ರೋಗಿಗಳಿಂದ ಹೆಚ್ಚು ದುಡ್ಡು ವಸೂಲಿಗೆ ಮುಂದಾದರೆ, ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅಧ್ಯಕ್ಷರಾಗಿರುವ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆ ಮಾತ್ರ ಕೋವಿಡ್‌ ಶುಲ್ಕವನ್ನು ಶೇ.70ರಷ್ಟುಇಳಿಕೆ ಮಾಡುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದೆ.

ಕೊರೋನಾ ಎರಡನೇ ಅಲೆಯಿಂದಾಗಿ ತತ್ತರಿಸಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ಹಾಸಿಗೆಗಳ ಸಂಖ್ಯೆ ಹೆಚ್ಚಿಸಿದ್ದಲ್ಲದೆ ಚಿಕಿತ್ಸಾ ವೆಚ್ಚದಲ್ಲಿ ತೀವ್ರ ಕಡಿತಗೊಳಿಸುವ ಮಹತ್ವದ ನಿರ್ಣಯವನ್ನು ಬಿಎಲ್‌ಡಿಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಪ್ರಕಟಿಸಿದ್ದಾರೆ.

ಬೆಳಗಾವಿ ಬೈಎಲೆಕ್ಷನ್‌: ಜಾರಕಿಹೊಳಿ‌ ಗೆಲುವು ಖಚಿತ ಎಂದ ಎಂ.ಬಿ.ಪಾಟೀಲ್‌

ಬಿಎಲ್‌ಡಿಇ ಆಸ್ಪತ್ರೆಯಲ್ಲಿ 250 ಬೆಡ್‌ಗಳಿಗೆ ಮೀಸಲಾಗಿದ್ದ ಕೊರೋನಾ ಹಾಸಿಗೆಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತಲೂ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಶೇ.70ರಷ್ಟುಕಡಿಮೆ ಶುಲ್ಕವನ್ನು ಕಳೆದ 2 ತಿಂಗಳಿಂದಲೂ ಪಡೆಯಲಾಗುತ್ತಿದೆ. ಅಲ್ಲದೆ ರಿಯಾಯಿತಿ ಶುಲ್ಕವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

ರಾಜ್ಯ ಸರ್ಕಾರ ಜನರಲ್‌ ವಾರ್ಡ್‌ಗಳಲ್ಲಿ ಆಕ್ಸಿಜನ್‌ ರಹಿತ ಬೆಡ್‌ಗೆ  10 ಸಾವಿರ ನಿಗದಿಪಡಿಸಿದ್ದರೆ ಬಿಎಲ್‌ಡಿಇ ಆಸ್ಪತ್ರೆಯಲ್ಲಿ 3 ಸಾವಿರ, ಆಕ್ಸಿಜನ್‌ ಸಹಿತ ಬೆಡ್‌ಗೆ ಸರ್ಕಾರ ನಿಗದಿಪಡಿಸಿದ 12 ಸಾವಿರ ಬದಲಾಗಿ ಬಿಎಲ್‌ಡಿಇ ಆಸ್ಪತ್ರೆಯಲ್ಲಿ 5 ಸಾವಿರ ಹಾಗೂ ಐಸಿಯುನಲ್ಲಿ ವೆಂಟಿಲೇಟರ್‌ಗೆ  25 ಸಾವಿರ ಬದಲು 8 ಸಾವಿರ ಮಾತ್ರ ಪಡೆಯುತ್ತಿದೆ.

ಹೊರಗಡೆ ಆಸ್ಪತ್ರೆಗಳಿಗಿಂತ ಕಡಿಮೆ ವೆಚ್ಚದಲ್ಲಿಯೇ ಪ್ರತಿಯೊಂದು ಚಿಕಿತ್ಸೆ ನೀಡುತ್ತಿದ್ದೇವೆ. ಜನರ ಜತೆಗೆ ನಾವೂ ಇರಬೇಕಾಗಿದೆ. ಮಾನವೀಯತೆಯನ್ನು ಮೆರೆಯಬೇಕಾಗಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಸರ್ಕಾರಕ್ಕಿಂತ ಕಡಿಮೆ ದರ ಪಡೆಯುತ್ತಿದ್ದೇವೆ. ನಾನ್‌ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಎಂದಿನಂತೆ ಮುಂದುವರಿದಿದೆ. ಡೆಲಿವರಿ, ಮಕ್ಕಳ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಯಥಾಸ್ಥಿತಿಯಲ್ಲಿ ನಡೆದಿದ್ದು, ಸಾಮಾನ್ಯ ವಾರ್ಡ್‌ಗಳಿಗೆ ದಾಖಲಾಗುವ ಎಲ್ಲ ನಾನ್‌ ಕೋವಿಡ್‌ ರೋಗಿಗಳಿಗೆ ಹಾಸಿಗೆ ಶುಲ್ಕ, ಊಟ, ಔಷಧ, ಶಸ್ತ್ರ ಚಿಕಿತ್ಸೆಗಳು ಹಾಗೂ ಸಾಮಾನ್ಯ ತಪಾಸಣೆಗಳು ಸಂಪೂರ್ಣ ಉಚಿತವಾಗಿವೆ.

-ಎಂ.ಬಿ.ಪಾಟೀಲ್‌, ಶಾಸಕರು, ಬಿಎಲ್‌ಡಿಇ ಅಧ್ಯಕ್ಷರು

Latest Videos
Follow Us:
Download App:
  • android
  • ios