ರಾಜ್ಯದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿದ ಕೊರೋನಾ ಸೋಂಕು ಬೆಂಗಳೂರಿಗೆ ಆಗಮಿಸುವವರಿಗೆ ಗಡಿಯಲ್ಲೇ ಟೆಸ್ಟ್ ನಗರದ ಕೋವಿಡ್ ಕಷ್ಟದ ಕಷ್ಟಸಾಧ್ಯ ಹಿನ್ನೆಲೆ ಪರೀಕ್ಷೆ

ಬೆಂಗಳೂರು (ಜೂ.15): ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಬಿಬಿಎಂಪಿ, ನಗರದ ಗಡಿಯಲ್ಲಿ ರಾರ‍ಯಂಡಮ್‌ ಪರೀಕ್ಷಾ ತಂಡಗಳನ್ನು ನಿಯೋಜಿಸಲು ಬಿಬಿಎಂಪಿ ಮುಂದಾಗಿದೆ.

ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್‌, ಕಾರ್ಖಾನೆಗಳು, ಕಚೇರಿಗಳು ಕೂಡಾ ಮುಚ್ಚಿದ್ದವು. ಇದರಿಂದಾಗಿ ಕೆಲಸವಿಲ್ಲದೆ ತಮ್ಮ ಊರುಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು, ಉದ್ಯೋಗಿಗಳು ಲಾಕ್‌ಡೌನ್‌ ತೆರವಿನಿಂದ ಸಾವಿರಾರು ಸಂಖ್ಯೆಯಲ್ಲಿ ಪುನಃ ರಾಜಧಾನಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾರೆ. ಸೋಂಕು ಹೆಚ್ಚಿರುವ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳ ಕಡೆಗಳಿಂದ ಕಟ್ಟಡ ಕಾರ್ಮಿಕರು, ಕಾರು, ಆಟೋ ಚಾಲಕರು, ಗಾರ್ಮೆಂಟ್ಸ್‌ ಕಾರ್ಮಿಕರು ಒಳಗೊಂಡಂತೆ ಹಲವರು ಹಿಂದಿರುಗಿ ಬರುತ್ತಿರುವುದರಿಂದ ಮತ್ತೆ ನಗರದಲ್ಲಿ ಸೋಂಕು ಹೆಚ್ಚುವ ಭೀತಿ ಶುರುವಾಗಿದೆ.

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ

ಹೊರ ಜಿಲ್ಲೆಗಳಿಂದ ಸಿಲಿಕಾನ್‌ ಸಿಟಿಗೆ ಬರುವ ಎಲ್ಲರಿಗೂ ಕೋವಿಡ್‌ ಪರೀಕ್ಷೆ ಮಾಡುವುದು ಕಷ್ಟ. ಹಾಗೆಯೇ ನಗರಕ್ಕೆ ಬರುವವರೆಲ್ಲರೂ ಕೋವಿಡ್‌ ವರದಿ ತೆಗೆದುಕೊಂಡು ಬರುವಂತೆ ಸೂಚಿಸಿ, ಅದನ್ನು ಪರಿಶೀಲಿಸಿ ಒಳ ಬಿಡುವ ಚಿಂತನೆಯಿದ್ದರೂ ಅದನ್ನು ವಾಸ್ತವವಾಗಿ ಜಾರಿಗೆ ತರಲು ವಿಪರೀತ ಸಿಬ್ಬಂದಿ ಹಾಗೂ ಶ್ರಮದ ಅಗತ್ಯ ಬೀಳುತ್ತದೆ. ಹೀಗಾಗಿ ರಾರ‍ಯಂಡಮ್‌ ಪರೀಕ್ಷೆಗೆ ಇಲ್ಲ. ಆದರೆ, ಬೆಂಗಳೂರು ಪ್ರವೇಶಿಸುವ ಎಲ್ಲ ಗಡಿಭಾಗದಲ್ಲಿ ಸಂಚಾರಿ ಪರೀಕ್ಷಾ ತಂಡಗಳು ಇರಲಿದ್ದು, ರಾರ‍ಯಂಡಮ್‌ ಪರೀಕ್ಷೆ ನಡೆಸಲಿವೆ. ಸೋಂಕಿತರು ಪತ್ತೆಯಾದರೆ ಕೂಡಲೇ ಅವರನ್ನು ಹೋಮ್‌ ಐಸೋಲೇಷನ್‌ ಮಾಡುವ ಬದಲು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಐಸೋಲೇಷನ್‌ ಮಾಡಲು ಪಾಲಿಕೆ ಚಿಂತನೆ ನಡೆಸಿದೆ. ಅದಕ್ಕೂ ಮುನ್ನ ಟ್ರಯಾಜ್‌ ಕೇಂದ್ರಗಳಲ್ಲಿ ಚಿಕಿತ್ಸೆ ಹಾಗೂ ಐಸೋಲೇಷನ್‌ಗೆ ಸಿದ್ಧತೆ ಮಾಡುತ್ತಿದೆ.

ಹೊಸಕೋಟೆ ಗಡಿಭಾಗ, ತುಮಕೂರು ರಸ್ತೆ, ಮೈಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಸಂಚಾರಿ ಪರೀಕ್ಷಾ ತಂಡಗಳು ಕಾರ್ಯನಿರ್ವಹಿಸಲಿವೆ. ಜೊತೆಗೆ ಲಸಿಕೆ ಅಭಿಯಾನಕ್ಕೂ ಆದ್ಯತೆ ನೀಡಲು ಬಿಬಿಎಂಪಿ ಯೋಜಿಸಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಮಿಕರಿಗೆ ರಾರ‍ಯಪಿಡ್‌ ಟೆಸ್ಟ್‌

ಇನ್ನು ಕೈಗಾರಿಕಾ ಪ್ರದೇಶ ಮತ್ತು ವಿವಿಧ ಕಂಪನಿಗಳಲ್ಲಿ ರಾರ‍ಯಪಿಡ್‌ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಬಿಬಿಎಂಪಿ ಹೊಸ ತಂತ್ರ ರೂಪಿಸಿದ್ದು, ಜಿಗಣಿ, ಪೀಣ್ಯ, ಎಲೆಕ್ಟ್ರಾನಿಕ್‌ಸಿಟಿ, ಬೊಮ್ಮಸಂದ್ರ ಸೇರಿದಂತೆ ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳ ಕಾರ್ಮಿಕರಿಗೆ ಕೋವಿಡ್‌-91 ರಾರ‍ಯಪಿಡ್‌ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಜೊತೆಗೆ ಶೇ.30ರಷ್ಟುಕಾರ್ಮಿಕರಿಗೆ ಮಾತ್ರ ಕೆಲಸಕ್ಕೆ ಅವಕಾಶ ಕಲ್ಪಿಸಿದ್ದರು ಕೂಡಾ ಅವರಿಗೂ ಕೋವಿಡ್‌ ಪರೀಕ್ಷೆ ನಡೆಸಬೇಕೆಂದು ಕಾರ್ಖಾನೆಗಳ ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಮೊದಲ ಹಂತದಲ್ಲಿ ನೌಕರರು ಮತ್ತು ಕಾರ್ಮಿಕರು ಮಾತ್ರ ಕಾರ್ಯ ನಿರ್ವಹಿಸಲು ಮಾರ್ಗಸೂಚಿ ಇರುವುದರಿಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ಇದ್ದರೆ ಅವರನ್ನು ಐಸೋಲೇಟ್‌ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona