ಚಿಕ್ಕಬಳ್ಳಾಪುರ : ಪಾಸಿಟಿವಿಟಿ ದರ ಶೇ.5.27ಕ್ಕೆ ಕುಸಿತ
- ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿತ
- ಜಿಲ್ಲೆಯ ಪಾಸಿಟಿವಿಟಿ ಶೇ.5.27ಕ್ಕೆ ಕುಸಿತ ಕಂಡಿದೆ.
- ನಾಲ್ಕೈದು ದಿನಗಳ ಒಳಗೆ ಇನ್ನಷ್ಟುಕುಸಿತ ಕಾಣುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ (ಜೂ.12): ಕೊರೋನಾ ಎರಡನೇ ಅಲೆ ಅರ್ಭಟದ ಬಳಿಕ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕೊರೋನಾ ಸೋಂಕಿತರ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿತಗೊಂಡಿದ್ದು 600, 700 ಗಡಿಯಲ್ಲಿ ಕಂಡು ಬರುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಒಂದೂವರೆ ತಿಂಗಳ ಬಳಿಕ ಬರೀ 176 ಪ್ರಕರಣಗಳಿಗೆ ಸೀಮಿತವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಸಿಟಿವಿಟಿ ಶೇ.5.27ಕ್ಕೆ ಕುಸಿತ ಕಂಡಿದೆ.
ನಿನ್ನೆ 3,334 ಮಂದಿ ಕೊರೋನಾ ಪರೀಕ್ಷೆ ನಡೆಸಿದ್ದು ಆ ಪೈಕಿ 176 ಮಂದಿಗೆ ಮಾತ್ರ ಕೊರೋನಾ ಪಾಸಿಟಿವ್ ಕಾಣಿಸಿಕೊಂಡು ಉಳಿದಂತೆ 3,158 ಮಂದಿಗೆ ನೆಗಟಿವ್ ಬಂದಿದೆ. ಆ ಮೂಲಕ ಬರೋಬ್ಬರಿ 30 ರ ಅಸುಪಾಸಿನಲ್ಲಿ ಕಂಡು ಬರುತ್ತಿದ್ದ ಕೊರೋನಾ ಪಾಸಿಟಿವಿಟಿ ಜಿಲ್ಲೆಯಲ್ಲಿ ಸದ್ಯ ಶೇ.5.27ಕ್ಕೆ ಕುಸಿದಿದ್ದು ನಾಲ್ಕೈದು ದಿನಗಳ ಒಳಗೆ ಇನ್ನಷ್ಟುಕುಸಿತ ಕಾಣುವ ಸಾಧ್ಯತೆ ಇದೆ.
14ರ ಬಳಿಕ ಜಿಲ್ಲೆ ಅನ್‌ಲಾಕ್
ಈಗಾಗಲೇ ರಾಜ್ಯ ಸರ್ಕಾರ ಕೋವಿಡ್ ಪಾಸಿಟಿವಿಟಿ ಶೇ.5 ರೊಳಗೆ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರವುಗೊಳಿಸಿ ಕೆಲ ನಿಬಂಧನೆಗಳ ಮೂಲಕ ಆನ್‌ಲಾಕ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಕೂಡ ಜೂ.14 ಬಳಿಕ ಲಾಕ್‌ಡೌನ್ ತೆರವುಗೊಳ್ಳಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟುಕಸರತ್ತು ನಡೆಸಿ 4 ಹಂತದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ಕಡಿಮೆ ಆಗಿದ್ದು ಅದೇ ರೀತಿ ಕೊರೋನಾ ಸೋಂಕಿತರ ಪ್ರಮಾಣ ಕೂಡ ಕಡಿಮೆ ಆಗಿದೆ. ಹೀಗಾಗಿ ಸೋಮವಾರದಿಂದ ಆರಂಭಗೊಳ್ಳಲಿರುವ ಆನ್‌ಲಾಕ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ.
ಕೊರೋನಾ ಜಯಿಸಿದ 107 ವರ್ಷದ ಅಜ್ಜಿ! ...
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಬರೋಬ್ಬರಿ 41,303 ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಆ ಪೈಕಿ 38,045 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ ಜಿಲ್ಲಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ 228 ಮಂದಿ ಸಾವು : ಕೊರೋನಾ ಎರಡನೇ ಅಲೆ ಬಳಿಕ ಜಿಲ್ಲಾದ್ಯಂತ ಹೊಸದಾಗಿ 28 ಸಾವಿರ ಸೋಂಕಿತರು ಪತ್ತೆಯಾದರೆ ಒಟ್ಟು 228 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾರೆ. ಆ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದರೆ ಒಟ್ಟು 118 ಮಂದಿ ಚಿಕ್ಕಬಳ್ಳಾಪುರ ತಾಲೂಕಿಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.