ನೀರಿಗಾಗಿ ಕೊರೋನಾ ಸೋಂಕಿತರ ಪರದಾಟ..!
* ಬಿಮ್ಸ್ ಅವ್ಯವಸ್ಥೆಗೆ ವ್ಯಾಪಕ ಟೀಕೆ
* ನೀರಿಲ್ಲದೇ ಸೋಂಕಿತರು ವಾಸಿಯಾಗೋದು ಹೇಗೆ ಎಂದು ಸಾರ್ವಜನಿಕರ ಪ್ರಶ್ನೆ
* ಕುಡಿವ ನೀರಿಗೆ ಯಾವುದೇ ತೊಂದರೆಯಾಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ಬೆಳಗಾವಿ(ಮೇ.10): ಬಿಮ್ಸ್‌ನಲ್ಲಿ ಚಿಕಿತ್ಸೆಗೆಂದು ದಾಖಲಾದ ಸೋಂಕಿತರ ವಾರ್ಡ್‌ಗಳಲ್ಲಿ ಸರಿಯಾದ ನೀರು ಪೂರೈಕೆಯಾಗದೇ ಸೋಂಕಿತರು ತೀವ್ರ ಪರದಾಟ ನಡೆಸಿದ ವಿಡಿಯೋವೊಂದು ವೈರಲ್ ಆಗಿದೆ. ಬಿಮ್ಸ್ ಅವ್ಯವಸ್ಥೆಗೆ ಇದೀಗ ಎಲ್ಲೆಡೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.
ಬಿಮ್ಸ್‌ನ ಈ ಅವ್ಯವಸ್ಥೆಯ ಬಗ್ಗೆ ಕೊರೋನಾ ಸೋಂಕಿತರೊಬ್ಬರು ವಿಡಿಯೋವೊಂದು ಮಾಡಿ, ಅಲ್ಲಿಯ ಸೋಂಕಿತರನ್ನು ಮಾತನಾಡಿದ ವಿಡಿಯೋ ಇದಾಗಿದೆ. ಅಲ್ಲಿಯ ವೃದ್ಧರೊರ್ವರು ನಮ್ಗ ರಾತ್ರಿಯಿಂದ ನೀರು ಬರ್ತಾ ಇಲ್ಲ. ಇದರಿಂದ ಬಾಳ್ ತೊಂದರೆ ಆಗೈತಿ. ಅಷ್ಟೇ ಅಲ್ದ ಸ್ವಚ್ಛ ಮಾಡಾಕು ಯಾರು ಬರೋದಿಲ್ಲ. ನೀರು ಇಲ್ಲದೇ ಹೆಂಗ್ ಇರೋದು ಎಂದು ವಿಡಿಯೋದಲ್ಲಿ ತಮ್ಮ ಅಳಲು ತೊಡಿಕೊಂಡಿದ್ದಾರೆ.
"
ಮಹಾರಾಷ್ಟ್ರದಿಂದ ಆಕ್ಸಿಜನ್ ಪೂರೈಕೆಗೆ ಇಲ್ಲ ತಡೆ : ಡಿಸಿಎಂ ಲಕ್ಷ್ಮಣ್ ಸವದಿ ತಾಕೀತು
ವಾರ್ಡ್ ಶೌಚಾಲಯದ ನಲ್ಲಿಗಳಲ್ಲೂ ನೀರಿಲ್ಲ. ಕುಡಿಯಲು ನೀರಿಲ್ಲದೇ ಸೋಂಕಿತರು ತೀವ್ರ ಪರದಾಟ ನಡೆಸಿದ್ದಾರೆ. ಸೋಂಕಿತರು ಶೀಘ್ರ ಗುಣಮುಖರಾಗಲು ಅವರಿಗೆ ಎಲ್ಲ ತರಹದ ಸೂಕ್ತ ವ್ಯವಸ್ಥೆಗಳು ಮಾಡಬೇಕಾಗುತ್ತದೆ. ಆದರೆ, ನೀರಿಲ್ಲದೇ ಸೋಂಕಿತರು ಅಲ್ಲಿ ವಾಸಿಯಾಗುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರೋಗಿಗಳು ದಾಖಲಾಗಿರುವ ಆಸ್ಪತ್ರೆಗಳಲ್ಲಿ ನಿತ್ಯ ಬಳಕೆಯ ನೀರಿಗೆ ಕೊರತೆಯಾಗಿರುವುದನ್ನು ಮನಗಂಡು ಪಾಲಿಕೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಿದ್ದೇನೆ. ಆದರೆ, ಕುಡಿವ ನೀರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona