Asianet Suvarna News Asianet Suvarna News

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

*   ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಿದ್ಧತೆ-ಮುಲ್ಲೈ ಮುಗಿಲನ್‌
*  ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ ಆರಂಭ
*  ವಿದೇಶದಿಂದ ಬಂದ ಇಬ್ಬರಲ್ಲಿ ಪಾಸಿಟಿವ್‌
 

Covid Negative Report Mandatory for Those Coming from Other States to Uttara Kannada grg
Author
Bengaluru, First Published Jan 6, 2022, 7:43 AM IST

ಕಾರವಾರ(ಜ.06):  ಗೋವಾ(Goa), ಮಹಾರಾಷ್ಟ್ರ(Maharashtra) ಮತ್ತು ಕೇರಳ(Kerala) ರಾಜ್ಯಗಳಿಂದ ಜಿಲ್ಲೆಗೆ ಬರುವ ಪ್ರಯಾಣಿಕರು(Passengers) ಕೋವಿಡ್‌ 72 ಗಂಟೆಯೊಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ(Karnataka) ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿಯೂ ಕೋವಿಡ್‌(Covid19) ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧತೆ ನಡೆಸಿದೆ ಎಂದರು. ಮುಖ್ಯವಾಗಿ ಜಿಲ್ಲೆಯ ಗಡಿ ಭಾಗಗಳಾದ ಕಾರವಾರ(Karwar) ತಾಲೂಕಿನ ಮಾಜಾಳಿಯಲ್ಲಿ, ಜೋಯಿಡಾ ತಾಲೂಕಿನ ಅನಮೋಡ, ದಾಂಡೇಲಿ ತಾಲೂಕಿನ ಭರ್ಚಿ ಹಾಗೂ ಭಟ್ಕಳ ತಾಲೂಕಿನ ಶಿರೂರಿನಲ್ಲಿ ಹೊರರಾಜ್ಯದಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ಚೆಕ್‌ಪೋಸ್ಟ್‌ಗಳನ್ನು(Checkpost) ಆರಂಭಿಸಲಾಗಿದೆ ಎಂದರು.

Omicron Threat: ದೇಶಾದ್ಯಂತ ಕೊರೋನಾ ಸ್ಫೋಟ: ಒಂದೇ ದಿನದಲ್ಲಿ 58,097 ಕೇಸ್‌..!

ಹೊರಗಿನಿಂದ ಬರುವವರು ಸ್ವಯಂಪ್ರೇರಿತರಾಗಿ ಕ್ವಾರಂಟೈನ್‌ನಲ್ಲಿರಬೇಕು(Quarantine). ಶುಕ್ರವಾರ ಸಂಜೆಯಿಂದಲೇ ವೀಕೆಂಡ್‌ ಕರ್ಫ್ಯೂ(Weekend Curfew) ಜಾರಿಯಾಗಲಿದೆ. ಜಿಲ್ಲೆಯ ದೇವಸ್ಥಾನಗಳಲ್ಲಿ ಎರಡೂ ಹಂತದ ಲಸಿಕೆ(Vaccine) ಪಡೆದಂತಹವರಿಗೆ ಮಾತ್ರ 50 ಜನರಂತೆ ಪ್ರವೇಶ ನೀಡಲಾಗುವುದು. ಎಲ್ಲ ರೀತಿಯ ರಾರ‍ಯಲಿ ಮತ್ತು ಧರಣಿಗಳನ್ನು ಬ್ಯಾನ್‌ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವುದರೊಂದಿಗೆ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಎಚ್ಚರ ವಹಿಸಬೇಕು ಎಂದರು.

ಚೆಕ್‌ಪೋಸ್ಟ್‌ಗಳಲ್ಲಿ 24X7 ಕಾರ್ಯನಿರ್ವಹಿಸುವಂತೆ ತಂಡಗಳನ್ನು ರಚಿಸಿದ್ದು, ಕಂದಾಯ, ಪೊಲೀಸ್‌ ಹಾಗೂ ಆರೋಗ್ಯಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅದೇರೀತಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ನಿಗಾವಹಿಸಲು ತಪಾಸಣಾ ತಂಡಗಳನ್ನು ನಿಯೋಜಿಸಿದ್ದು ಪ್ರಯಾಣಿಕರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಂಪರ್ಕ, ಪತ್ತೆ ಹಚ್ಚುವಿಕೆ ಹಾಗೂ ಐಸೋಲೇಶನ್‌ಗೆ ಆದ್ಯತೆ ನೀಡಿದ್ದು, ರಾಜ್ಯದಲ್ಲಿಯೇ ಉತ್ತರ ಕನ್ನಡ(Uttara Kannada) ಜಿಲ್ಲೆ ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷಾ(Covid Test) ಪ್ರಮಾಣಗಳನ್ನು ಸಹ ಹೆಚ್ಚಿಸಲಾಗುತ್ತಿದ್ದು ಪ್ರತಿದಿನ 3500-4000 ಪರೀಕ್ಷೆಗಳನ್ನು ನಡೆಸಲು ಗುರಿ ಹಾಕಿಕೊಂಡಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಿದೆ. ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಮಾಡಲು ತಾಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಕೋವಿಡ್‌ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಲ್ಲಿ ಗ್ರಾಮ ಪಂಚಾಯಿತಿ, ನಗರಸ್ಥಳಿಯ ಸಂಸ್ಥೆ ಮತ್ತು ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಉಲ್ಲಂಘಿಸಿದಲ್ಲಿ ದಂಡ ವಿಧಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್‌ ಪೆನ್ನೇಕರ್‌ ಇದ್ದರು.

ವಿದೇಶದಿಂದ ಬಂದ ಇಬ್ಬರಲ್ಲಿ ಪಾಸಿಟಿವ್‌

ವಿದೇಶದಿಂದ ಆಗಮಿಸಿದ ಇಬ್ಬರಲ್ಲಿ ಕೋವಿಡ್‌ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಡಿ. 1ರಿಂದ ವಿದೇಶದಿಂದ ಆಗಮಿಸಿದ ಒಟ್ಟೂ154 ಜನರನ್ನು ಆರ್‌ಟಿಪಿಸಿಆರ್‌(RTPCR) ಪರೀಕ್ಷೆಗೆ ಒಳಪಡಿಸಲಾಗಿತ್ತು. ಭಟ್ಕಳಕ್ಕೆ ಆಗಮಿಸಿದ ಒಬ್ಬರಲ್ಲಿ ಆಗಮಿಸಿದ 8ನೇ ದಿನಕ್ಕೆ ಪಾಸಿಟಿವ್‌ ಪತ್ತೆಯಾಗಿದ್ದರೆ ಮುಂಬಯಿಯಿಂದ(Mumbai) ಭಟ್ಕಳಕ್ಕೆ(Bhatkal) ಆಗಮಿಸಿದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಬುಧವಾರ ಕೊರೋನಾ(Coronavirus) ಸೋಂಕಿನಲ್ಲಿ ಹಠಾತ್‌ ಹೆಚ್ಚಳವಾಗಿದೆ. ಬುಧವಾರ ಸೋಂಕಿತರ ಸಂಖ್ಯೆ 19ಕ್ಕೇರಿದೆ. ಕೆಲವು ದಿನಗಳಿಂದ ಎರಡು ಅಂಕಿಯ ಒಳಗಡೆಯೇ ಸೋಂಕಿತರ ಸಂಖ್ಯೆ ಇರುತ್ತಿತ್ತು.

Covid Threat: ಕರ್ನಾಟಕ ಸೇರಿ ದೇಶದ 8 ರಾಜ್ಯ ಆತಂಕಕಾರಿ

ಧರ್ಮಾ​ನು​ಷ್ಠಾ​ನಕ್ಕೆ ರೋಗ ತಡೆ​ಯುವ ಶಕ್ತಿ: ಸ್ವರ್ಣ​ವಲ್ಲೀ ಶ್ರೀ

ಇಂದಿನ ಸಮಾಜದ ಜನರಲ್ಲಿ ಧಾರ್ಮಿಕ ಭಾವನೆಯ ಕೊರತೆ ಮತ್ತು ಪ್ರತಿಯೊಬ್ಬರ ದೇಹದಲ್ಲಿ ಸುದೀರ್ಘ ಕಾಲದ ದೋಷ ಸಂಚಯ, ನಿದ್ರಾ ಕೊರತೆಯ ಕಾರಣದಿಂದಾಗಿ ರೋಗಗಳ(Disease) ಸೃಷ್ಟಿಯಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿಯೊಬ್ಬರೂ ಅಗತ್ಯವಿರುವ ನಿವಾರಣೋಪಾಯಗಳನ್ನು ಅನುಸರಿಸಬೇಕಿದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ(Shri Gangadharendra Sarswati Swamiji) ನುಡಿದರು.

ಅವರು ತಾಲೂಕಿನ ಉಮ್ಮಚಗಿಯಲ್ಲಿ ಶ್ರೀ ಶ್ರೀಮಾತಾ ಸಂಸ್ಕೃತ ವೈದಿಕ ಶಿಕ್ಷಣ ಸಂಸ್ಥೆ (ಕೋಟೆಮನೆ), ಶ್ರೀ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆ 5 ದಿನಗಳಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಸಹಸ್ರ ಚಂಡಿಕಾ ಯಾಗದ(Chandika Yaga) ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪಾದಪೂಜೆ ಸ್ವೀಕರಿಸಿ, ಆಶೀರ್ವಚನ ನೀಡಿದ​ರು. ಬದಲಾಗುತ್ತಿರುವ ಪ್ರಸ್ತುತ ವಾತಾವರಣದಲ್ಲಿ ಅಧಿಕಗೊಳ್ಳುತ್ತಿರುವ ರೋಗ-ರುಜಿನಗಳು ಪರಿಹಾರವಾಗಿ ಸಮಾಜದಲ್ಲಿ ಧಾರ್ಮಿಕ ಭಾವನೆಗಳು ಅಧಿಕಗೊಳ್ಳಲಿ ಎಂಬ ಸದಾಶಯದಿಂದ ಸ್ಥಳೀಯ ವಿದ್ಯಾಸಂಸ್ಥೆಯ ಹಳೆಯ ಮತ್ತು ಇಂದಿನ ವಿದ್ಯಾರ್ಥಿಗಳೇ(Students) ಕೂಡಿ ನಡೆಸುತ್ತಿರುವ ಇಂದಿನ ಕಾರ್ಯಕ್ರಮ ಐತಿಹಾಸಿಕವಾಗಿದ್ದು, ಖಂಡಿತ ಶ್ಲಾಘನೀಯವಾಗಿದೆ ಎಂದರು.
 

Follow Us:
Download App:
  • android
  • ios