ಹಲವೆಡೆ ಶೂನ್ಯಕ್ಕಿಳಿದ ಕೊರೋನಾ: ಉಡುಪಿಯಲ್ಲಿ ಡೆಂಗ್ಯೂ ಅಬ್ಬರ
- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಹಲವು ಜಿಲ್ಲೆಗಳಲ್ಲಿ ಶೂನ್ಯಕ್ಕೆ
- ಉಡುಪಿಯಲ್ಲಿ ಈಗಲೂ ಎರಡಂಕಿ, ಮೂರಂಕಿ ಕೊರೋನಾ ಪಾಸಿಟಿವ್ ಕೇಸ್
- ಜಿಲ್ಲೆಯಲ್ಲಿ ಡೆಂಗ್ಯೂ ಮಾರಿ ಅಬ್ಬರ ಹೆಚ್ಚಳ
ಉಡುಪಿ (ಸೆ.16): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಹಲವು ಜಿಲ್ಲೆಗಳಲ್ಲಿ ಶೂನ್ಯಕ್ಕೆ ಇಳಿದಿದೆ.
ಉಡುಪಿಯಲ್ಲಿ ಈಗಲೂ ಎರಡಂಕಿ, ಮೂರಂಕಿ ಕೊರೋನಾ ಪಾಸಿಟಿವ್ ಕೇಸ್ ದಾಖಲಾಗುತ್ತಿದ್ದು, ಆದರೆ ಡೆಂಗ್ಯೂ ಮಾರಿ ಅಬ್ಬರಿಸಲಾರಂಭಿಸಿದೆ.
3ನೇ ಅಲೆ ಆರಂಭದ ಸೂಚನೆ : ಕೋವಿಡ್ ಮಹಾಸ್ಫೋಟ
ಈ ವರ್ಷ ಸೆಪ್ಟೆಂಬರ್ ವೇಳೆಗೆ 302 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೇವಲ 139 ಪ್ರಕರಣ ಕಂಡು ಬಂದಿತ್ತು.
ನಿರಂತರ ಮಳೆಯ ಕಾರಣಕ್ಕೆ ಡೆಂಗ್ಯೂ ಹೆಚ್ಚಳವಾಗಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲೂ ನಿರಂತರ ಮಳೆಯಿದ್ದು ಜೂನ್, ಜುಲೈ, ಆಗಸ್ಟ್ ತಿಂಗಳಲ್ಲೇ ಅತೀಹೆಚ್ವು ಪ್ರಕರಣ ಪತ್ತೆಯಾಗಿವೆ.
ಜೂನ್-108, ಜುಲೈ- 107, ಆಗಸ್ಟ್ - 76 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. 2017 ರ ನಂತರ ಈ ವರ್ಷವೇ ಹೆಚ್ಚಿನ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ.