Asianet Suvarna News Asianet Suvarna News

ಮೈಸೂರು : ಮೇ.29 ರಿಂದ ಜೂ.7ರವರೆಗೆ ಕಠಿಣ ಲಾಕ್‌ಡೌನ್


•    ಮೇ 29ರಿಂದ ಜೂನ್ 7ರವರೆಗೆ ಮೈಸೂರಿನಲ್ಲಿ ಲಾಕ್ಡೌನ್  ಕಟ್ಟುನಿಟ್ಟಾಗಿರಲಿದೆ - ಸೋಮಶೇಖರ್
•    ವಾರದಲ್ಲಿ 2 ದಿನ ತರಕಾರಿ, ದಿನಸಿ ಖರೀದಿಗೆ ಅವಕಾಶವಿದ್ದು ಕಡ್ಡಾಯವಾಗಿ ಪಾಲಿಸಲು ಸಚಿವರ ಸೂಚನೆ
 •    ಖರೀದಿಗಿರುವ 2 ದಿನದ ಅವಕಾಶದಲ್ಲಿ ಎಚ್ಚರದಿಂದಿರಿ; ಸಚಿವ ಎಸ್ ಟಿ ಎಸ್
 

Covid Cases Raise 10 Days strict Lockdown  in Mysuru   snr
Author
Bengaluru, First Published May 27, 2021, 12:10 PM IST

ಮೈಸೂರು (ಮೇ.27): ಮೈಸೂರು ಜಿಲ್ಲೆಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಕೊರೋನಾ ಸೋಂಕು ಪ್ರಕರಣಗಳು ತಹಬದಿಗೆ ಬಾರದ ಕಾರಣ ಮೇ 29ರಿಂದ ಜೂನ್ 7ರವರೆಗೆ ಲಾಕ್ಡೌನ್ ಮಾಡುವುದು ಅನಿವಾರ್ಯವಾಗಿದೆ. ಜಿಲ್ಲಾಧಿಕಾರಿಗಳಿಂದ ಈಗಾಗಲೇ ಆದೇಶ ಹೊರಬಿದ್ದಿದೆ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ. 

 ಮೈಸೂರಿನ ಮಹಾಜನತೆ  ಜಿಲ್ಲೆಯನ್ನು ಕೊರೋನಾ ಮುಕ್ತವಾಗಿ ಮಾಡಲು ಸಹಕಾರ ನೀಡಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಇಡೀ ರಾಜ್ಯಕ್ಕೆ ಮಾದರಿಯಾದ ಮೈಸೂರು ಮಹಾನಗರ ಪಾಲಿಕೆ ..

ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೈಮೀರುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಈ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲ ತಹಸೀಲ್ದಾರ್ ಗಳು ಹಾಗೂ ಜಿಲ್ಲಾ ಹಾಗೂ ತಾಲೂಕುಗಳ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸೋಮಶೇಖರ್   ತಿಳಿಸಿದ್ದಾರೆ.

ಖರೀದಿಗಿರುವ 2 ದಿನದ ಅವಕಾಶದಲ್ಲಿ ಎಚ್ಚರದಿಂದಿರಿ; ಸಚಿವ ಎಸ್ ಟಿ ಎಸ್ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸೋಮವಾರ ಹಾಗೂ ಗುರುವಾರ ಎರಡು ದಿನ ಕೆಲವು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. 

ಆದರೆ, ಹಾಲು, ಮೊಸರು ಪ್ರತಿ ದಿನ ಲಭ್ಯವಾಗಲಿದ್ದು,  ಖರೀದಿ ಪ್ರಕ್ರಿಯೆಗೆ ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಾರದಲ್ಲಿ 2 ದಿನ ಅಗತ್ಯ ವಸ್ತುಗಳಿಗೆ ಅವಕಾಶ ನೀಡಿದ್ದನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಯಾರೂ ಆತಂಕಗೊಳ್ಳದೇ ಸಮಾಧಾನದಿಂದ ವಸ್ತುಗಳನ್ನು ಖರೀದಿಸಬೇಕು. ಅಂದರೆ, ಅಂಗಡಿಗಳ ಮುಂದೆ ಗುಂಪು ಸೇರುವುದು, ಮುಗಿ ಬೀಳುವಂತಹ ಕಾರ್ಯಗಳನ್ನು ಮಾಡಬಾರದು. ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸುವುದರ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯನ್ನೂ ಸಹ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮೈಸೂರಿನ ಮಹಾ ಜನತೆಯಲ್ಲಿ ಪ್ರಾರ್ಥಿಸುವುದಾಗಿ ಸಚಿವರಾದ ಸೋಮಶೇಖರ್ ಅವರು ಮನವಿ ಮಾಡಿದ್ದಾರೆ.

•    ಮೇ 29ರಿಂದ ಜೂನ್ 7ರವರೆಗೆ ಮೈಸೂರಿನಲ್ಲಿ ಲಾಕ್ಡೌನ್  ಕಟ್ಟುನಿಟ್ಟಾಗಿರಲಿದೆ; ಸೋಮಶೇಖರ್
•    ವಾರದಲ್ಲಿ 2 ದಿನ ತರಕಾರಿ, ದಿನಸಿ ಖರೀದಿಗೆ ಅವಕಾಶವಿದ್ದು ಕಡ್ಡಾಯವಾಗಿ ಪಾಲಿಸಲು ಸಚಿವರ ಸೂಚನೆ
•    ಮೈಸೂರು ಮಹಾಜನತೆ ಸಹಕರಿಸುವಂತೆ ಉಸ್ತುವಾರಿ ಸಚಿವರ ಮನವಿ
•    ಖರೀದಿಗಿರುವ 2 ದಿನದ ಅವಕಾಶದಲ್ಲಿ ಎಚ್ಚರದಿಂದಿರಿ; ಸಚಿವ ಎಸ್ ಟಿ ಎಸ್

Follow Us:
Download App:
  • android
  • ios