Asianet Suvarna News Asianet Suvarna News

ತುಮಕೂರು : ಭಾರೀ ಇಳಿಕೆಯಾದ ಕೊರೊನಾ ಸೋಂಕು

  • ತುಮಕೂರಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಇಳಿಮುಖ
  • 40 ರಿಂದ ಶೇ4ಕ್ಕೆ ಇಳಿದ ಕೋವಿಡ್ ಪಾಸಿಟಿವಿಟಿ ದರ
  • ಕಟ್ಟುನಿಟ್ಟಿನ ಕ್ರಮದಿಂದ ಇಳಿದ ಕೊರೋನಾ ಸೋಂಕಿನ ಪ್ರಮಾಣ
Covid Cases Decline in  Tumakuru District snr
Author
Bengaluru, First Published Jun 15, 2021, 1:13 PM IST

ತುಮಕೂರು (ಜೂ.15) : ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೊರೋನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು ಕಟ್ಟುನಿಟ್ಟಿನ ಕ್ರಮಗಳು ಮುಂದುವರಿಯಲಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು. 

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿ ಜಿಲ್ಲೆಯಲ್ಲಿ  ಕೋವಿಡ್ 19 ಸೋಂಕಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಕೊರೋನಾ ಎರಡೆ ಅಲೆ ಆರಂಭದಲ್ಲಿ ಶೇ.40ಕ್ಕಿಂತ ಹೆಚ್ಚಿದ್ದ ಪಾಸಿಟಿವಿಟಿ  ಪ್ರಮಾಣ  4.5ಕ್ಕೆ ಇಳಿಕೆಯಾಗಿದೆ. 

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಕಡಿಮೆ .

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಂಪೂರ್ಣ ನಿಯಂತ್ರಣಕ್ಕೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ಪ್ರತಿನಿತ್ಯ  6500 ರಿಂದ 7 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು. 

ಸರ್ಕಾರದ ನಿರ್ದೇಶನದಂತೆ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗಿದ್ದು  ಮುಂದಿನ 15 ದಿನಗಳ ಕಾಲ  ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಸತತವಾಗಿ ನಡೆಸಲು ನಿರ್ಧರಿಸಲಾಗಿದೆ. ಖಾಸಗಿ ಅಸ್ಪತ್ರೆಗಳಿಗೆ ಯಾವುದೇ ವ್ಯಕ್ತಿ ಚಿಕಿತ್ಸೆಗೆ ಬಂದರೆ ಅವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿದೆ ಎಂದರು. 

ಆರೋಗ್ಯ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಮಾರುಕಟ್ಟೆ ಬ್ಯಾಂಕ್ ಸೇರಿದಂತೆ ಅತೀ ಹೆಚ್ಚು ಜನಸಂದಣಿ ಸೇರಲು ನಿರೀಕ್ಷಿಸಲಾಗಿರುವ ಪ್ರದೇಶಗಳಾದ ಗಾರ್ಮೆಂಟ್ಸ್  ಆಹಾರ ತಯಾರಿಕಾ ಘಟಕ  ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.  ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತದೆ ಎಂದು ಹೇಳಿದರು. 

ಬ್ಯಾಂಕ್, ಪೆಟ್ರೊಲ್ ಬಮಕ್, ಕೋ ಆಪರೇಟಿವ್ ಸೊಸೈಟಿ, ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಸೋಂಕಿನ ಲಕ್ಷಣಗಳುಳ್ಲ ಸಿಬ್ಬಮದಿಗಳು ಕಡ್ಡಾಯವಾಗಿ ಪರೀಕ್ಷೆಗೊಳಗಾಗಲು ಸೂಚಿಸಲಾಗಿದೆ. 

Follow Us:
Download App:
  • android
  • ios