Covid Crisis: ಬೆಂಗಳೂರಿನ ಗಲ್ಲಿ ಗಲ್ಲಿಗಳಿಗೆ ಆವರಿಸಿದ ಕೊರೋನಾ, 2 ವಲಯಗಳು ಭಾರೀ ಡೇಂಜರ್!

* ಬೆಂಗಳೂರಿನ ಗಲ್ಲಿ ಗಲ್ಲಿಗಳಿಗೆ ಆವರಿಸಿದ ಕೊರೊನಾ ಸೋಂಕು

* ಕಳೆದ ಒಂದು ವಾರದಲ್ಲಿ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆ ದಿಢೀರ್ ಏರಿಕೆ

* ನಿರೀಕ್ಷೆಗೂ‌ ಮೀರಿ ನಗರದಲ್ಲಿ ಹರಡುತ್ತಿರುವ ಸೋಂಕು

Covid cases are increasing in Bengaluru containment zones Increased to 243 pod

ಬೆಂಗಳೂರು(ಜ.11): ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕೊರೋನಾ ಸೋಂಕು ಹರಡಲಾರಂಭಿಸಿದೆ. ಕೊರೋನಾ ನಿಯಂತ್ರಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಸಿಲಿಕಾನ್ ಸಿಟಿ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿದೆ. ಕಳೆದ ಒಂದು ವಾರದಲ್ಲಿ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದ್ದು, ನಿರೀಕ್ಷೆಗೂ‌ ಮೀರಿ ನಗರದಲ್ಲಿ ಸೋಂಕು ಹರಡುತ್ತಿದೆ.

412ಕ್ಕೆ ಏರಿಕೆಯಾದ ಕಂಟೈನ್ಮೆಂಟ್‌ ಜೋನ್​ ಗಳ ಸಂಖ್ಯೆ 

ಬೆಂಗಳೂರಿನ ಎರಡು ವಲಯಗಳು ಭಾರೀ ಡೇಂಜರ್ ಎಂದು ಘೋಷಿಸಲಾಗಿದ್ದು, ಈ‌ ಎರಡು ವಲಯಗಳಲ್ಲೇ 243 ಕಂಟೈನ್ಮೆಂಟ್ ಜೋನ್ ಗಳ ರಚನೆ ಮಾಡಲಾಗಿದೆ. ಮಹದೇವಪುರ & ಬೊಮ್ಮನಹಳ್ಳಿ ವಲಯಗಳಲ್ಲಿ ಅತೀ ಹೆಚ್ಚಿನ ಕಂಟೈನ್ಮೆಂಟ್ ಜೋನ್ ಗಳ ರಚನೆಯಾಗಿದೆ ಎಂಬುವುದು ಉಲ್ಲೇಖನೀಯ. 

ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಜೋನ್ ಗಳು ರಚನೆಯಾಗಿವೆ.!?

ಬೊಮ್ಮನಹಳ್ಳಿ ವಲಯ - 100
ಮಹದೇವಪುರ - 143
ದಕ್ಷಿಣ ವಲಯ - 49
ಪಶ್ಚಿಮ ವಲಯ - 44
ಪೂರ್ವ ವಲಯ - 33
ಯಲಹಂಕ ವಲಯ‌ - 33
ದಾಸರಹಳ್ಳಿ‌ವಲಯ - 6
ಆರ್‌ಆರ್‌ ನಗರ ವಲಯ - 4

ಒಟ್ಟು - 412 ಕಂಟೈನ್ಮೆಂಟ್ ಜೋನ್ ಗಳು

ನಗರದಲ್ಲಿ ಪಾಸಿಟಿವಿಟಿ ದರ ಶೇ.13ಕ್ಕೇರಿಕೆ

ಸಿಲಿಕಾನ್‌ಸಿಟಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಏರಿಕೆಯಾಗಿದ್ದು, 226 ದಿನಗಳ ಬಳಿಕ ಸೋಮವಾರ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಪಾಸಿಟಿವಿಟಿ ದರ ಶೇ.13ಕ್ಕೆ ಹೆಚ್ಚಳವಾಗಿದೆ.

ಈ ಹಿಂದೆ ಮೇ 21ರಂದು ಪತ್ತೆಯಾಗಿದ್ದ 9591 ಸೋಂಕಿತ ಪ್ರಕರಣಗಳೇ ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ನಗರದಲ್ಲಿ ಸೋಮವಾರ 9221 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿರುವ ವರದಿಯಾಗಿದೆ. ಇದರಿಂದ ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 13.08 ಲಕ್ಷಕ್ಕೆ ಏರಿಕೆಯಾಗಿದೆ. 829 ಮಂದಿ ಗುಣಮುಖರಾಗಿದ್ದು, ಈವರೆಗೆ ಸೋಂಕಿನಿಂದ ಬಿಡುಗಡೆಯಾದರ ಸಂಖ್ಯೆ 12.43ಕ್ಕೆ ಹೆಚ್ಚಳವಾಗಿದೆ. ಇಬ್ಬರ ಸಾವಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 16,424ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 48,960ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಸೋಮವಾರ ಪತ್ತೆಯಾದ 9221 ಸೋಂಕಿತ ಪ್ರಕರಣಗಳ ಪೈಕಿ 9 ವರ್ಷದೊಳಗಿನ 274 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 10ರಿಂದ 19 ವಯೋಮಿತಿಯೊಳಗಿನ 91 ಮಕ್ಕಳು, 20ರಿಂದ 29 ವರ್ಷದೊಳಗಿನ 878 ಯುವಕರು, 30ರಿಂದ 39 ವಯೋಮಿತಿಯೊಳಗಿನ 2390, 40ರಿಂದ 49 ವರ್ಷದೊಳಗಿನ 2250 ವಯಸ್ಕರಲ್ಲಿ ಸೋಂಕು ದೃಢಪಟ್ಟಿದೆ. 40ರಿಂದ 49 ವರ್ಷದ 1465, 50ರಿಂದ 59 ವಯೋಮಿತಿಯೊಳಗಿನ 972 ಮತ್ತು 60ರಿಂದ 69 ವರ್ಷದೊಳಗಿನ 609 ಹಾಗೂ 70 ವರ್ಷ ಮೇಲ್ಪಟ್ಟ392 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ದಿನಾಂಕ - ಸೋಂಕಿತರು

ಜ.3-1041

ಜ.4-2053

ಜ.5 -3605

ಜ.6-4324

ಜ.7-6812

ಜ.8-7113

ಜ.9-9020

ಜ.10-9221

Latest Videos
Follow Us:
Download App:
  • android
  • ios