Asianet Suvarna News Asianet Suvarna News

ಗಮನಿಸಿ.. ಮೈಸೂರಯ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇಲ್ಲ/ ಜಿಲ್ಲಾಡಳಿತದಿಂದ ಆದೇಶ/ ಕೊರೋನಾ ಎಚ್ಚರಿಕೆ ಕಾರಣಕ್ಕೆ ಕ್ರಮ/ ಮಹಾಲಯ ಅಮಾವಾಸ್ಯೆ ದಿನ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ

COvid 19 restriction-on-entry-to-chamundi-hills-on Sep 16 to 18 mh
Author
Bengaluru, First Published Sep 15, 2020, 11:08 PM IST

ಮೈಸೂರು (ಸೆ 15)  ಒಂದು ಕಡೆ ಕೊರೋನಾ ವ್ಯಾಪಿಸುತ್ತಲೇ ಇದೆ.. ಈ ನಡುವೆ ದೇವಾಲಯಗಳ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಸೆಪ್ಟೆಂಬರ್ 17  ಮಹಾಲಯ ಅಮಾವಾಸ್ಯೆಯಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಜಾಸ್ತಿ ಇರುವ ಕಾರಣಕ್ಕೆ ಜಿಲ್ಲಾಡಳಿತ ಪ್ರವೇಶ ನಿಷೇಧ ಮಾಡಿದೆ.

ಬೆಟ್ಟ ಸಂಪರ್ಕಿಸುವ ರಸ್ತೆಗಳನ್ನು ಕೂಡ ಬಂದ್ ಮಾಡಲು ನಿರ್ಧರಿಸಲಾಗಿದೆ. ಸೆ. 16ರಿಂದ 18ವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ.

ಚಾಮುಂಡಿ ಬೆಟ್ಟಕ್ಕೆ ಹೋಗಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ್ದರಾ ಚಾಲೆಂಜಿಂಗ್ ಸ್ಟಾರ್?

ಕೊರೋನಾ ಆರ್ಭಟ ರಾಜ್ಯದಲ್ಲಿ ಮುಂದುವರಿದಿದೆ. ಮೈಸೂರು ಜಿಲ್ಲೆಯಲ್ಲಿಯೂ ಪ್ರಕರಣ ದಾಖಲಾಗುತ್ತಲೇ ಇದೆ. ಈ ನಡುವೆ ಜಿಲ್ಲಾಡಳಿತ ಮುಂಜಾಗೃತಾ ಕ್ರಮವೊಂದನ್ನು ತೆಗೆದುಕೊಂಡಿದೆ.

ಹಿಂದೆ ಕೊರೋನಾ ಲಾಕ್ ಡೌನ್ ಜಾರಿಯಲ್ಲಿ ಇದ್ದ ವೇಳೆ ಸಿನಿಮಾ ನಟರು ಮತ್ತು ರಾಜಕಾರಣಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.

Follow Us:
Download App:
  • android
  • ios