ಕರ್ನಾಟಕದಲ್ಲಿ ಲಸಿಕಾ ಅಭಿಯಾನ/ ಒಂದು ಕೋಟಿ ಲಸಿಕೆ ಗುರಿ ಸಾಧನೆ/ ಕೊರೋನಾ ಎರಡನೇ ಅಲೆ ನಡುವೆ ಲಸಿಕಾ ಅಭಿಯಾನ/  ರಾಜ್ಯ ಸರ್ಕಾರ  ಎಲ್ಲರ ಸುರಕ್ಷತೆಗೂ ಬದ್ಧವಾಗಿದೆ

ಬೆಂಗಳೂರು (ಮೇ 05) ಭಾರತ ಪ್ರಪಂಚದಲ್ಲಿಯೇ ಅತಿದೊಡ್ಡ ಲಸಿಕಾ ಅಭಿಯಾನವನ್ನು ಆರಂಭ ಮಾಡಿತ್ತು. ಕರ್ನಾಟಕ ಬುಧವಾರ ಒಂದು ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಪೂರೈಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ.

ಕರ್ನಾಟಕ ಇಲ್ಲಿಯವರೆಗೆ 1 ಕೋಟಿ ಡೋಸ್ ಲಸಿಕೆ ವಿತರಣೆ ಪೂರೈಸಿದೆ. ಈವರೆಗೂ ಕೇಂದ್ರದಿಂದ ರಾಜ್ಯಕ್ಕೆ 1,05,49,970 ಡೋಸ್ ಲಸಿಕೆ ಲಭ್ಯವಾಗಿದ್ದು, ರಾಜ್ಯ ಸರ್ಕಾರ 3 ಲಕ್ಷ ಡೋಸ್ ತರಿಸಿಕೊಂಡಿದೆ ಎಂದು ಸಚಿವ ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಬಹ್ರೇನ್ ನಿಂದ ಕರ್ನಾಟಕಕ್ಕೆ ಬಂತು ಆಕ್ಸಿಜನ್

ಕರ್ನಾಟಕ ಇಂದು 1 ಕೋಟಿ ಡೋಸ್ ಲಸಿಕೆ ವಿತರಣೆ ಪೂರೈಸಿದೆ. ಈವರೆಗೂ ಕೇಂದ್ರದಿಂದ ರಾಜ್ಯಕ್ಕೆ 1,05,49,970 ಡೋಸ್ ಲಸಿಕೆ ಲಭ್ಯವಾಗಿದ್ದು, ರಾಜ್ಯ ಸರ್ಕಾರ 3 ಲಕ್ಷ ಡೋಸ್ ತರಿಸಿಕೊಂಡಿದೆ. ಕೊರೊನಾ ವಿರುದ್ಧದ ಈ ಸಮರದಲ್ಲಿ ಲಸಿಕೆ ನಮ್ಮ ಅತ್ಯಂತ ದೊಡ್ಡ ಅಸ್ತ್ರವಾಗಿದ್ದು ಪ್ರತಿಯೊಬ್ಬರಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆ ಬೇಕೆಂದವರು ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕರ್ನಾಟಕ ಸರ್ಕಾರ ಸಹ ಹದಿನೆಂಟು ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುತ್ತೇವೆ ಎಂದು ಹೇಳಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಹಂತಹಂತವಾಗಿ ಲಸಿಕೆ ಪೂರೈಕೆ ಮಾಡಲಾಗುತ್ತದೆ. ಹದಿನೆಂಟು ವರ್ಷ ಮೇಲ್ಪಟ್ಟವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅಂದಾಜು ಕರ್ನಾಟಕದ ಜನಸಂಖ್ಯೆ ಆರೂವರೆ ಕೋಟಿ ಎಂದು ಪರಿಗಣಿಸಿದರೆ ಅದರಲ್ಲಿ ಒಂದು ಕೋಟಿ ಜನರಿಗೆ ಮೊದಲನೇ ಡೋಸ್ ನೀಡಲಾಗಿದೆ. ಇದರ ಅರ್ಥ ಶೇ. 15 ರಿಂದ ಶೇ. 20 ಸಾಧನೆಯಾಗಿದೆ. ಆರಂಭದಲ್ಲಿ ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡಿದ್ದ ಸರ್ಕಾರ ನಂತರ ಹಿರಿಯ ನಾಗರಿಕರಿಗೆ ನೀಡಿತ್ತು. ಇದಾದ ಮೇಲೆ 45 ವರ್ಷದ ಮೇಲ್ಪಟ್ಟವರಿಗೆ ಮತ್ತೊಂದು ಹಂತದಲ್ಲಿ ನೀಡಿತ್ತು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಗಿದೆ.

Scroll to load tweet…
Scroll to load tweet…