Asianet Suvarna News Asianet Suvarna News

Covid 19 ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ: ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಎರಡನೇ FIR !

*ಕೋವಿಡ್‌ ನಿಯಮ ಗಾಳಿಗೆ ತೂರಿ ಬರ್ತಡೆ
*ಬಿಜೆಪಿ ಮುಖಂಡನ ವಿರುದ್ಧ ಎರಡನೇ ಎಫ್ ಐ ಆರ್
*ಬನಶಂಕರಿಯ ಮನೆ ಬಳಿ  ಹುಟ್ಟುಹಬ್ಬ ಆಚರಿಣೆ

Covid 19 Guidelines Violation Second FIR registered against BJP Bengaluru South leader N Ramesh mnj
Author
Bengaluru, First Published Jan 22, 2022, 10:59 AM IST

ಬೆಂಗಳೂರು(ಜ.22): ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರ ಕಳೆದ ಎರಡು ವಾರಾತ್ಯಂತಗಳಲ್ಲಿ ವಿಕೇಂಡ್‌ ಕರ್ಫ್ಯೂ ಜಾರಿಗೊಳಿಸಿತ್ತು. ಈ ಮಧ್ಯೆ ಜನವರಿ 14 ರಂದು ರಾಯಪುರ ವಾರ್ಡ್‌ನ ಬಿಬಿಎಂಪಿ ಕಟ್ಟಡದಲ್ಲಿ ಬಿಜೆಪಿ ಮುಖಂಡ  ಎನ್ ಆರ್ ರಮೇಶ್ (N R Ramesh) ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಮುಖಂಡ ಎನ್‌. ಆರ್‌. ರಮೇಶ್ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ವೀಕೆಂಡ್ ಕರ್ಫ್ಯೂ ವಿಧಿಸಿದ್ದ ಸಂದರ್ಭದಲ್ಲಿ ಶಾಸಕ ರಮೇಶ್ ತಮ್ಮ ಬನಶಂಕರಿಯ ಮನೆ ಬಳಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿಸಿ ಅದ್ದೂರಿಯಾಗಿ ಬರ್ತಡೆ ಆಚರಣೆ ಮಾಡಲಾಗಿತ್ತು. ಕೋವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಈಗ ಕಂಟಕ ಎದುರಾಗಿದೆ. ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಎರಡನೇ ಎಫ್ ಐ ಆರ್ ದಾಖಲಾಗಿದೆ 

ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎನ್ ಡಿ‌ಎಂಎ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.  ಬಿಜೆಪಿ ಮುಖಂಡ  ಎನ್ ಆರ್ ರಮೇಶ್ ವಿರುದ್ಧ ಕರ್ನಾಟಕ ಪ್ರದೇಶ ಸಮಿತಿ ದೂರು ನೀಡಿದ್ದು "ಜನವರಿ 14 ರ ಸಂಜೆ ವಾರಾಂತ್ಯದ ಕರ್ಫ್ಯೂ ಆರಂಭದ ಕೆಲವು ಗಂಟೆಗಳ ಮುನ್ನ ಸಂಜೆ 5 ಗಂಟೆಗೆ ಸುಮಾರು ರಾಯಪುರ ವಾರ್ಡ್‌ನ ಬಿಬಿಎಂಪಿ ಕಟ್ಟಡದಲ್ಲಿ ಮಾಜಿ ಕಾರ್ಪೊರೇಟರ್ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್. ಆರ್. ರಮೇಶ್ ಅವರ ಹುಟ್ಟು ಹಬ್ಬವನ್ನು ಸಾಮಾಜಿಕ ಅಂತರವಿಲ್ಲದ ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಮಾಸ್ಕ್‌ಗಳನ್ನು ಧರಿಸದೆ ಆಚರಿಸಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Covid-19: ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ಶಾಸಕರ ವರ್ತನೆ ಸಮರ್ಥಿಸಿಕೊಂಡ ಅಶ್ವಥ್ ನಾರಾಯಣ್!

"ಸ್ಥಳೀಯ ಮುಖಂಡರಾದ ಕೇಶವ, ಗೋಪಾಲ ಮತ್ತು ಮಾಜಿ ಬಿಬಿಎಂಪಿ ಸದಸ್ಯ ಶಶಿಕಲಾ ಗೋಪಾಲ್ ಅನುಮತಿ ಪಡೆಯದ ಬಿಬಿಎಂಪಿ ಕಟ್ಟಡದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗುವಂತೆ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಯ ಸಿಬ್ಬಂದಿ ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ದಯಮಾಡಿ ತಾವು ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ಸಾಂಕ್ರಾಮಿಕ ರೋಗ ಹಬ್ಬಿಸಲು ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಮಾಡಿದ ಎನ್.ಆರ್. ರಮೇಶ್, ಕೇಶವ, ಗೋಪಾಲ್ ಮತ್ತು ಶಶಿಕಲಾ ಗೋಪಾಲ್ ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ" ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಕಾಂಗ್ರೆಸ್ ನಾಯಕರ ವಿರುದ್ಧ 3ನೇ FIR ದಾಖಲು: ಮೇಕೆದಾಟು ಯೋಜನೆ(Mekedatu Project) ಸಂಬಂಧ ಕಾಂಗ್ರೆಸ್(Congress) ನಾಯಕರು ನಡೆಸುತ್ತಿರುವ ಪಾದಯಾತ್ರೆಯ(Padayatra) ವಿರುದ್ಧ 3ನೇ ಎಫ್ಐಆರ್(FIR) ದಾಖಲಾಗಿದೆ. ಜಿಲ್ಲೆಯ ಕನಕಪುರ ಪೊಲೀಸ್ ಠಾಣೆಯಲ್ಲಿ 3ನೇ ಎಫ್​ಐಆರ್ ದಾಖಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ 64 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.  ಎ1 ಡಿ.ಕೆ.ಶಿವಕುಮಾರ್(DK Shivakumar), ಎ2 ಡಿ.ಕೆ.ಸುರೇಶ್(DK Suresh), ಎ3 ಸಿದ್ದರಾಮಯ್ಯ(Siddaramaiah), ಎ4 S.ರವಿ, ಎ5 ಧ್ರುವನಾರಾಯಣ, ಎ6 ಪ್ರಿಯಾಂಕ್ ಖರ್ಗೆ, ಎ7 ಈಶ್ವರ ಖಂಡ್ರೆ, ಎ8 ತನ್ವೀರ್ ಸೇಠ್, ಎ9 ಅನಿಲ್ ಚಿಕ್ಕಮಾಧು ಸೇರಿದಂತೆ 64 ಜನರ ವಿರುದ್ಧ ಕನಕಪುರ(Kanakapura) ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: Coronavirus: ಮಾಸ್ಕ್ ಹಾಕದ ಪ್ರತಿನಿಧಿಗಳಿಗೆ ಭದ್ರತೆ, ಜನರ ಮೇಲೆ ಲಾಠಿಚಾರ್ಜ್!

ಈಗಲ್ ಟನ್, ವಂಡರ್ ಲಾದಲ್ಲಿ ಕೈ ನಾಯಕರ ವಾಸ್ತವ್ಯ: ನಾಲ್ಕನೆ ದಿನದ ಪಾದಯಾತ್ರೆ ಬುಧವಾರ ರಾತ್ರಿ ರಾಮನಗರ(Ramanagara) ಪ್ರವೇಶಿಸಲಿದೆ. ಹೀಗಾಗಿ, ಪ್ರಮುಖ ನಾಯಕರ ವಾಸ್ತವ್ಯಕ್ಕಾಗಿ ನಗರದ ಈಗಲ್ ಟನ್ ರೆಸಾರ್ಟ್‌(Eagleton Resort), ವಂಡರ್ ಲಾಗಳಲ್ಲಿ(Wonderla)‌ ರೂಂ ಬುಕ್ ಮಾಡಲಾಗಿದೆ. ಬಿಡದಿಯಲ್ಲಿನ ಡಿ.ಕೆ.ಶಿವಕುಮಾರ್‌ ಅವರು ಒಡೆತನದಲ್ಲಿರುವ ಐಕಾನ್ ಕಾಲೇಜು, ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಅವರಿಗೆ ಸೇರಿದ ಜ್ಞಾನ ವಿಕಾಸ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಹ ಎರಡನೇ ಹಂತದ ನಾಯಕರಿಗಾಗಿ ಹಾಸಿಗೆಗಳನ್ನು ಸಿದ್ದಪಡಿಸಲಾಗಿದೆ. ಇನ್ನು ರಾಮನಗರದ ಲಾಡ್ಜ್‌ಗಳೆಲ್ಲವೂ ಬಹುತೇಕ ಬುಕ್ ಆಗಿವೆ ಎಂದು ತಿಳಿದು ಬಂದಿದೆ.  

Follow Us:
Download App:
  • android
  • ios