ಕೊರೋನಾ ಎಫೆಕ್ಟ್ ಇದೀಗ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೇಹಗಳು ಸಿಗುತ್ತಿಲ್ಲ.

ವರದಿ : ಶಿವಾನಂದ ಗೊಂಬಿ

 ಹುಬ್ಬಳ್ಳಿ (ಸೆ.02):  ಕೊರೋನಾ ಎಫೆಕ್ಟ್ನಿಂದ ರಾಜ್ಯಾದ್ಯಂತ ದೇಹದಾನ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ವೈದ್ಯಕೀಯ ವಿದ್ಯಾರ್ಥಿಗಳ ಪ್ರಯೋಗಕ್ಕೆ ಉಪಯೋಗವಾಗಬೇಕಿದ್ದ ದೇಹಗಳು ಕೋವಿಡ್‌ ಭೀತಿಯಿಂದಾಗಿ ಮಣ್ಣಾಗುತ್ತಿವೆ. ಇದರಿಂದಾಗಿ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರಯೋಗಾಲಯಕ್ಕೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ನೇತ್ರದಾನದಂತೆ ದೇಹದಾನಕ್ಕೂ ಪ್ರಾಮುಖ್ಯತೆ ಇದೆ. ನೇತ್ರದಾನದಿಂದ ಅಂಧರ ಬದುಕಲ್ಲಿ ಬೆಳಕು ಬಂದರೆ, ದೇಹದಾನವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಪ್ರಯೋಗಕ್ಕೆ ಹಾಗೂ ಸಂಶೋಧನೆಗೆ ಬಳಕೆಯಾಗುತ್ತದೆ. ಹೊಸ ಸಂಶೋಧನೆಗಳಿಗೆ ಅವಕಾಶ ಮಾಡಿಕೊಡುತ್ತದೆ.

ಬೆಂಗಳೂರಲ್ಲಿ ಮೂರೇ ದಿನದಲ್ಲಿ 76297 ಕೋವಿಡ್‌ ಟೆಸ್ಟ್‌...

ಹುಬ್ಬಳ್ಳಿ- ಧಾರವಾಡದಲ್ಲಿ ಕಿಮ್ಸ್‌ ಹಾಗೂ ಎಸ್‌ಡಿಎಂ ಹೀಗೆ 2 ವೈದ್ಯಕೀಯ ಕಾಲೇಜುಗಳಿವೆ. ಎರಡೂ ಕಾಲೇಜುಗಳಲ್ಲಿ ಪ್ರತಿ ತಿಂಗಳು ಸುಮಾರು 6 ದೇಹದಾನ ನಡೆಯುತ್ತಿತ್ತು. ಆದರೆ ಕೊರೋನಾ ಪ್ರಾರಂಭವಾದಾಗಿನಿಂದ ಈವರೆಗೆ ದೇಹದಾನ ಪಡೆದುಕೊಳ್ಳುವ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿದೆ.

ಕೊರೋನಾ ಮಧ್ಯೆ ಫೈನಲ್‌ ಇಯರ್‌ ಬಿಇ ಪರೀಕ್ಷೆ ಆರಂಭ...

ಕೊರೋನಾ ಇಳಿಕೆಯಾಗುವವರೆಗೂ ನಾವು ಬಾಡಿ ಡೊನೇಟ್‌ ಪಡೆದುಕೊಳ್ಳುತ್ತಿಲ್ಲ. ಕೊರೋನಾ ಸಾಂಕ್ರಾಮಿಕ ಸೋಂಕು ಆದ ಕಾರಣ ಈ ನಿಯಮ ಪಾಲಿಸುವುದು ಅನಿವಾರ್ಯ ಎಂದು ವೈದ್ಯಕೀಯ ಕಾಲೇಜೊಂದರ ಅಂಗರಚನಾ ಶಾಸ್ತ್ರ ವಿಭಾಗದ ಮೂಲಗಳು ತಿಳಿಸುತ್ತವೆ. ದೇಹದಾನ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಸದ್ಯಕ್ಕೇನೂ ಸಮಸ್ಯೆಯಾಗಿಲ್ಲ. ಆದರೆ, ಪರಿಸ್ಥಿತಿ ಹೀಗೆ ಇನ್ನಷ್ಟುದಿನ ಮುಂದುವರಿದರೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರಯೋಗಕ್ಕೆ ಸಮಸ್ಯೆ ಎದುರಾಗುವುದು ಖಚಿತ ಎಂಬ ಮಾತು ವೈದ್ಯ ಕಾಲೇಜುಗಳಿಂದ ಕೇಳಿ ಬರುತ್ತಿದೆ.