ಹಿರಿಯೂರು (ಸೆ.30):  ಕೋವಿಡ್‌-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಬೆಳಗಾವಿಯ ಜೀವನ್‌ ರೇಖಾ ಆಸ್ಪತ್ರೆಯಲ್ಲಿ ನಡೆಸುತ್ತಿರುವ ಕ್ಲಿನಿಕಲ್ ಟ್ರಯಲ್ಸ್‌ ಮೊದಲ ಹಂತದ ಪ್ರಯೋಗಕ್ಕೆ ಒಡ್ಡಿಕೊಂಡು ಯಶಸ್ವಿಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಚಲನಚಿತ್ರ ನಿರ್ಮಾಪಕ, ಕಾದಂಬರಿಕಾರ ಡಿ.ಸಿ.ಪಾಣಿ ಅವರು ಮಂಗಳವಾರ 2ನೇ ಹಂತದ ಪ್ರಯೋಗಕ್ಕೆ ಮತ್ತೆ ಅಣಿಯಾಗಿದ್ದಾರೆ. 

ಬೆಳಗಾವಿ ಜೀವನ್‌ ರೇಖಾ ಆಸ್ಪತ್ರೆಯ ಡಾ.ಅಜಯ್ ಅವರಿಂದ 2ನೇ ಹಂತದ ಪ್ರಾಯೊಗಿಕ ಲಸಿಕಾ ಪ್ರಯೋಗ ಮಂಗಳವಾರ ನಡೆಸಲಾಗಿದೆ.

 ಲಸಿಕೆ ಪ್ರಯೋಗವಾದ ನಂತರ, ಸಂಸ್ಥೆಯ ನಿರ್ದೇಶಕ ಡಾ.ಅಮಿತ್‌ ಭಾತೆ ಜೊತೆ ಕೋವಿಡ್‌-19 ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾಗಿ ಡಿ.ಸಿ.ಪಾಣಿ ಅವರು ಕ್ಕೆ ತಿಳಿಸಿದರು.

ಕರ್ನಾಟಕದಲ್ಲಿ ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕೊರೋನಾ ಕೇಸ್ ಪತ್ತೆ

ಈಗಾಗಲೇ ದೇಶದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಕೊರೋನಾ ಮಹಾಮಾರಿಯಿಂದ ಬಳಲುತ್ತಿದ್ದು, ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಈ ನಿಟ್ಟಿನಲ್ಲಿ ಔಷಧಿ ಕಂಡು ಹಿಡಿಯಲು ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ.