ಕೋರ್ಟ್ ದಾವೆ ಗ್ರಾಪಂ ಮಟ್ಟದಲ್ಲೂ ಇತ್ಯರ್ಥ: ಸಚಿವ ಮಾಧುಸ್ವಾಮಿ

ನ್ಯಾಯಾಲಯಗಳ ಮೇಲಿನ ಒತ್ತಡಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಈ ನಿಟ್ಟಿನಲ್ಲಿ ಕೆಲವು ವ್ಯವಸ್ಥೆಗಳನ್ನು ರೂಪಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

Court system at Gram Panchayat level says jc madhuswamy ar ankola rav

ಅಂಕೋಲಾ (ಡಿ.11) : ನ್ಯಾಯಾಲಯಗಳ ಮೇಲಿನ ಒತ್ತಡಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಈ ನಿಟ್ಟಿನಲ್ಲಿ ಕೆಲವು ವ್ಯವಸ್ಥೆಗಳನ್ನು ರೂಪಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ರಾಜ್ಯ ನೋಟರಿಗಳ ಸಂಘದ ಆಶ್ರಯದಲ್ಲಿ ತಾಲೂಕಿನ ಶೆಟಗೇರಿಯ ವಾಸುದೇವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ನೋಟರಿಗಳ 13ನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ಥಳೀಯ ಕಾನೂನಾತ್ಮಕ ಸಮಸ್ಯೆಗಳನ್ನು ಗ್ರಾಪಂ ಮಟ್ಟದಲ್ಲಿ ಇತ್ಯರ್ಥಪಡಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ನೈತಿಕ ಪೊಲೀಸ್‌ಗಿರಿ ಇಲ್ಲ: ಖಾದರ್‌ಗೆ ಸಚಿವ ಮಾಧುಸ್ವಾಮಿ ತಿರುಗೇಟು

ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ನೋಟರಿಗಳನ್ನು ನೇಮಕ ಮಾಡಲಾಗಿದೆ. ನೋಟರಿಗಳು ನೀಡುವ ಪ್ರಮಾಣಪತ್ರದ ಮೇಲೆ ಸಮಾಜದಲ್ಲಿ ಗೌರವ ಭಾವನೆ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ನೋಟರಿಗಳು ಒತ್ತಡಗಳಿಗೆ ಮಣಿಯದೇ ನಿರ್ಭೀತಿಯಿಂದ ಕೆಲಸ ಮಾಡಬೇಕು ಎಂದರು.

ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತ ತನ್ನ ಜ್ಞಾನ ಸಂಪತ್ತಿನ ಮೂಲಕ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದು ಬ್ರಿಟಿಷರು ಮಾಡಿರುವ ಕಾನೂನು ವ್ಯವಸ್ಥೆಯ ಮೊದಲು ಭಾರತೀಯ ನ್ಯಾಯಾಂಗ ವ್ಯವಸ್ಥೆ ಅದ್ಭುತವಾಗಿತ್ತು ಎಂದರು.

ಆದರ್ಶ ಮೌಲ್ಯಗಳು ಕಳೆದು ಹೋಗಿ ನೈತಿಕ ಮಟ್ಟಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೋಟರಿಗಳು ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಅಗತ್ಯತೆ ಇದೆ ಎಂದರು. ಉಚ್ಚ ನ್ಯಾಯಾಲಯದ ಉತ್ತರ ಕನ್ನಡದ ಆಡಳಿತಾತ್ಮಕ ನ್ಯಾಯಾಧೀಶ ಎಚ್‌.ಟಿ. ನರೇಂದ್ರಪ್ರಸಾದ ಕಾರ್ಯಕ್ರಮ ಉದ್ಘಾಟಿಸಿದರು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಜೋಶಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಎಸ್‌. ವಿಜಯಕುಮಾರ, ಹಿರಿಯ ವಕೀಲ ಪದ್ಮನಾಭ ಪ್ರಸಾದ, ಅಖಿಲ ಭಾರತ ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆಸಿಫ್‌ ಅಲಿ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಎನ್‌. ಕೋಟೇಶ್ವರ ರಾವ ಅಧ್ಯಕ್ಷತೆ ವಹಿಸಿದ್ದರು.

ಅಂಕೋಲಾದಲ್ಲಿ ನಡೆದ 13ನೇ ರಾಜ್ಯ ನೋಟರಿಗಳ ಸಮ್ಮೇಳನ

ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ನಾಗಾನಂದ ಬಂಟ ಸ್ವಾಗತಿಸಿದರು. ಸುರೇಶ ಬಾಬು ಪ್ರಾಸ್ತಾವಿಕ ಮಾತನಾಡಿದರು, ಬಾಲಚಂದ್ರ ನಾಯಕ, ವೀಣಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶೀತಲ್‌ ಆಗೇರ ಪ್ರಾರ್ಥಿಸಿದರು. ಪುನೀತ್‌ ನಾಯ್ಕ ಯಕ್ಷನೃತ್ಯ ಪ್ರದರ್ಶಿಸಿದರು.

ಸಮಾಜದಲ್ಲಿ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಶೇಷ್ಠವಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯ ಆಗದ ರೀತಿಯಲ್ಲಿ ಕೆಲಸ ಮಾಡುವ ಅಗತ್ಯತೆ ಇದೆ. ನೋಟರಿಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು.

ರೂಪಾಲಿ ನಾಯ್ಕ, ಶಾಸಕಿ

ಮುಂದಿನ ಡಿಜಿಟಲ್‌ ಯುಗದಲ್ಲಿ ನೋಟರಿಗಳ ಕಾರ್ಯವ್ಯಾಪ್ತಿ ಯಾವ ರೀತಿಯಲ್ಲಿ ಸಾಗಲಿದೆ? ಮುಂದುವರಿಯುತ್ತಿರುವ ತಂತ್ರಜ್ಞಾನದ ಜತೆ ಯಾವ ರೀತಿಯಲ್ಲಿ ಸಾಗಬೇಕಿದೆ ಎಂಬ ವಿಚಾರಗಳ ಜತೆಗೆ ನಂಬಿಕೆಗಳನ್ನು ಗಟ್ಟಿಗೊಳಿಸುವ ಅಗತ್ಯತೆಗಳ ಕುರಿತು ಚರ್ಚೆಗಳು ಸಮ್ಮೇಳನಗಳಲ್ಲಿ ನಡೆಯಲಿ.

ಚಂದ್ರಶೇಖರ ಜೋಶಿ, ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ

Latest Videos
Follow Us:
Download App:
  • android
  • ios