ಮೈಸೂರು(ಡಿ.24): ಕಳಪೆ ಸೋಫಾ ನೀಡಿದ್ದಕ್ಕೆ ಫರ್ನೀಚರ್ ಶಾಪ್‌ ವಿರುದ್ಧ ದೂರು ದಾಖಲಿಸಿದ ವ್ಯಕ್ತಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಇದೀಗ ಅಂಗಡಿ ಮಾಲೀಕರು ದಂಡ ತೆರುವಂತೆ ನ್ಯಾಯಾಲಯ ತಿಳಿಸಿದೆ.

ನಗರದ ಕಾಳಿದಾಸ ರಸ್ತೆಯ ಎಎನ್‌ಸಿಸಿ ಡೆಕೋರ್‌ ಫರ್ನಿಚರ್‌ ಶಾಪ್‌ ಕಳಪೆ ಗುಣಮಟ್ಟದ ಸೋಫಾಸೆಟ್‌ ನೀಡಿದ ಕಾರಣಕ್ಕೆ ಜಿಲ್ಲಾ ಗ್ರಾಹಕರ ನ್ಯಾಯಾಲಯವು 34 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

'ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದ್ರೆ ನೆಮ್ಮದಿಯಿಂದ ಇರ್ತೀವಿ'..!

ಸಾಫ್ಟ್‌ವೇರ್‌ ಎಂಜಿನಿಯರ್‌ ಎಚ್‌.ಡಿ. ಉಮಾಶಂಕರ್‌ ಅವರು ಸೋಫಾಸೆಟ್‌ ಖರೀದಿಸಿದ್ದರು. ಈ ವೇಳೆ ಉತ್ತಮ ಗುಣಮಟ್ಟದ ಸೋಫಾಸೆಟ್‌ ಎಂಬುದಾಗಿ ಭರವಸೆ ನೀಡಿ, ಅಸಲಿ ಬಿಲ್‌ ಮತ್ತು ವಾರೆಂಟಿ ಕಾರ್ಡ್‌ ನೀಡಿರಲಿಲ್ಲ. ಈ ಸಂಬಂಧ ಅಂಗಡಿಯವರು ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಮತ್ತು ನಷ್ಟಕ್ಕೋಸ್ಕರ ದೂರುದಾರ ಉಮಾಶಂಕರ್‌ ಅವರು ದಾವೆ ಹೂಡಿದ್ದರು.

ನ್ಯಾಯವಾದಿ ವಿಶ್ವನಾಥ್‌ ದೇವಶ್ಯ ಅವರ ಮೂಲಕ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯ ಎದುರುದಾರರಿಗೆ 34 ಸಾವಿರ ಪರಿಹಾರ ಮತ್ತು ನ್ಯಾಯಾಲಯ ವೆಚ್ಚ 20 ಸಾವಿರವನ್ನು ಒಂದು ತಿಂಗಳ ಒಳಗಾಗಿ ನೀಡಬೇಕೆಂದು ಆದೇಶಿಸಿದ್ದಾರೆ.

'ಕಾಂಗ್ರೆಸ್‌ ಸರ್ಕಾರದ ರಾಜ್ಯಗಳಲ್ಲೇಕೆ ಗಲಭೆ ಇಲ್ಲ..'?