ಕಲಬುರಗಿ, [ಜೂನ್.04]: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ.

ಅಡೆಮ್ಮಾ [30], ಶಂಕರ್ ಮ್ಯಾಕೇರಿ [40] ಕೊಲೆಯಾದವರು. ಅಡೆಮ್ಮಾ ಮತ್ತು ಶಂಕರ್ ಮ್ಯಾಕೇರಿ ಅನೈತಿಕ ಸಂಬಂಧ ಹೊಂದಿದ್ದರು. ಇಂದು [ಮಂಗಳವಾರ] ಇಬ್ಬರು ಕೋಣೆಯಲ್ಲಿ ಸಿಕ್ಕಿಬಿದ್ದಾಗ ಅಡೆಮ್ಮಾ ಸಂಬಂಧಿಗಳು ಕೊಲೆ ಮಾಡಿದ್ದಾರೆ.

ಶಂಕರ್ ಮ್ಯಾಕೇರಿ ಅಡೆಮ್ಮಾ ಮನೆಗೆ ಹೋಗಿದ್ದಾನೆ. ಈ ವಿಷಯ ವಿಷಯ ತಿಳಿದ ಅಡೆಮ್ಮಾ ಸಂಬಂಧಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.