ಗುಂಡ್ಲುಪೇಟೆ (ಆ.26):   ಮಕ್ಕಳಾಗಲಿಲ್ಲ ಎಂಬ ಕೋಪಕ್ಕೆ ದಂಪತಿ ನೆರೆ ಮನೆಯ 5 ವರ್ಷದ ಹೆಣ್ಣು ಮಗುವನ್ನು ನೀರಿನ ಸಂಪಿನಲ್ಲಿ ಮುಳುಗಿಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ.

"

ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ, ಗೌರಮ್ಮ ದಂಪತಿಯ 5 ವರ್ಷ ವಯಸ್ಸಿನ ಮಹಾಲಕ್ಷಿತ್ರ್ಮಯನ್ನು ಅದೇ ಬೀದಿಯ ಮಹೇಶ್‌ ಹಾಗೂ ರತ್ನಮ್ಮ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಮಹದೇವಸ್ವಾಮಿ ಸೋಮವಾರ ರಾತ್ರಿ ತೆರಕಣಾಂಬಿ ಠಾಣೆಗೆ ತೆರಳಿ ನನ್ನ ಮಗಳಾದ ಮಹಾಲಕ್ಷಿತ್ರ್ಮೕ ಕಾಣಿಸುತ್ತಿಲ್ಲ ಎಂದು ದೂರು ನೀಡಿದ ಬೆನ್ನಲ್ಲೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಗಂಭೀರವಾಗಿ ಪರಿಗಣಿಸಿದರು.

ಎಸ್ಪಿ ಖಡಕ್‌ ಸೂಚನೆ: ಎಸ್ಪಿ ದಿವ್ಯಾ ಸಾರಾ ಥಾಮಸ್‌, ಹೆಣ್ಣು ಮಗುವಿನ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಿ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ. ಮಹದೇವಸ್ವಾಮಿಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಮಹದೇವಸ್ವಾಮಿ ಸಮಯ ಪ್ರಜ್ಞೆಯಿಂದ ಗೌರಮ್ಮ ಮೊದಲ ಪತಿ ಮಹೇಶ್‌ ಮನೆಗೆ ತೆರಳಿ ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ: ಫ್ರೂಟ್ ಇರ್ಫಾನ್ ಕೊಲೆ, ಬಾಂಬೆ ಶೂಟರ್ಸ್ ಅರೆಸ್ಟ್...

ಮಹೇಶ್‌ ಮನೆಗೆ ತೆರಳಿದ ಪೊಲೀಸರು ಮನೆಯಲ್ಲಿ ಜಾಲಾಡಿದರು. ದೇವರ ಕೊಣೆಯಲ್ಲಿ ಚೀಲ ಇರುವುದನ್ನು ಗಮನಿಸಿ ಚೀಲದಲ್ಲಿ ಏನಿದೆ ಎಂದು ಪ್ರಶ್ನಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಪೊಲೀಸರ ಒತ್ತಡಕ್ಕೆ ಮಣಿದ ಮಹೇಶ್‌ ಹಾಗೂ ರತ್ಮಮ್ಮ ದಂಪತಿ ಚೀಲ ಬಿಚ್ಚಿದಾಗ ಮಹಾಲಕ್ಷಿತ್ರ್ಮೕಯ ಶವ ದೊರೆತಿದೆ. ನಂತರ ಪೊಲೀಸರ ಬೆತ್ತದ ರುಚಿ ಸವಿದ ದಂಪತಿ ಕೊಲೆ ರಹಸ್ಯ ಹೇಳಿದ್ದಾರೆ.

ಪೊಲೀಸರು ಸಮಯಪ್ರಜ್ಞೆಯಿಂದ ಆರೋಪಿಗಳು ಮಂಗಳವಾರ ಮುಂಜಾನೆ ದೇವರ ಕೊಣೆಯಲ್ಲಿದ್ದ ಶವದ ಚೀಲ ಸಮೇತ ಜಮೀನಿನಲ್ಲಿ ಹೂತು ಹಾಕುತ್ತಿದ್ದೆವು ಎಂದು ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ?

ಮಹದೇವಸ್ವಾಮಿ ಪತ್ನಿ ಗೌರಮ್ಮ ಹತ್ತು ವರ್ಷದ ಹಿಂದೆ ಕೊಲೆ ಆರೋಪಿ ಮಹೇಶ್‌ ಜೊತೆ ಮದುವೆಯಾಗಿತ್ತು. ನಂತರ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು ಎನ್ನಲಾಗಿದೆ.

ಗೌರಮ್ಮ ಬಿಟ್ಟಬಳಿಕ ಮಹೇಶ್‌ ರತ್ನಮ್ಮನ ಜೊತೆ ಮತ್ತೊಂದು ಮದುವೆಯಾದ ಬಳಿಕ ಮಕ್ಕಳು ಆಗಿರಲಿಲ್ಲ. ನಮಗೆ ಮಕ್ಕಳಾಗಲಿಲ್ಲ ಎಂಬ ನಿರಾಶೆ ಹಾಗೂ ಕೋಪದಲ್ಲಿ ಮಗು ಕೊಂದಿದ್ದಾರೆ. ಈ ಸಂಬಂಧ ತೆರಕಣಾಂಬಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಾದ ಮಹೇಶ್‌ ಹಾಗೂ ರತ್ನಮ್ಮ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಾಬಾಗೆ ನುಗ್ಗಿ ತಾಯಿ ಮಗನ ಮೇಲೆ ರೌಡಿಗಳಿಂದ ಮಾರಣಾಂತಿಕ ಹಲ್ಲೆ!...

ಪೊಲೀಸರ ಕ್ರಮಕ್ಕೆ ಎಸ್ಪಿ ಮೆಚ್ಚುಗೆ

ಕೊಲೆ ನಡೆದ ಕೆಲವೇ ತಾಸಿನಲ್ಲಿ ಕೊಲೆ ಪ್ರಕರಣ ಬೇಧಿಸಿ ಸಮಯಪ್ರಜ್ಞೆ ಮೆರೆದ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಮಹದೇವಸ್ವಾಮಿ ಹಾಗೂ ತಂಡಕ್ಕೆ ಎಸ್ಪಿ ದಿವ್ಯಾ ಸಾರಾ ಥಾಮಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರ ರಾತ್ರಿಯೇ ಎಸ್ಪಿ ದಿವ್ಯಾ ಸಾರಾ ಥಾಮಸ್‌,ಎಎಸ್ಪಿ ಅನಿತಾ ಹದ್ದಣ್ಣನವರ್‌,ಡಿವೈಎಸ್ಪಿ ಮೋಹನ್‌ ಭೇಟಿ ನೀಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಮಕ್ಕಳಾಗಲಿಲ್ಲ ಎಂದು ಹೆಣ್ಣು ಮಗುವನ್ನು ಕೊಂದ ದಂಪತಿ ಆರೋಪಿಗಳಾದ ಮಹೇಶ್‌ ಹಾಗು ರತ್ನಮ್ಮ ಅವರನ್ನು ಬಂಧಿಸಲಾಗಿದೆ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಮಹದೇವಸ್ವಾಮಿ ತಿಳಿಸಿದ್ದಾರೆ.