ಬೆಂಗಳೂರು (ಏ.17):  ಮಕ್ಕಳೊಂದಿಗೆ ಹತ್ತಾರು ಕಾಲ ಬಾಳಿ ಬದುಕಬೇಕಿದ್ದ ದಂಪತಿ ಕೊರೋನಾ ಮಹಾಮಾರಿಗೆ ಬಲಿಯಾಗುವ ಮೂಲಕ ಬದುಕಿನ ಪಯಣವನ್ನು ಅರ್ಧಕ್ಕೆ ಮುಗಿಸಿದ ಕರುಣಾಜಕ ಘಟನೆಯೊಂದು ನಗರದಲ್ಲಿ ನಡೆದಿದೆ. 

ಯಲಹಂಕ ಮೂಲದ ದಂಪತಿ ಸಾವಿನಲ್ಲೂ ಜೊತೆಯಾಗಿದ್ದು, ಮನೆಗೆ ಆಧಾರಸ್ತಂಭವಾಗಿದ್ದ ದಂಪತಿ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ನ್ಯೂಮೋನಿಯಾದಿಂದ ಬಳಲುತ್ತಿದ್ದ ಈ ದಂಪತಿ ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

10 ಆಸ್ಪತ್ರೆ ಅಲೆದರೂ ಬೆಡ್‌ ಸಿಗದೆ ಸೋಂಕಿತ ಸಾವು : ದಾರುಣ ಘಟನೆ

 ಈ ವೇಳೆ ಕೊರೋನಾ ಪರೀಕ್ಷೆ ಮಾಡಿದಾಗ ಇಬ್ಬರೂ ಸೋಂಕು ದೃಢಪಟ್ಟಿದೆ. ಹೀಗಾಗಿ ಜೊತೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾರೆ. ಮೃತ ದಂಪತಿಗೆ ಓರ್ವ ಪುತ್ರಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈ ಪೈಕಿ ಓರ್ವ ಪುತ್ರನ ವಿವಾಹವಾಗಿದೆ. ಇದೀಗ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಶುಕ್ರವಾರ ಯಲಹಂಕದ ಪಾಲಿಕೆ ವಿದ್ಯುತ್‌ ಚಿತಾಗಾರದಲ್ಲಿ ಮೃತ ದಂಪತಿಯ ಅಂತ್ಯಕ್ರಿಯೆ ನೆರವೇರಿತು.

ಎರಡನೇ ಪುತ್ರ ಪಿಇಇ ಕಿಟ್‌ ಧರಿಸಿ ಮೃತದೇಹಗಳಿಗೆ ಶಾಸೊತ್ರೕಕ್ತವಾಗಿ ಪೂಜೆ ಸಲ್ಲಿಸಿದರು. ಈ ವೇಳೆ ಕುಟುಂಬದ ಸದಸ್ಯರ ಗೋಳಾಟ ನೋಡಿದವರು ಮಮ್ಮಲ ಮರುಗಿದರು.