Asianet Suvarna News Asianet Suvarna News

ಕೂಲಿ ಕೊಡುವುದಾಗಿ ಕರೆಸಿ ನಡುರಸ್ತೆಯಲ್ಲಿಯೇ ದಂಪತಿಗೆ ಥಳಿತ

ಕೂಲಿ ಕೊಡೋದಾಗಿ ಕರೆಸಿ ದಂಪತಿಗೆ ನಡು ರಸ್ತೆಯಲ್ಲಿಯೇ ಮನ ಬಂದಂತೆ ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Couple Beaten By Relatives In public Place Chikkamagalur
Author
Bengaluru, First Published Jan 9, 2020, 2:49 PM IST
  • Facebook
  • Twitter
  • Whatsapp

ಚಿಕ್ಕಮಗಳೂರು [ಜ.09]: ಹಣದ ವಿಚಾರಕ್ಕೆ ನಡುರಸ್ತೆಯಲ್ಲಿಯೇ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು ನಗರದ ಹೌಸಿಂಗ್  ಬೋರ್ಡ್ ಬಳಿಯಲ್ಲಿ ಕೂಲಿ ಕೇಳಿದ್ದಕ್ಕೆ ಸಂಬಂಧಿಕರಿಂದಲೇ ದಂಪತಿಗೆ ನಡು ರಸ್ತೆಯಲ್ಲಿಯೇ ಮನ ಬಂದಂತೆ ಥಳಿಸಲಾಗಿದೆ. 

ಕೂಲಿ ನೀಡುವುದಾಗಿ ವೆಂಖಟೇಶ್ - ಸುಧಾ ದಂಪತಿಯನ್ನು ಕರೆಸಿಕೊಂಡು ಸಂಬಂಧಿಕರು ಮನ ಬಂದಂತೆ ಥಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧರ್ಮ ಎಂಬುವರ ಹಂದಿ ಫಾರ್ಮ್ ನಲ್ಲಿ ದಂಪತಿ ಕಾರ್ಯ ನಿರ್ವಹಿಸುತ್ತಿದ್ದು, ವೆಂಕಟೇಶ್ ಸಂಬಂಧಿಯಾದ ಧರ್ಮರಿಂದ ಹಲ್ಲೆ ನಡೆದಿದ್ದಾಗಿ ಆರೋಪಿಸಲಾಗಿದೆ. 

ಯುವತಿ ಜೊತೆ ಲವ್ವಿ ಡವ್ವಿ : ಫೋಟೊ ವೈರಲ್ ಆಗುತ್ತಿದ್ದಂತೆ ಚರ್ಚ್ ಬಿಟ್ಟು ಓಡಿದ ಫಾದರ್...

ಹಲ್ಲೆಗೊಳಗಾದ ದಂಪತಿ ವೆಂಕಟೇಶ್ ಹಾಗೂ ಸುಧಾ ದಂಪತಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸದ್ಯ ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios