ಮುಳಬಾಗಿಲು(ಮೆ 19): ಆಹಾರದ ಕಿಟ್‌ಗಳನ್ನು ಹಂಚುವ ವಿಚಾರದಲ್ಲಿ ಜೆಡಿಎಸ್‌ ನಗರಸಭಾ ಸದಸ್ಯ ನಾಗರಾಜ್‌ ಮತ್ತು ಜೆಡಿಎಸ್‌ ಪಕ್ಷದ ಮತ್ತೊಂದು ಬಣದ ನಡುವೆ ನಡೆದ ಗಲಾಟೆಯಲ್ಲಿ ಮಚ್ಚಿನಿಂದ ನಾಗರಾಜ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಥಳೀಯ ಜೆಡಿಎಸ್‌ನಲ್ಲಿ ಮೊದಲಿನಿಂದಲೂ ಹಿಡಿತ ಸಾಧಿಸಲು ಎರಡು ಬಣಗಳ ನಡುವೆ ಒಳಗೊಳಗೆ ನಡೆಯುತ್ತಿದ್ದ ಸಣ್ಣ ಪ್ರಮಾಣದ ಗಲಾಟೆಗಳಿಗೆ ಭಾನುವಾರ ತಡರಾತ್ರಿ ಸ್ಫೋಟಗೊಂಡಿತು. ನಗರಸಭೆ ಸದಸ್ಯ ನಾಗರಾಜ್‌ ಮತ್ತು ಮತ್ತೋಂದು ಬಣದ ಚಂದ್ರು, ಗಂಗಾಧರ್‌ ನಡುವೆ ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತು. ನಗರಸಭೆ ಸದಸ್ಯ ನಾಗರಾಜ್‌ಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು ಹಲ್ಲೆಗೊಳಗಾದ ನಾಗರಾಜರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಕ್‌ಡೌನ್‌ನಲ್ಲಿ ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ..!

ಗಲಾಟೆ ಹಿನ್ನೆಲೆ: ಆಹಾರದ ಕಿಟ್‌ಗಳನ್ನು ಹಂಚುವ ವಿಚಾರದಲ್ಲಿ ನಗರಸಭೆ ಸದಸ್ಯ ನಾಗರಾಜ್‌ ಗುಂಪು ಕಟ್ಟಿಕೊಂಡು ಮುಂದಾಳತ್ವ ವಹಿಸಿಕೊಂಡಿದ್ದರೆಂದು ಮತ್ತೊಂದು ಬಣದವರು ಆರೋಪಿಸಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.