ಬೆಳಗಾವಿ: ನಾಲ್ಕೂವರೆ ವರ್ಷದ ಮಗುವಿಗೆ ಕೊರೋನಾ ವೈರಸ್ ಶಂಕೆ!
ನಾಲ್ಕೂವರೆ ವರ್ಷದ ಮಗುವಿಗೆ ಕೊರೋನಾ ವೈರಸ್ ಶಂಕೆ| ವಿದೇಶದಿಂದ ಬೆಳಗವಿ ಆಗಮಿಸಿದ್ದ ದಂಪತಿ, ಪುತ್ರಿ|ಈವರೆಗೂ ಬೆಳಗಾವಿಯ ಆರು ಜನರ ರಕ್ತ ಹಾಗೂ ಗಂಟಲು ದ್ರವವನ್ನ ಶಿವಮೊಗ್ಗ, ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ|
ಬೆಳಗಾವಿ[ಮಾ.22]: ನಾಲ್ಕೂವರೆ ವರ್ಷದ ಮಗುವಿಗೆ ಕೊರೋನಾ ವೈರಸ್ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಗುವಿನ ರಕ್ತ ಹಾಗೂ ಗಂಟಲು ದ್ರವವನ್ನ ಲ್ಯಾಬ್ ಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದ್ದಾರೆ.
ಇಂದು[ಭಾನುವಾರ] ಈ ಕುರಿತು ಮಾಹಿತಿ ನೀಡಿದ ಅವರು, ಬೆಳಗಾವಿ ಮೂಲದ ದಂಪತಿ ಹಾಗೂ ಮಗು ವಿದೇಶದಿಂದ ಆಗಮಿಸಿದ್ದರು. ಇವರ ಪೈಕಿ ನಾಲ್ಕೂವರೆ ವರ್ಷದ ಮಗುವಿಗೆ ಕೊರೋನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಗುವಿನ ಥ್ರೋಟ್ ಸ್ವ್ಯಾಬ್ ಪರೀಕ್ಷೆಗೆ ರವಾನೆ ಮಾಡಲಾಗಿದೆ. ದಂಪತಿ, ಪುತ್ರಿ ಸದ್ಯ ಹೋಮ್ ಐಸೊಲೇಷನ್ ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಮೊದಲ ಬಾರಿ ತಮಗೇ ತಾವು ಕರ್ಫ್ಯೂ ಹಾಕಿಕೊಂಡ ಜನ, ಫೋಟೋಗಳಲ್ಲಿ ನೋಡಿ ಬಂದ್ ಸ್ಥಿತಿ!
ಈವರೆಗೂ ಬೆಳಗಾವಿಯ ಆರು ಜನರ ರಕ್ತ ಹಾಗೂ ಗಂಟಲು ದ್ರವವನ್ನ ಶಿವಮೊಗ್ಗ ಹಾಗೂ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ನಾಳೆಯವರೆಗೆ ವರದಿ ಬರುವ ನಿರೀಕ್ಷೆ ಇದ್ದು,ಇಲ್ಲಿಯವರೆಗೆ ಬೆಳಗಾವಿ ಜಿಲ್ಲೆಗೆ ವಿದೇಶಗಳಿಂದ ಬಂದ 229 ಜನರ ಮೇಲೆ ತೀವ್ರ ನಿಗಾ 192 ಜನರಿಗೆ 14 ದಿನಗಳ ಹೋಮ್ ಐಸೋಲೇಷನ್, ಇಬ್ಬರು ಶಂಕಿತರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯ ಐಸೋಲೆಟೆಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ ಮೂವರಿಗೆ 28 ದಿನಗಳ ಹೋಮ್ ಐಸೊಲೇಷನ್ ಕಂಪ್ಲೀಟ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.