ಮೊದಲ ಬಾರಿ ತಮಗೇ ತಾವು ಕರ್ಫ್ಯೂ ಹಾಕಿಕೊಂಡ ಜನ, ಫೋಟೋಗಳಲ್ಲಿ ನೋಡಿ ಬಂದ್ ಸ್ಥಿತಿ!
ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮೇರೆಗೆ ಇಂದು ಅಂದರೆ ಮಾರ್ಚ್ 22 ರಂದು ಬೆಳಗ್ಗೆ ಏಳು ಗಂಟೆಯಿಂದ ಜನತಾ ಕರ್ಫ್ಯೂ ಹೇರಲಾಗಿದೆ. ಈ ನಿಟ್ಟಿನಲ್ಲಿ ರಾತ್ರಿ 9 ಗಂಟೆವರೆಗೆ ಜನರು ತಮ್ಮ ಮನೆಗಳಲ್ಲೇ ಉಳಿದುಕೊಳ್ಳಲಿದ್ದಾರೆ. ಅಲ್ಲದೇ ಸಂಜೆ 5 ಗಂಟೆಗೆ ತಮ್ಮ ಮನೆ ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ, ಗಂಟೆ ಬಾರಿಸಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಹಾಗೂ ಮಾಧ್ಯಮ ಸಿಬಬ್ಬಂದಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ. ಇನ್ನು ಪಿಎಂ ಮೋದಿಯ ಈ ಮನವಿ ಯಶಸ್ವಿಯಾಗಿಸಲು ಅನೆಕ ರಾಜ್ಯಗಳು ಅಡ್ವಯ್ಸರಿ ಜಾರಿಗೊಳಿಸಿದ್ದರೆ, ಇನ್ನು ಕೆಲವೆಡೆ ಜನರೇ ಖುದ್ದು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿವೆ ನೋಡಿ ದೇಶದ ವಿವಿಧ ಕಡೆ ಕಂಡು ಬಂದ ದೃಶ್ಯಗಳು
ಜನತಾ ಕರ್ಫ್ಯೂನಿಂದಾಗಿ ಎಲ್ಲೆಡೆ ಮೌನ ಮನೆ ಮಾಡಿದೆ. ಹೀಗಿರುವಾಗ ರೈಲು ನಿಲ್ದಾಣವೊಂದರಲ್ಲಿ ಕಂಡು ಬಂದ ದೃಶ್ಯ.
ಕೊರೋನಾದಿಂದಾಗಿ ಸರಿಸುಮಾರು ಎಲ್ಲಾ ಸ್ಥಳಗಳನ್ನು ಲಾಕ್ ಡಡೌನ್ ಮಾಡಲಾಗಿದೆ. ದೆಹಲಿ ಸರ್ಕಾರ ಪ್ರವಾಸೀ ಸ್ಥಳಗಳನ್ನೂ ಬಂದ್ ಮಾಡಿದೆ. ಜನತಾ ಕರ್ಫ್ಯೂ ದಿನ ಯಾವೊಬ್ಬ ವ್ಯಕ್ತಿಯೂ ಕಂಡು ಬಂದಿಲ್ಲ.
ಕರ್ಫ್ಯೂನಿಂದಾಗಿ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿವೆ. ಜನರು ಕೊರೋನಾ ನಿಯಂತ್ರಿಸುವ ನಿಟ್ಟಿನಲಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ದೆಹಲಿಯ ಅತ್ಯಂತ ಜನಸಂದಣಿಯಿಂದ ಕೂಡಿರುತ್ತಿದ್ದ ರಸ್ತೆ ಖಾಲಿ ಖಾಲಿಯಾಗಿದೆ.
ಇದೇ ಕಾರಣದಿಂದ ಚರ್ಚ್ ಗಳಲ್ಲೂ ಇಂದು ಪೂಜೆ, ಪ್ರಾರ್ಥನೆ ಸ್ಥಗಿತಗೊಳಿಸಲಾಗಿದ್ದು, ಜನರಲ್ಲಿ ಆಗಮಿಸದಂತೆ ಮನವಿ ಮಾಡಲಾಗಿದೆ. ಗೋವಾದ ಚರ್ಚ್ ಒಂದರ ದೃಶ್ಯ.
ಜನತಾ ಕರ್ಫ್ಯೂನಿಂದಾಗಿ ನಿರ್ಜನ ವಾತಾವರಣವಿದೆ. ಇಲ್ಲವಾದಲ್ಲಿ ದೆಹಲಿಯ ಈ ಜಮಾ ಮಸೀದಿ ಜನರಿಂದ ತುಂಬಿ ತುಳುಕಾಡುತ್ತಿತ್ತು.
ಪಿಎಂ ಮೋದದಿ ಮನವಿ ಬೆನ್ನಲ್ಲೇ ಭಾರತೀಯ ರೈಲ್ವೇ ಇಲಾಖೆಯೂ ರೈಲು ಓಡಿಸದಿರಲು ನಿರ್ರಧರಿಸಿದೆ. ಹೀಗಾಗಿ ರೈಲು ನಿಲ್ದಾಣ ಜನರಿಲ್ಲದೇ ಬಿಕೋ ಎನಿಸಿದೆ.
ಮುಂಬೈನ ಲೋಕಲ್ ರೈಲು ನಿಲ್ದಾಣ ಜನರಿಂದ ತುಂಬಿರುತ್ತದೆ. ಆದರೆ ಇಲ್ಲಿ ಇಲ್ಲೂ ಜನರಿಲ್ಲದೆ ಖಾಲಿ ಖಾಲಿಯಾಗಿದೆ.
ದೇಶದ ಬಹುತೇಕ ಎಲ್ಲಾ ರಸ್ತೆ, ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಹೀಗಿರುವಾಗ ಅಂಗಡಿಯಯೊಂದರ ಹೊರಗೆ ಆರಾಮಾಗಿ ಕುಳಿತುಕೊಂಡು ನಿದ್ದೆದೂಗುತ್ತಿರುವ ವ್ಯಕ್ತಿ.
ಇಂದು ಅನೇಕ ಮಂದಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಆಗೊಬ್ಬ, ಈಗೊಬ್ಬ ಎಂದು ಆಗಮಿಸುವವರಲ್ಲೂ ಪೊಲೀಸರು ಹೊರ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಪೊಲೀಸರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಹೊರಗೆ ಬರುತ್ತಿರುವ ಜನರಿಗೆ ಗುಲಾಬಿ ಹೂವು ನೀಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಜನರಿಂದ ತುಂಬಿರುತ್ತಿದ್ದ ಮಹಾರಾಷ್ಟ್ರದ ನಾಗ್ಪುರದ ಈ ರಸ್ತೆ ಮರಳುಗಾಡಿನಂತೆ ಕಂಡು ಬಂದಿದೆ. ಇನ್ನು ಜನರು ಖುದ್ದು ತಮ್ಮ ಮೇಲೆ ತಾವೇ ಕರ್ಫ್ಯೂ ಹೇರಿಕೊಂಡಿದ್ದು ಭಾರತದಲ್ಲಿ ಇದೇ ಮೊದಲು.
ಕೇರಳದ ಸಮುದ್ರ ತಟದ ಈ ದೃಶ್ಯ ಕರ್ಫ್ಯೂ ಬಳಿಕದ ಸ್ಥಿತಿ ವರ್ಣಿಸುತ್ತವೆ. ಜನತಾ ಕರ್ಫ್ಯೂನಿಂದಾಗಿ ಜನರು ಅನಾವಶ್ಯಕವಾಗಿ ಮನೆಯಿ<ದ ಹೊರ ಬರುತ್ತಿಲ್ಲ.
ಸಿಕ್ಕೀಂನ ಈ ಚಿತ್ರ ಕೊರೋನಾ ವಿರುದ್ಧದ ಸಮರದಲ್ಲಿ ಎಲ್ಲರೂ ಒಗ್ಗಟ್ಟಿನಿಂದಿದ್ದೇವೆ ಎಂಬುವುದನ್ನು ಸಾರಿ ಹೇಳುತ್ತದೆ. ಪರಸ್ಪರ ದೂರವಿರುವುದರಿಂದಷ್ಟೇ ಈ ಮಾರಕ ರೋಗವನ್ನು ದೂರ ಓಡಿಸಬಹುದು ಎಂದು ಇದು ತಿಳಿಸಿಕೊಟ್ಟಿದೆ.
ಜನತಾ ಕರ್ಫ್ಯೂ ಪರಿಣಾಮ ಜಮ್ಮು ಕಾಶ್ಮೀರದಲ್ಲೂ ಕಂಡು ಬಂದಿದೆ.
ಮುಂಬೈ ಸಮುದ್ರ ತೀರದ ದೃಶ್ಯ.
ದೆಹಲಿಯ ರಸ್ತೆಗಳಲ್ಲಿ ಯಾವತ್ತೂ ಜನರು ಕಂಡು ಬರುತ್ತಿದ್ದರು, ಆದರೆ ಇಂದು ಇಲ್ಲೆಲ್ಲಾ ಪಕ್ಷಗಳದ್ದೇ ಸಾಮ್ರಾಜ್ಯ.