ಒಂದೇ ಕುಟುಂಬದ ಐವರಿಗೆ ಕೊರೋನಾ ಸೋಂಕು: ಮನೆಯಲ್ಲಿಯೇ ಕ್ವಾರಂಟೈನ್
ತಮಿಳುನಾಡಿನಿಂದ ಬಂದಿದ್ದ ವ್ಯಕ್ತಿಯಿಂದ ಸೋಂಕು| ಬಿಟಿಎಂ ಲೇಔಟ್ 2ನೇ ಹಂತದ ವೈಶ್ಯಬ್ಯಾಂಕ್ ಕಾಲೋನಿಯ ಕುಟುಂಬವೊಂದರ ಐದು ಮಂದಿಗೆ ಸೋಂಕು| ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಕೋವಿಡ್ ಪರೀಕ್ಷೆ|
ಬೆಂಗಳೂರು(ಮಾ.14): ನಗರದ ಬಿಟಿಎಂ ಲೇಔಟ್‌ನಲ್ಲಿ ಒಂದೇ ಮನೆಯ ಐದು ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿಟಿಎಂ ಲೇಔಟ್ 2ನೇ ಹಂತದ ವೈಶ್ಯಬ್ಯಾಂಕ್ ಕಾಲೋನಿಯ ಕುಟುಂಬವೊಂದರ ಐದು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳು ಇರುವುದು ಪತ್ತೆಯಾಗಿದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದೆ. ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಮನೆಯ ಅಕ್ಕಪಕ್ಕದಲ್ಲಿ ರಾಸಾಯನಿಕದಿಂದ ಸ್ಯಾನಿಟೈಸ್‌ನಿಂದ ಸ್ವಚ್ಛಗೊಳಿಸಲಾಗಿದೆ.
ತಮಿಳುನಾಡಿನಿಂದ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರಿಂದ ಸೋಂಕು ಹರಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಡೀ ರಸ್ತೆಯ ಮನೆ, ಮನೆಗೆ ಭೇಟಿ ನೀಡಿ ಕೊರೋನಾ ಲಕ್ಷಣ ಇದ್ದವರನ್ನು ಪತ್ತೆ ಮಾಡುತ್ತಿದ್ದು, ಸೋಂಕಿತರಿರುವ ಮನೆಯ ಅಕ್ಕಪಕ್ಕದವರಿಗೆ ಎಚ್ಚರಿಕೆ ನೀಡಿದ್ದು, ತಪಾಸಣೆಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
8 ತಿಂಗಳ ಬಳಿಕ ಕೊರೋನಾ ಸೋಂಕಿತರ ಸಾವಿಗೆ ಬ್ರೇಕ್
23,519 ಮಂದಿಗೆ ಲಸಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಶನಿವಾರ 347 ಲಸಿಕಾ ಕೇಂದ್ರಗಳಲ್ಲಿ ಒಟ್ಟು 23,519 ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಪೈಕಿ 60 ವರ್ಷ ಮೇಲ್ಪಟ್ಟ 15,929 ಮಂದಿ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. 45 ವರ್ಷದಿಂದ 60 ವರ್ಷದೊಳಗಿನ 3,700 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ 1,775 ಮಂದಿ ಮೊದಲ ಮತ್ತು 1,127 ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೋವಿಡ್-19 ಮುಂಚೂಣಿ ಕಾರ್ಯಕರ್ತರಲ್ಲಿ 580 ಮಂದಿ ಮೊದಲ ಡೋಸ್ ಹಾಗೂ 408 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.