ಹುಬ್ಬಳ್ಳಿ(ಮೇ.08):ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೊರೊನಾ ಸೋಂಕಿತ ಗರ್ಭಿಣಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇಂದು(ಶುಕ್ರವಾರ) ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಸೋಂಕಿತ‌ ಮಹಿಳೆಯ ಆರೋಗ್ಯದಲ್ಲಿ ಸ್ಥಿರತೆ ತರಲು ವೈದ್ಯರ ಹರಸಾಹಸ ಪಡುತ್ತಿದ್ದಾರೆ. ಗರ್ಭಿಣಿಯ ದೇಹದಲ್ಲಿ ಸೋಡಿಯಂ, ಹಿಮೋಗ್ಲೋಬಿನ್ ಅಂಶಗಳು ಕುಸಿತವಾಗಿವೆ. ಗರ್ಭಿಣಿಗೆ ಗರ್ಭಪಾತ‌ ಮಾಡಿಸುವಂತೆಯೂ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಬಾದಾಮಿಗೂ ವಕ್ಕರಿಸಿದ ಮಹಾಮಾರಿ ಕೊರೋನಾ: ಆತಂಕದಲ್ಲಿ ಜನತೆ

ವೈದ್ಯರ ಹೇಳಿಕೆಯಿಂದ ಚೊಚ್ಚಲ ಹೆರಿಗೆ ನಿರೀಕ್ಷೆಯಲ್ಲಿದ್ದ  ಗರ್ಭಿಣಿಗೆ ಅಫಾತವಾಗಿದೆ. ಗರ್ಭಿಣಿಯ ತವರು ಮನೆ ಹಾಗೂ ಗಂಡನ ಮನೆಯವರನ್ನು ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆದರೂ ಕುಟುಂಬದವರ ಅಭಿಪ್ರಾಯ ಪಡೆದು ಗರ್ಭಪಾತ ಮಾಡಿಸಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ. ಐದು ತಿಂಗಳ ಗರ್ಭವನ್ನು ತೆಗೆದು ಹಾಕಲು ವೈದ್ಯರು ಸಿದ್ಧತೆ ನಡೆಸಿದ್ದಾರೆ.