Asianet Suvarna News Asianet Suvarna News

ಕೊರೋನಾ ಸೋಂಕಿತ ಲಾರಿ ಚಾಲಕನ ಟ್ರಾವೆಲ್‌ ಹಿಸ್ಟರಿಗೆ ಬೆಚ್ಚಿ ಬಿದ್ದ ಧಾರವಾಡ..!

ದಂಗುಬಡಿಸಿದ ಪಿ-1060 ಟ್ರಾವೆಲ್‌ ಹಿಸ್ಟರಿ| ಪುಣೆ, ಮುಂಬೈ, ಬೆಂಗಳೂರಲ್ಲೆಲ್ಲ ಸಂಚರಿಸಿದ್ದ ಮಾವಿನಹಣ್ಣಿನ ಲಾರಿ ಚಾಲಕ| ಈತನ ಟ್ರಾವೆಲ್‌ ಹಿಸ್ಟರಿ ಸಾಕಷ್ಟಿದ್ದು, ಈತ ಮೂರ್ನಾಲ್ಕು ಬಾರಿ ಮಹಾರಾಷ್ಟ್ರಕ್ಕೆ ಸಂಚಾರ| ಮಾವಿನಹಣ್ಣು ತೋಟದ ಮಾಲೀಕರು, ಅಲ್ಲಿನ ಕೆಲಸಗಾರರಲ್ಲಿ ಹೆಚ್ಚಿದ ಆತಂಕ| 

Coronavirus Positive Patient Travel Hitory Has Been Realeased in Dharwad
Author
Bengaluru, First Published May 17, 2020, 7:11 AM IST

ಹುಬ್ಬಳ್ಳಿ(ಮೇ.17): ಕೊರೋನಾ ದೃಢಪಟ್ಟಿರುವ ಮಾವಿನ ಹಣ್ಣಿನ ಲಾರಿಯ ಚಾಲಕ (ಪಿ-1060) ಟ್ರಾವೆಲ್‌ ಹಿಸ್ಟರಿ ವಿದ್ಯಾನಗರಿ ಧಾರವಾಡವನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಧಾರವಾಡ ತಾಲೂಕಿನ ತೇಗೂರು ಗ್ರಾಮ, ಬೆಂಗಳೂರು, ಮಹಾರಾಷ್ಟ್ರದ ಮುಂಬೈಗಳೆಲ್ಲ ಈತ ಸಂಚರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರು ಕೂಡಲೇ ಸ್ವಯಂ ಪರೀಕ್ಷೆಗೊಳಗಾಗಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಪಿ-1060 ಮಾ. 12ರಂದು ಧಾರವಾಡದಿಂದ ಮುಂಬೈಗೆ ಪ್ರಯಾಣಿಸಿದ್ದ. 8 ದಿನಗಳ ಕಾಲ ಸಿಬಿಡಿ ಬೇಲಪುರ, ಮುಂಬೈನಲ್ಲಿ ವಾಸವಾಗಿದ್ದ. ಅಲ್ಲಿಂದ ಲಾರಿ (ಕೆಎ-25, ಎಎ-0709) ಮೂಲಕ ಧಾರವಾಡಕ್ಕೆ ವಾಪಸಾಗಿದ್ದಾರೆ. ಮಾ. 22ರಂದು ಸ್ನೇಹಿತನೊಂದಿಗೆ ಧಾರವಾಡದಿಂದ ಹೊರಟು ಮಾ. 23ರಂದು ಮುಂಜಾನೆ 6.30ಕ್ಕೆ ಬೆಂಗಳೂರಿನ ಪೀಣ್ಯ ರೈಲ್ವೆ ನಿಲ್ದಾಣ ಹತ್ತಿರ ಲಾರಿ ಅನ್‌ಲೋಡ್‌ ಮಾಡಿಸಿದ್ದಾರೆ. ಅಲ್ಲಿಂದ ಸಂಜೆ 4 ಗಂಟೆಗೆ ಹೊರಟು ಮಾ. 24ರಂದು ಮುಂಜಾನೆ 6ಕ್ಕೆ ಧಾರವಾಡ ನಂತರ ಲಾಕ್‌ಡೌನ್‌ ಕಾರಣದಿಂದ ಏ. 28ರ ವರೆಗೆ ಹೊರಗಡೆ ಸಂಚರಿಸಿಲ್ಲ.

ಲಾಕ್‌ಡೌನ್‌: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿ​ದ್ದ​ವರು ಇಲ್ಲಿಂದರೂ ಕಾಲ್ಕಿತ್ತರು..!

ಏ. 29ರಂದು ಮಧ್ಯಾಹ್ನ 1ಕ್ಕೆ ತನ್ನ ಸ್ನೇಹಿತನೊಂದಿಗೆ ಸ್ವಂತ ವಾಹನದಲ್ಲಿ ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿನ ಮಾವಿನ ಫಾರ್ಮ್‌ಗೆ ತೆರಳಿ, ಅಲ್ಲಿ ಗುತ್ತಿಗೆದಾರರಿಂದ ಮಾವಿನ ಹಣ್ಣನ್ನು ಖರೀದಿಸಿದ್ದಾರೆ. ಬಳಿಕ ಅದೇ ದಿನ ಸಂಜೆ 4ಕ್ಕೆ ಅಲ್ಲಿಂದ ಹೊರಟು ಏ. 30ರಂದು ಬೆಳಗಿನ ಜಾವ 1.30ಕ್ಕೆ ಪುಣೆಯಲ್ಲಿನ ಹಣ್ಣಿನ ಮಾರುಕಟ್ಟೆಗೆ ತಲುಪಿದ್ದಾರೆ. ಮಾವಿನ ಹಣ್ಣನ್ನು ಇಳಿಸಿ ಸಂಜೆ 4ಕ್ಕೆ ಪುಣೆ ಹಣ್ಣಿನ ಮಾರುಕಟ್ಟೆಯಿಂದ ಹೊರಟು ತೇಗೂರ ಮಾವಿನ ಫಾರ್ಮ್‌ಗೆ ಏ. 31ರಂದು ಮುಂಜಾನೆ 2.30ಕ್ಕೆ ಹಿಂದಿರುಗಿದ್ದಾರೆ.

ಮೇ 1ರಂದು ತೇಗೂರ ಮಾವಿನ ಫಾರ್ಮ್‌ನಿಂದ ಮಾವಿನ ಹಣ್ಣಿನ ಲೋಡಿನೊಂದಿಗೆ ಸಂಜೆ 4ಕ್ಕೆ ಹೊರಟು, ಪುಣೆಯ ಹಣ್ಣಿನ ಮಾರುಕಟ್ಟೆಗೆ ಮೇ 2ರ ಬೆಳಗಿನ ಜಾವ 3ಕ್ಕೆ ತಲುಪಿದ್ದಾರೆ. ಅದೇ ದಿನ ಸಂಜೆ 4.30ಕ್ಕೆ ಅಲ್ಲಿಂದ ಹೊರಟು ತೇಗೂರನಲ್ಲಿನ ಇನ್ನೊಂದು ಮಾವಿನ ಫಾರ್ಮ್‌ಗೆ ತಲುಪಿ, ಮಾವಿನ ಹಣ್ಣನ್ನು ಖರೀದಿಸಿ, ಮತ್ತೆ ಸಂಜೆ 5ಕ್ಕೆ ಅಲ್ಲಿಂದ ಹೊರಟು ಮೇ 3ರಂದು ಬೆಳಗ್ಗೆ 5ಕ್ಕೆ ಮುಂಬೈನ ವಾಸಿಯಲ್ಲಿನ ಹಣ್ಣಿನ ಮಾರುಕಟ್ಟೆಗೆ ಹೋಗಿದ್ದಾರೆ. ಅಲ್ಲಿ ಅನ್‌ಲೋಡ್‌ ಮಾಡಿ ಅದೇ ದಿನ ಸಂಜೆ 7ಕ್ಕೆ ಅಲ್ಲಿಂದ ಹೊರಟು ಮೇ 4 ರಂದು ತೇಗೂರಿನಲ್ಲಿನ ಫಾಮ್‌ರ್‍ ಹೌಸ್‌ಗೆ ಹಿಂದಿರುಗಿದ್ದಾರೆ.

ಫಾಮ್‌ಹೌಸ್‌ನಲ್ಲೇ 3 ದಿನ ವಾಸವಿದ್ದರು. ಬಳಿಕ ಮೇ 7ರಂದು ಸಂಜೆ 4ಕ್ಕೆ ಅಲ್ಲಿಂದ ಹೊರಟು ಮೇ 8ಕ್ಕೆ ಮುಂಬೈನ ವಾಸಿಯಲ್ಲಿನ ಹಣ್ಣಿನ ಮಾರುಕಟ್ಟೆಗೆ ತಲುಪಿದ್ದಾರೆ. ಮೇ 9ರಂದು ಮಧ್ಯಾಹ್ನ 2ಕ್ಕೆ ಅಲ್ಲಿಂದ ಹೊರಟು ಮೇ 10ಕ್ಕೆ ತೇಗೂರಿನಲ್ಲಿರುವ ಫಾಮ್‌ರ್‍ಹೌಸ್‌ಗೆ ಮರಳಿದ್ದಾರೆ. ಒಂದು ದಿನ ಅಲ್ಲಿಯೇ ವಾಸವಿದ್ದರು. ಅಲ್ಲಿಂದ ಮೇ 12ರಂದು ಮುಂಜಾನೆ 9ಕ್ಕೆ ಹೊರಟು ಸ್ಥಳೀಯ ಸರ್ವಿಸ್‌ ಸ್ಟೇಶನ್‌ನಲ್ಲಿ ವೆಹಿಕಲ್‌ ವಾಶ್‌ ಮಾಡಿಸಿಕೊಂಡು ನೇರವಾಗಿ ಧಾರವಾಡದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದಾರೆ. ಅದೇ ದಿವಸ ಅವರನ್ನು ಕ್ವಾರಂಟೈನ್‌ಗೊಳಪಡಿಸಿ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ.

ಈ ವ್ಯಕ್ತಿಯನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಇದೆ. ಕಾರಣ ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೋನಾ ಸಹಾಯವಾಣಿ 1077ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು. ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಆತಂಕ

ಈತನ ಟ್ರಾವೆಲ್‌ ಹಿಸ್ಟರಿ ಸಾಕಷ್ಟಿದ್ದು, ಈತ ಮೂರ್ನಾಲ್ಕು ಬಾರಿ ಮಹಾರಾಷ್ಟ್ರಕ್ಕೆ ಸಂಚರಿಸಿದ್ದಾನೆ. ಹೀಗಾಗಿ ಮಾವಿನಹಣ್ಣು ತೋಟದ ಮಾಲೀಕರು, ಅಲ್ಲಿನ ಕೆಲಸಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಈ ಹಿಂದೆ ನವಲೂರಿನ ವ್ಯಕ್ತಿಗೆ ಕೊರೋನಾ ದೃಢಪಟ್ಟಿತ್ತು. ಆತನೂ ಈತನಂತೆಯೇ ಮಾವಿನಹಣ್ಣಿನ ಲಾರಿ ಚಾಲಕನಾಗಿದ್ದ. ಆತನೂ ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಸಂಚರಿಸಿದ್ದ. ಇದರಿಂದಾಗಿ ಮಾವಿನಹಣ್ಣು ವ್ಯಾಪಾರಿಗಳು, ತೋಟದ ಮಾಲೀಕರಲ್ಲಿ ಭಯ ಕಾಡಲು ಶುರುವಾಗಿದೆ.
 

Follow Us:
Download App:
  • android
  • ios