ಕೂಡ್ಲಿಗಿ(ಸೆ.17): ಕೊರೋನಾ ಸೋಂಕಿತ ವ್ಯಕಿ ಉಸಿರಾಟ ತೊಂದರೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಕೂಡ್ಲಿಗಿಯಿಂದ ಬಳ್ಳಾರಿಗೆ ಆಂಬ್ಯುಲೆನ್ಸನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೆ ಇಂದು ನಸುಕಿನ ಜಾವ ಮೃತಪಟ್ಟ ಘಟನೆ ಜರುಗಿದೆ. 

ಉಜ್ಜಿನಿ ಗ್ರಾಮದ ಸಿದ್ದಲಿಂಗಪ್ಪ (47) ಮೃತಪಟ್ಟ ವ್ಯಕ್ತಿ. ಈತನಿಗೆ ನಾಲ್ಕೈದು ದಿನದ ಹಿಂದಷ್ಟೇ ಕೊರೋನಾ ಸೋಂಕು ದೃಢಪಟ್ಟಿದ್ದು, ಹೃದಯ ಕಾಯಿಲೆ, ಮಧುಮೇಹದಿಂದ ಬಳಲುತ್ತಿದ್ದ. ಕಳೆದ ಎರಡು ದಿನದ ಹಿಂದೆ ಕೂಡ್ಲಿಗಿ ಕೋವಿಡ್‌ ವಾರ್ಡಿಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. 

ಹರಪನಹಳ್ಳಿ: ಕೂಲಿ ಮಾಡುವ ಹುಡುಗ ಈಗ ಪಿಎಸ್‌ಐ..!

ಮಂಗಳವಾರ ಮಧ್ಯರಾತ್ರಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿದ್ದಲಿಂಗಪ್ಪನನ್ನು ಆ್ಯಂಬುಲೆನ್ಸ್‌ನಲ್ಲಿ ಬಳ್ಳಾರಿಗೆಂದು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ರಾಂಪುರ ಸಮೀಪ ಮಾರ್ಗ ಮಧ್ಯದಲ್ಲೆ ಮೃತಪಟ್ಟಿದ್ದಾನೆ. ಶವವನ್ನು ವೈದ್ಯರ ಸಲಹೆ ಮೇರೆಗೆ ಕೂಡ್ಲಿಗಿಗೆ ವಾಪಸ್‌ ತಂದು ಶವಾಗಾರದಲ್ಲಿರಿಸಿ ಬುಧವಾರ ಬೆಳಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.