RMP ವೈದ್ಯನಿಗೂ ಕೊರೋನಾ ಭೀತಿ: ಆತಂಕದಲ್ಲಿ ಜನತೆ

ಆರ್‌ಎಂಪಿ ವೈದ್ಯ ಮತ್ತು ವೈದ್ಯ ಕುಟುಂಬಕ್ಕೂ ಕೊರೋನಾ ಭೀತಿ| ಮಾಡಲಗೇರಿ ಗ್ರಾಮದ ಆರ್‌ಎಂಪಿ ವೈದ್ಯನನ್ನು ಗದಗ ಜಿಮ್ಸ್‌ನಲ್ಲಿ ಕ್ವಾರಂಟೈನಲ್ಲಿ ಇಡಲಾಗಿದೆ| ವೈದ್ಯನ ಕುಟುಂಬಸ್ಥರಿಗೂ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್‌|  ವೈದ್ಯನ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು ವರದಿ ಬರುವುದು ಬಾಕಿ|

Coronavirus Panic to RMP Doctor in Ron in Gadag District

ರೋಣ(ಮೇ.09): ತಾಲೂಕಿನ ಕೃಷ್ಣಾಪುರ ಸಂಬಂಧಿತ ಪಿ. 607ರ ಮಹಿಳೆಗೆ ಕೊರೋನಾ ಪಾಸಿಟಿವ್‌ ಕಾಣಿಸಿಕೊಳ್ಳುತ್ತಿದ್ದಂತೆ ರೋಣ ತಾಲೂಕು ತಲ್ಲಣಗೊಂಡಿದ್ದು, ಮಾಡಲಗೇರಿ ಗ್ರಾಮದ ಆರ್‌ಎಂಪಿ ವೈದ್ಯ ಮತ್ತು ವೈದ್ಯ ಕುಟುಂಬಕ್ಕೂ ಭೀತಿ ಉಂಟುಮಾಡಿದೆ.

ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರ ಗ್ರಾಮಕ್ಕೆ ಸಮೀಪದಲ್ಲಿಯೇ ಇರುವ ಗದಗ ಜಿಲ್ಲೆಯ ಬಿ.ಎಸ್‌. ಬೇಲೇರಿ, ಬಸರಕೋಡ, ನೈನಾಪೂರ, ಹೊಳೆಆಲೂರ, ಅಮರಗೋಳ, ಹೊಳೆ ಹಡಗಲಿ, ಮಾಡಲಗೇರಿಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಗದಗ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹರಡುವ ಭೀತಿ: ಆತಂಕದಲ್ಲಿ ಜನತೆ..!

ಆಗಾಗ್ಗೆ ನೈನಾಪುರ ಮಾರ್ಗವಾಗಿ ಬಾದಾಮಿಯ ಡಾಣಕಶಿರೂರಗೆ ಜನರ ಆರೋಗ್ಯ ತಪಾಸಣೆ, ಚಿಕಿತ್ಸೆಗೆಂದು ತೆರಳುತ್ತಿದ್ದ ಮಾಡಲಗೇರಿ ಗ್ರಾಮದ ಆರ್‌ಎಂಪಿ ವೈದ್ಯನನ್ನು ಗದಗ ಜಿಮ್ಸ್‌ನಲ್ಲಿ ಕ್ವಾರಂಟೈನಲ್ಲಿ ಇಡಲಾಗಿದೆ. ವೈದ್ಯನ ಕುಟುಂಬಸ್ಥರನ್ನ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗಿದೆ. ಈಗಾಗಲೇ ವೈದ್ಯನ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು ವರದಿ ಬರುವುದು ಬಾಕಿ ಇದ್ದು, ಮಾಡಲಗೇರಿ, ಡಾಣಕಶಿರೂರ ಸುತ್ತಲಿನ ಗ್ರಾಮಸ್ಥರು ವರದಿಗಾಗಿ ಕಾಯುತ್ತಿದ್ದಾರೆ.

ಮಾಡಲಗೇರಿಗೂ ನಂಟು:

ಬಾದಾಮಿ ಪಟ್ಟಣದಲ್ಲಿನ (ಪಿ-680) ಯುವತಿಗೆ ಕೊರೋನಾ ದೃಢಪಟ್ಟಿದ್ದು, ಈ ಯುವತಿ ಮೂಲತಃ ತಾಲೂಕಿನ ಮಾಡಲಗೇರಿ ಗ್ರಾಮದವಳಾಗಿದ್ದು, ಬಾದಾಮಿಯಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಳು. ಮಾಡಲಗೇರಿಗೆ ಈಚೆಗೆ ತನ್ನ ತಂದೆಯೊಂದಿಗೆ ಬಂದು, ಬಳಿಕ ಬಾದಾಮಿಗೆ ಹೋಗಿರುವ ಕುರಿತು ಆರೋಗ್ಯ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಯುವತಿ ಕುಟುಂಬದ 4 ಜನರ ಗಂಟಲ ದ್ರವ ಸಂಗ್ರಹಿಸಿ, ಅವರನ್ನು ಗದಗ ಜಿಮ್ಸ್‌ನಲ್ಲಿ ಕ್ವಾರಂಟೈನ ಮಾಡಲಾಗಿದೆ. ಹೀಗೆ ರೋಣ ತಾಲೂಕು ಕಳೆದೊಂದು ವಾರದಿಂದ ಕೊರೋನಾ ಮಹಾಮಾರಿಗೆ ಬೆಚ್ಚಿ ಬಿದಿದ್ದು, ಯಾವಾಗ ಏನಾಗುತ್ತೋ ಎನ್ನುವ ಆತಂಕ ತಾಲೂಕಿನಾದ್ಯಂತ ಮನೆ ಮಾಡಿದೆ.
 

Latest Videos
Follow Us:
Download App:
  • android
  • ios